IPL 2023 Rule Change: ಇಂಡಿಯನ್ ಪ್ರೀಮಿಯರ್ ಲೀಗ್ ಅಂದರೆ ಐಪಿಎಲ್ 2023 ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಈ ಬಾರಿಯ ಐಪಿಎಲ್‌ನಲ್ಲಿ ಹಲವು ಬದಲಾವಣೆಗಳು ಕಾಣಲಿವೆ. ಈ ಮಧ್ಯೆ, ಐಪಿಎಲ್ 2023 ಕ್ಕೂ ಮೊದಲು, ಮತ್ತೊಂದು ದೊಡ್ಡ ಅಪ್‌ಡೇಟ್ ಹೊರಬಂದಿದೆ. ಈ ಲೀಗ್‌ನಲ್ಲಿ ಕ್ರಿಕೆಟ್’ನ ದೊಡ್ಡ ನಿಯಮವೇ ಬದಲಾಗಲಿದೆ. ಐಪಿಎಲ್‌ನ ಹೊಸ ನಿಯಮವು ಪ್ಲೇಯಿಂಗ್ XI ಆಗಿದೆ, ಈ ನಿಯಮದ ಬಗ್ಗೆ ತಿಳಿದುಕೊಂಡರೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ಆಶ್ಚರ್ಯ ಪಡುತ್ತಾನೆ.
ಇದನ್ನೂ ಓದಿ: Rohit Sharma-Virat Kohli: ಬೇಕಾಗಿರೋದು ಜಸ್ಟ್ 2 ರನ್… ರೋಹಿತ್-ಕೊಹ್ಲಿ ಜೋಡಿ ನಿರ್ಮಿಸಲಿದೆ ಆ ವಿಶ್ವದಾಖಲೆ!
ಕ್ರಿಕ್ ಇನ್‌ಫೋ ವರದಿ ಪ್ರಕಾರ, ಈ ಬಾರಿಯ ಐಪಿಎಲ್’ನಲ್ಲಿ ಟಾಸ್ ನಂತರ ನಾಯಕ ತನ್ನ ಪ್ಲೇಯಿಂಗ್ ಇಲೆವೆನ್ ಅನ್ನು ಬದಲಾಯಿಸಬಹುದು. ಐಪಿಎಲ್ 2023 ರ ಪಂದ್ಯಗಳಲ್ಲಿ ನಾಯಕ ಎರಡು ಟೀಮ್ ಶೀಟ್‌ಗಳೊಂದಿಗೆ ಟಾಸ್’ಗೆ ಬರುತ್ತಾರೆ. ಟಾಸ್ ಗೆದ್ದ ಅಥವಾ ಸೋತ ನಂತರ, ಅವರು ತಕ್ಷಣ ಏನು ಮಾಡಬೇಕೆಂದು ನಿರ್ಧರಿಸುತ್ತಾರೆ. ನಂತರ ಅವರು ತಂಡದ ಶೀಟ್’ನ್ನು ಹಸ್ತಾಂತರಿಸಬೇಕಾಗುತ್ತದೆ. ಅದನ್ನು ಮೈದಾನಕ್ಕೆ ತರಲಾಗುತ್ತದೆ. ವರದಿಯ ಪ್ರಕಾರ, ಐಪಿಎಲ್’ನಿಂದ ಇಂಟರ್ನಲ್ ನೋಟ್ ಒಂದನ್ನು ಬಿಡುಗಡೆ ಮಾಡಲಾಗುತ್ತದೆ. ಇದರಲ್ಲಿ ಟಾಸ್ ನಂತರವೂ ತಂಡಗಳು ತಮ್ಮ ಪ್ಲೇಯಿಂಗ್ ಇಲೆವೆನ್ ಅನ್ನು ಆಯ್ಕೆ ಮಾಡುವ ಅವಕಾಶವನ್ನು ಪಡೆಯುತ್ತವೆ. ಇಲ್ಲಿಯವರೆಗೆ ಟಾಸ್’ಗೂ ಮುನ್ನ ನಾಯಕರು ತಮ್ಮ ಆಟಗಾರರ ಪಟ್ಟಿಯನ್ನು ನೀಡಬೇಕಿತ್ತು.
ಈ ನಿಯಮವನ್ನು SA20 ಲೀಗ್‌ನಲ್ಲಿ ಅಳವಡಿಕೆ:
ಈ ನಿಯಮವನ್ನು ಜಾರಿಗೆ ತಂದ ಎರಡನೇ ಟೂರ್ನಿ ಐಪಿಎಲ್ ಆಗಲಿದೆ. ಐಪಿಎಲ್’ಗೂ ಮುನ್ನ ಈ ನಿಯಮವನ್ನು ದಕ್ಷಿಣ ಆಫ್ರಿಕಾದ ಎಸ್‌ಎ20 ಲೀಗ್‌ನಲ್ಲಿ ಅಳವಡಿಸಲಾಗಿತ್ತು. ಆದರೆ, SA20 ನಲ್ಲಿ, 13 ಆಟಗಾರರನ್ನು ಹೆಸರಿಸಬೇಕಾಗಿತ್ತು. ಆದರೆ ಇಲ್ಲಿ ಎರಡು ಹಾಳೆಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಈ ನಿಯಮದ ಬಗ್ಗೆ ಇಲ್ಲಿಯವರೆಗೆ ಬಿಸಿಸಿಐ ಏನನ್ನೂ ಹೇಳಿಲ್ಲವಾದರೂ, ಬಿಸಿಸಿಐ ಶೀಘ್ರದಲ್ಲೇ ಅದನ್ನು ಘೋಷಿಸಬಹುದು ಎಂದು ಹೇಳಲಾಗುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2023 ಸೀಸನ್ ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಮುಂಬರುವ ಋತುವಿನ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಾರಿ ದೇಶದ 12 ಕ್ರೀಡಾಂಗಣಗಳಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ. ಈ ಋತುವಿನ ಮೊದಲ ಪಂದ್ಯ ಮಾರ್ಚ್ 31 ರಂದು ನಡೆಯಲಿದ್ದು, ಇದು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಲೀಗ್ ಹಂತದ ಕೊನೆಯ ಪಂದ್ಯ ಮೇ 21 ರಂದು ನಡೆಯಲಿದ್ದು, ಅಂತಿಮ ಪಂದ್ಯ ಮೇ 28 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಇದನ್ನೂ ಓದಿ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಆರ್‌ಸಿಬಿ ನಾಯಕ
ಈ ಬಾರಿ 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. IPL-2023ರ 10 ತಂಡಗಳನ್ನು A ಮತ್ತು B ಗುಂಪುಗಳಾಗಿ ವಿಂಗಡಿಸಲಾಗಿದೆ. ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮೊದಲ ಗುಂಪಿನಲ್ಲಿ ಸ್ಥಾನ ಪಡೆದಿವೆ. ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಎರಡನೇ ಗುಂಪಿಗೆ ಸೇರ್ಪಡೆಗೊಂಡಿವೆ. ಗುಂಪಿನ ನಾಲ್ಕು ತಂಡಗಳು ಪ್ಲೇ ಆಫ್‌ಗೆ ಅರ್ಹತೆ ಪಡೆಯುತ್ತವೆ. 18 ಪಂದ್ಯಗಳು ಡಬಲ್ ಹೆಡರ್ ಪಂದ್ಯಗಳಾಗಿವೆ. ಒಂದು ತಂಡವು 14 ಪಂದ್ಯಗಳನ್ನು ಆಡುತ್ತದೆ. 7 ತವರಿನಲ್ಲಿ ಮತ್ತು 7 ಎದುರಾಳಿ ತಂಡದ ತವರಿನಲ್ಲಿ ಆಡಲಿದೆ. 10 ತಂಡಗಳ ನಡುವೆ 70 ಲೀಗ್ ಹಂತದ ಪಂದ್ಯಗಳು ನಡೆಯಲಿವೆ. 4 ಪಂದ್ಯಗಳು ಪ್ಲೇ ಆಫ್ ಆಗಲಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.