IND vs AUS: ಆಸೀಸ್ ವಿರುದ್ಧ ಸೋಲುಂಡ ಭಾರತ: ಏಕದಿನ ಟ್ರೋಫಿ ಸೇರಿ ನಂ.1 ಪಟ್ಟ ಕಳೆದುಕೊಂಡ ಟೀಂ ಇಂಡಿಯಾ!

IND vs AUS ODI Match: ಇಂದು ಚೆನ್ನೈನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಕಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 269 ರನ್ ಕಲೆಹಾಕಿತು. ಬಳಿಕ ಗುರಿ ಬೆನ್ನತ್ತಿದ್ದ ಭಾರತ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 248 ರನ್ ಕಲೆ ಹಾಕಿದೆ.

Written by - Bhavishya Shetty | Last Updated : Mar 22, 2023, 10:17 PM IST
    • ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಮತ್ತು ಮೂರನೇ ಏಕದಿನ ಪಂದ್ಯ
    • ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 269 ರನ್ ಕಲೆಹಾಕಿತು
    • 49 ಓವರ್‌ಗಳಲ್ಲಿ 269 ರನ್‌ ಗಳಿಸಿದ ಆಸ್ಟ್ರೇಲಿಯದ ಭಾರತಕ್ಕೆ 270 ರನ್’ಗಳ ಗುರಿ ನೀಡಿತು.
IND vs AUS: ಆಸೀಸ್ ವಿರುದ್ಧ ಸೋಲುಂಡ ಭಾರತ: ಏಕದಿನ ಟ್ರೋಫಿ ಸೇರಿ ನಂ.1 ಪಟ್ಟ ಕಳೆದುಕೊಂಡ ಟೀಂ ಇಂಡಿಯಾ! title=
India vs Australia

IND vs AUS ODI Match: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಮತ್ತು ಮೂರನೇ ಏಕದಿನ ಪಂದ್ಯ ಚೆನ್ನೈನಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಕಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 269 ರನ್ ಕಲೆಹಾಕಿತು. ಬೌಲಿಂಗ್’ನಲ್ಲಿ ಟೀಂ ಇಂಡಿಯಾ ಶೈನ್ ಆಗಿದೆ ಎನ್ನಬಹುದು.

ಇದನ್ನೂ ಓದಿ: Video Viral: ಮೈದಾನದಲ್ಲಿ ಈ ಆಟಗಾರನನ್ನು ನಿಂದಿಸಿದ ರೋಹಿತ್! ಮತ್ತೆ ಮತ್ತೆ ಈ ರೀತಿ ವರ್ತಿಸುತ್ತಿರೋದೇಕೆ ನಾಯಕ?

49 ಓವರ್‌ಗಳಲ್ಲಿ 269 ರನ್‌ ಗಳಿಸಿದ ಆಸ್ಟ್ರೇಲಿಯ ಭಾರತಕ್ಕೆ 270 ರನ್’ಗಳ ಗುರಿ ನೀಡಿತು. 138 ರನ್ ವೇಳೆಗೆ ಆಸ್ಟ್ರೇಲಿಯಾದ 5 ವಿಕೆಟ್‌ಗಳು ಉರುಳಿದ್ದವು. ಆದರೆ ನಂತರ ಭಾರತೀಯ ಬೌಲರ್‌ಗಳು ವಿಕೆಟ್‌ ಕಬಳಿಸಲು ಸಾಕಷ್ಟು ಪರದಾಟ ನಡೆಸಿದರು.

ಇನ್ನು ಟೀಂ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದರೆ, ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ 3 ವಿಕೆಟ್ ಕಬಳಿಸಿದರು. ವೇಗಿ ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದಿದ್ದಾರೆ. ಇನ್ನು ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ಅತಿ ಹೆಚ್ಚು ಅಂದರೆ 47 ರನ್ ಕಲೆ ಹಾಕಿದರೆ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಅಲೆಕ್ಸ್ ಕ್ಯಾರಿ 38 ರನ್ ಗಳ ಕೊಡುಗೆ ನೀಡಿದರು.

ಇದನ್ನೂ ಓದಿ: IND vs PAK: 7 ವರ್ಷಗಳ ನಂತರ ಭಾರತಕ್ಕೆ ಬರಲಿದೆ ಪಾಕಿಸ್ತಾನ ತಂಡ! ಮತ್ತೆ ನೋಡಬಹುದು ಬದ್ಧವೈರಿಗಳ ಕಾದಾಟ?

ಭಾರತ ಪರ ರೋಹಿತ್ ಶರ್ಮಾ 30, ಶುಭ್ಮನ್ ಗಿಲ್ 37, ವಿರಾಟ್ ಅರ್ಧಶತಕ 54, ಕೆ ಎಲ್ ರಾಹುಲ್ 32, ಅಕ್ಸರ್ ಪಟೇಟ್ 2, ಹಾರ್ದಿಕ್ ಪಾಂಡ್ಯ 40, ಸೂರ್ಯಕುಮಾರ್ ಯಾದವ್ 0, ರವೀಂದ್ರ ಜಡೇಜಾ 18, ಕುಲದೀಪ್ ಯಾದವ್ 6 , ಮೊಹಮ್ಮದ್ ಶಮಿ 14, ಮೊಹಮ್ಮದ್ ಸಿರಾಜ್ 3  ರನ್ ಕಲೆ ಹಾಕಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News