ನವದೆಹಲಿ: ತನ್ನ ಭವಿಷ್ಯ ಕಟ್ಟಲಾದ ಕಾರಣ ಭಾರತದ ಟೆನ್ನಿಸ್ ಆಟಗಾರ ಸೌಮ್ಯಜಿತ್ ಘೋಷ್ ತಮ್ಮ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದ 18 ವರ್ಷದ ಯುವತಿಯನ್ನೇ ವಿವಾಹವಾಗುವ ಮೂಲಕ ಎಲ್ಲಾ ವಿವಾದಗಳಿಗೆ ತೆರೆ ಎಳೆದಿದ್ದಾರೆ.
ಕಳೆದ ಮಾರ್ಚ್ನಲ್ಲಿ 18 ವರ್ಷದ ಯುವತಿಯೊಬ್ಬಳು ಭಾರತೀಯ ಟೆನ್ನಿಸ್ ಆಟಗಾರ ಮತ್ತು ಒಲಂಪಿಕ್ ಆಟಗಾರ ಸೌಮ್ಯಜಿತ್ ಘೋಷ್ ವಿರುದ್ಧ ಪಶ್ಚಿಮ ಬಂಗಾಳದ ಬರಾಸತ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ವಿಚಾರ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಹೀಗಾಗಿ ಬಂಧನ ಭೀತಿಯಿಂದ ಯುರೋಪ್ ನಲ್ಲೇ ಉಳಿದಿದ್ದ ಸೌಮ್ಯಜಿತ್ ಕಳೆದ ಶುಕ್ರವಾರ ಕೋಲ್ಕತ್ತಾಕ್ಕೆ ಆಗಮಿಸಿ ಯುವತಿಯೊಂದಿಗೆ ಮದುವೆಯಾಗಿದ್ದಾರೆ. ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಸೌಮ್ಯಜಿತ್ ಅವರನ್ನು ಜರ್ಮನಿಯ ಲೀಗ್ ನಲ್ಲಿ ಆಡುತ್ತಿದ್ದ ಸೌಮ್ಯಜಿತ್ ರನ್ನು ಏಷ್ಯನ್ ಗೇಮ್ಸ್ ತಂಡದಿಂದ ಕೈ ಬಿಡಲಾಗಿತ್ತು. ಜೊತೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕೂಟಗಳಿಂದ ಅಮಾನುತುಗೊಳಿಸಲಾಗಿತ್ತು.
ಈ ಬಗ್ಗೆ ಪಿಟಿಐಗೆ ಹೇಳಿಕೆ ನೀಡಿರುವ ಘೋಷ್, "ಎಲ್ಲರೂ ಆ ಯುವತಿಯ ಬಗ್ಗೆಯೇ ಮಾತನಾಡುತ್ತಾರೆ. ನಾನು ಆಕೆಯೊಂದಿಗೆ ಡೇಟಿಂಗ್ ಮಾಡುವಾಗ ನನಗೆ 22 ವರ್ಷ, ಈಗಲೂ ಕೂಡ ಇನ್ನೂ ಯುವಕ. ಮತ್ತೆ ಹಿಂತಿರುಗಿ ನೋಡುವುದರಲ್ಲಿ ಅರ್ಥವಿಲ್ಲ. ಹಾಗಾಗಿ ವಿವಾಹವಾಗುವ ನಿರ್ಧಾರಕ್ಕೆ ಬಂದೆ. ಈಗಲಾದರೂ ನ್ಯಾಯಾಲಯ ನನ್ನನ್ನು ಆರೋಪಮುಕ್ತಗೊಳಿಸಿ, ನಾನು ಪುನಃ ತರಬೇತಿ ಪಡೆಯಲು ಅವಕಾಶ ನೀಡಲಿದೆ ಎಂದು ಭಾವಿಸಿದ್ದೇನೆ" ಎಂದಿದ್ದಾರೆ.