ಧೋನಿಯ ಈ ನಿರ್ಧಾರದಿಂದಲೇ ಬಚಾವಾಗಿದ್ದರು ವಿರಾಟ್ ಕೊಹ್ಲಿ, ಇಲ್ಲವಾದರೆ ಮುಗಿದೇ ಹೋಗುತ್ತಿತ್ತು ಕೊಹ್ಲಿ career

ಮಹೇಂದ್ರ ಸಿಂಗ್ ಧೋನಿ ತಮ್ಮ ನಾಯಕತ್ವದಲ್ಲಿ ತಂಡದ ಆಟಗಾರರಿಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತಿದ್ದರು. 

Written by - Ranjitha R K | Last Updated : Oct 7, 2021, 02:38 PM IST
  • ಆಯ್ಕೆದಾರರು ಕೊಹ್ಲಿಯನ್ನು ಕೈಬಿಡಲು ಬಯಸಿದ್ದರು
  • ಕೊಹ್ಲಿಯ ಪ್ರದರ್ಶನ ತುಂಬಾ ಕಳಪೆಯಾಗಿತ್ತು
  • ಧೋನಿಯ ನಿರ್ಧಾರ ಕೊಹ್ಲಿ ವೃತ್ತಿಜೀವನವನ್ನು ಉಳಿಸಿತು
ಧೋನಿಯ ಈ ನಿರ್ಧಾರದಿಂದಲೇ ಬಚಾವಾಗಿದ್ದರು ವಿರಾಟ್ ಕೊಹ್ಲಿ, ಇಲ್ಲವಾದರೆ ಮುಗಿದೇ ಹೋಗುತ್ತಿತ್ತು ಕೊಹ್ಲಿ career title=
ಧೋನಿಯ ನಿರ್ಧಾರ ಕೊಹ್ಲಿ ವೃತ್ತಿಜೀವನವನ್ನು ಉಳಿಸಿತು (file photo)

ನವದೆಹಲಿ : ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಉತ್ತಮ ಹೆಸರು ಮಾಡಿರುವ ವಿರಾಟ್ ಕೊಹ್ಲಿಯ (Virat Kohli ) ವೃತ್ತಿಜೀವನ,  ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಇಲ್ಲವಾಗಿದ್ದರೆ ಎಂದೋ ಕೊನೆಯಾಗುತ್ತಿತ್ತು. ಆಯ್ಕೆಗಾರರು ವಿರಾಟ್ ಕೊಹ್ಲಿಯನ್ನು ಟೀಂ ಇಂಡಿಯಾದಿಂದ ಕೈಬಿದುವ ನಿರ್ಧಾರ ಮಾಡಿದ್ದರು. ಆದರೆ ಧೋನಿಯ ಒಂದೇ ಒಂದು ನಿರ್ಧಾರ, ಕೊಹ್ಲಿಯ ವೃತ್ತಿಜೀವನ ಕೊನೆಯಾಗುವುದನ್ನು ತಡೆಯಿತು.  

ಕೊಹ್ಲಿಯನ್ನು ಕೈಬಿಡಲು ನಿರ್ಧರಿಸಿದ್ದ ಆಯ್ಕೆದಾರರು : 
ಮಹೇಂದ್ರ ಸಿಂಗ್ ಧೋನಿ (MS Dhoni) ತಮ್ಮ ನಾಯಕತ್ವದಲ್ಲಿ ತಂಡದ ಆಟಗಾರರಿಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತಿದ್ದರು. ಅದು 2012 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಳಪೆ ಫಾರ್ಮ್ ಕಾರಣ, ಆಯ್ಕೆಗಾರರು ವಿರಾಟ್ ಕೊಹ್ಲಿಯನ್ನು (Virat Kohli) ಟೀಂ ಇಂಡಿಯಾದಿಂದ ಕೈಬಿಡಲು ಬಯಸಿದ್ದರು.  ಆದರೆ ಧೋನಿ ವಿರಾಟ್ ಕೊಹ್ಲಿ ಮೇಲೆ ಅತ್ಯಂತ ವಿಶ್ವಾಸ ಹೊಂದಿದ್ದರು.  ಆ ಕಾರಣದಿಂದ ಕೊಹ್ಲಿಯನ್ನು ತಂಡದಿಂದ ಕೈಬಿಡಲು ಬಿಡಲಿಲ್ಲ.

ಇದನ್ನೂ ಓದಿ : T20 World Cup: Ind vs Pak ಪಂದ್ಯಕ್ಕಾಗಿ ಲಕ್ಷಗಳಲ್ಲಿ ಮಾರಾಟವಾಗುತ್ತಿದೆ ಟಿಕೆಟ್

ಕಳಪೆ ಪ್ರದಶನ ನೀಡಿದ್ದ ಕೊಹ್ಲಿ :  
ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ (Veerendra sehwag) ಇದನ್ನು ಬಹಿರಂಗಪಡಿಸಿದ್ದಾರೆ. 2012ರಲ್ಲಿ ಒಂದು ವೇಳೆ ಆಯ್ಕೆದಾರರ ಮಾತಿನಂತೆ ನಡೆದುಕೊಂಡಿದ್ದರೆ, ಕೊಹ್ಲಿಗೆ ಭಾರತಕ್ಕಾಗಿ ಟೆಸ್ಟ್ ಪಂದ್ಯವನ್ನು ಆಡುವ ಅವಕಾಶ ಸಿಗುತ್ತಿರಲಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕೆಲವು ಕಳಪೆ ಇನ್ನಿಂಗ್ಸ್‌ಗಳ ನಂತರ ಆಯ್ಕೆಗಾರರು ಕೊಹ್ಲಿಯನ್ನು ಕೈಬಿಡಲು ಬಯಸಿದ್ದರು. ಮೊದಲ ಎರಡು ಟೆಸ್ಟ್ ಗಳಲ್ಲಿ ಕೊಹ್ಲಿ ಕೇವಲ 10.75 ಸರಾಸರಿಯಲ್ಲಿ ರನ್ ಗಳಿಸಿದ್ದರು. ಅ ಸಂದರ್ಭದಲ್ಲಿ  ಸೆಹ್ವಾಗ್ ಆ ತಂಡದ ಉಪನಾಯಕ ಮತ್ತು ಧೋನಿ ನಾಯಕರಾಗಿದ್ದರು.

ಧೋನಿಯ ನಿರ್ಧಾರ ವೃತ್ತಿಜೀವನವನ್ನು ಉಳಿಸಿತು :
2012 ರಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೆಹ್ವಾಗ್ ಒಟ್ಟಾಗಿ ಕೊಹ್ಲಿಯ ಸ್ಥಾನವನ್ನು ಉಳಿಸಿರುವುದಾಗಿ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. 'ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರನೇ ಟೆಸ್ಟ್‌ನಲ್ಲಿ (Test cricket) , ಆಯ್ಕೆದಾರರು ವಿರಾಟ್ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾ (Rohit Sharma) ಅವರನ್ನು ಆಟಕ್ಕೆ ಇಳಿಸಲು ನಿರ್ಧರಿಸಿದ್ದರು. ಆದರೆ, ಸೆಹ್ವಾಗ್ ಮತ್ತು ನಾಯಕ ಧೋನಿ ಕೊಹ್ಲಿಗೇ ಆಡಲು ಅವಕಾಶ ನೀಡುವಂತೆ ನಿರ್ಧರಿಸಿದ್ದರು ಎಂದು ತಿಳಿಸಿದ್ದಾರೆ. ಒಂದು ವೇಳೆ ಆ ಸಂದರ್ಭದಲ್ಲಿ ಧೋನಿ, ಕೊಹ್ಲಿ ಮೇಲೆ ನಂಬಿಕೆ ಇಡದೆ ಹೋಗಿದ್ದರೆ, ಭಾರತ ತಂಡ ಅದ್ಬುತ ಆಟಗಾರನನ್ನು ಕಳೆದುಕೊಳ್ಳುತ್ತಿತ್ತು ಎಂದು ಹೇಳಿದ್ದಾರೆ.    

ಇದನ್ನೂ ಓದಿ : IPL 2021, RCB vs SRH: ಹೈದರಾಬಾದ್ ವಿರುದ್ಧ ಗೆಲುವಿನ ಉತ್ಸಾಹದಲ್ಲಿರುವ ವಿರಾಟ್ ಕೊಹ್ಲಿ ಪಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News