ರಾಜಕೀಯ ಎಂಟ್ರಿಗೆ ರಾಯುಡು ರೆಡಿ..! ಜನರ ಕಷ್ಟ ಅರಿಯಲು ಮುಂದಾದ ಮಾಜಿ ಕ್ರಿಕೆಟಿಗ

ಕಳೆದ ಕೆಲವು ದಿನಗಳಿಂದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ರಾಜಕೀಯ ಪ್ರವೇಶ ಮಾಡ್ತಾರೆ ಅಂತ ಹೇಳಲಾಗುತ್ತಿತ್ತು. ಇದೀಗ ಸ್ವತಃ ರಾಯುಡು ಈ ಕುರಿತು ಸ್ಪಷ್ಟನೆ ನೀಡಿದ್ದು, ಪೊಲಿಟಿಕ್ಸ್ ಎಂಟ್ರಿ ಪಿಕ್ಸ್‌ ಎಂದು ಘೋಷಣೆ ಮಾಡಿದ್ದಾರೆ.

Written by - Krishna N K | Last Updated : Jun 29, 2023, 06:10 PM IST
  • ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ರಾಜಕೀಯ ಪ್ರವೇಶ ಮಾಡಲಿದ್ದಾರೆ.
  • ಅದಕ್ಕೂ ಮುನ್ನ ನೆಲಮಟ್ಟದಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳಲು ಮುಂದಾಗಿದ್ದಾರೆ.
  • ಗ್ರಾಮಗಳಲ್ಲಿ ಸಂಚರಿಸಿ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಅರಿತುಕೊಳ್ಳುತ್ತಿದ್ದಾರೆ.
ರಾಜಕೀಯ ಎಂಟ್ರಿಗೆ ರಾಯುಡು ರೆಡಿ..! ಜನರ ಕಷ್ಟ ಅರಿಯಲು ಮುಂದಾದ ಮಾಜಿ ಕ್ರಿಕೆಟಿಗ title=

Ambati Rayudu into politics : ಕಳೆದ ಕೆಲವು ದಿನಗಳಿಂದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ರಾಜಕೀಯ ಪ್ರವೇಶ ಮಾಡ್ತಾರೆ ಅಂತ ಹೇಳಲಾಗುತ್ತಿತ್ತು. ಇದೀಗ ಸ್ವತಃ ರಾಯುಡು ಈ ಕುರಿತು ಸ್ಪಷ್ಟನೆ ನೀಡಿದ್ದು, ಪೊಲಿಟಿಕ್ಸ್ ಎಂಟ್ರಿ ಪಿಕ್ಸ್‌ ಎಂದು ಘೋಷಣೆ ಮಾಡಿದ್ದಾರೆ.

ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ವಟ್ಟಿಚೆರುಕೂರು ಮಂಡಲಕ್ಕೆ ಭೇಟಿ ನೀಡಿದ್ದ ಅಂಬಟಿ ಈ ಕುರಿತು ಹೇಳಿಕೆ ನೀಡಿದ್ದಾರೆ. ಜನರ ಮನಃಸ್ಥಿತಿ ಅರಿಯಲು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೇನೆ. ಗ್ರಾಮಸ್ಥರ ಸಮಸ್ಯೆ, ಬೇಕು ಬೇಡಗಳನ್ನು ತಿಳಿದುಕೊಳ್ಳುತ್ತಿದ್ದೆನೆ. ಎಲ್ಲದರ ಬಗ್ಗೆ ತಿಳುವಳಿಕೆ ಬಂದ ನಂತರ ರಾಜಕೀಯ ಕ್ಷೇತ್ರಕ್ಕೆ ಬರುತ್ತೇನೆ. ಜನಸೇವೆಗೂ ಮುನ್ನ ಎಲ್ಲ ವಿಷಯಗಳು ತಿಳಿದಿರಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: 9 ತಿಂಗಳ ಬಳಿಕ ಟೀಂ ಇಂಡಿಯಾಗೆ ಎಂಟ್ರಿ ಕೊಡ್ತಿದ್ದಾರೆ ಈ ಇಬ್ಬರು ಕಿಲಾಡಿಗಳು… ದುಪ್ಪಟ್ಟಾಗಲಿದೆ ಭಾರತದ ಶಕ್ತಿ!

ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿಯಾದಾಗಿನಿಂದ ಅಂಬಾಟಿ ರಾಯುಡು ರಾಜಕೀಯಕ್ಕೆ ಬರುತ್ತಾರೆ ಎಂಬ ಪ್ರಚಾರ ಶುರುವಾಗಿದೆ. ನಂತರ, ರಾಯುಡು ವೈಸಿಪಿ ಪರ ಮಾಡಿದ್ದ ಕಾಮೆಂಟ್‌ಗಳು ಮತ್ತು ಟ್ವೀಟ್‌ಗಳು ಗಮನಸೆಳೆದಿದ್ದವು. ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಅವರು ಕೃಷ್ಣ ಅಥವಾ ಗುಂಟೂರು ಜಿಲ್ಲೆಗಳ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿತ್ತು. ಸದ್ಯ ಕ್ರಿಕೆಟ್ ಪಿಚ್‌ನಲ್ಲಿ ಬ್ಯಾಟ್ ಬೀಸಿ ಗೆದ್ದಿದ್ದ ಅಂಬಟಿ ಇದೀಗ ರಾಜಕೀಯ ಪಿಚ್‌ನಲ್ಲಿ ಬ್ಯಾಟ್ ಬೀಸಲು ರೆಡಿಯಾಗಿದ್ದಾರೆ. 

ವಿಧಾನಸಭೆ ಚುನಾವಣೆ ವೇಳೆ ಪೊನ್ನೂರು ಅಥವಾ ಗುಂಟೂರು ಪಶ್ಚಿಮ ಕ್ಷೇತ್ರಗಳಲ್ಲಿ ರಾಯುಡು ಸ್ಪರ್ಧಿಸುವ ಅವಕಾಶವಿದೆ. ವೈಎಸ್ಪಿ ಮೂಲಗಳ ಪ್ರಕಾರ, ಮಚಲಿಪಟ್ಟಣಂ ಲೋಕಸಭಾ ಕ್ಷೇತ್ರವನ್ನು ಸಂಸತ್ತಿಗೆ ಹಂಚಿಕೆ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ: ನಿವೃತ್ತಿಯ ಅಂಚಿನಲ್ಲಿರುವ ಈ 3 ಆಟಗಾರರಿಂದಲೇ ಟೀಂ ಇಂಡಿಯಾ ಗೆಲ್ಲುತ್ತೆ ವಿಶ್ವಕಪ್ ಟ್ರೋಫಿ! ಸಿಗುತ್ತಾ ಅವಕಾಶ?

ಮಚಲಿಪಟ್ಟಣದಿಂದ ಸಂಸದರಾಗಿರುವ ವಿ.ಬಾಲಸೌರಿ ಮುಂದಿನ ಚುನಾವಣೆಯಲ್ಲಿ ಶಾಸಕರಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಪೊನ್ನೂರಿನಿಂದ ಶಾಸಕರಾಗಿ ಸ್ಪರ್ಧಿಸಿದರೆ, ಅಂಬಟಿ ಮಚಲಿಪಟ್ಟಣದಿಂದ ಸಂಸದರಾಗಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಆಲೋಚನೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News