ನವದೆಹಲಿ: ಲೀಡ್ಸ್ ನಲ್ಲಿನ ಹೆಡಿಂಗ್ಲಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡವು ಭಾರತದ ವಿರುದ್ಧ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿದೆ.
That 💯 feeling#SLvIND | #CWC19 | #LionsRoar pic.twitter.com/nn8tCi9Hgo
— ICC (@ICC) July 6, 2019
ಆರಂಭದಲ್ಲಿ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ 55 ರನ್ ಗಳಾಗುವಷ್ಟರಲ್ಲಿ 4 ವಿಕೆಟ್ ಗಳನ್ನು ಕಳೆದುಕೊಂದು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಈ ಹಂತದಲ್ಲಿ ಜೊತೆಗೂಡಿದ ಎಂಜೆಲೋ ಮ್ಯಾಥೋ ಅವರ ಭರ್ಜರಿ ಶತಕ (113) ಹಾಗೂ ಲಹಿರು ತಿರಿಮನ್ನೇ ಅವರ ಅರ್ಧಶತಕ (53) ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು.ಕೊನೆಯಲ್ಲಿ ಧನಂಜಯ ಡಿಸಿಲ್ವ ಅಜೇಯ 29 ರನ್ ಗಳನ್ನು ಗಳಿಸುವ ಮೂಲಕ 250 ರ ಗಡಿ ದಾಟಲು ನೆರವಾದರು.
The players walk off after Sri Lanka set India 265 to win.
Who's on top at the halfway stage?#CWC19 | #SLvIND pic.twitter.com/7sPqibU9Z8
— ICC (@ICC) July 6, 2019
ಇನ್ನು ಭಾರತದ ಪರವಾಗಿ ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ ಗಳನ್ನು ತೆಗೆದುಕೊಂಡು ಎರಡು ಓವರ್ ಗಳನ್ನು ಮೇಡನ್ ಮಾಡುವ ಮೂಲಕ ಶ್ರೀಲಂಕಾ ತಂಡಕ್ಕೆ ಮಾರಕವಾಗಿ ಪರಿಣಮಿಸಿದರು.