W,W,W,W,W… ಅರ್ಷದೀಪ್ ಬೆಂಕಿ ಬೌಲಿಂಗ್’ಗೆ 5 ವಿಕೆಟ್ ಉಡೀಸ್! ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಬರೆಯದ ಶ್ರೇಷ್ಠ ದಾಖಲೆ ಸೃಷ್ಟಿ

Arshdeep Singh World Record: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ಭಾರತದ ಏಕೈಕ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಅರ್ಷದೀಪ್ ಪಾತ್ರರಾಗಿದ್ದಾರೆ.

Written by - Bhavishya Shetty | Last Updated : Dec 17, 2023, 04:27 PM IST
    • ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯ
    • ಅರ್ಷದೀಪ್ ಸಿಂಗ್ ಅದ್ಭುತ ಬೌಲಿಂಗ್ ಮಾಡಿ 5 ವಿಕೆಟ್ ಪಡೆಯುವಲ್ಲಿ ಯಶಸ್ವಿ
    • 5 ವಿಕೆಟ್ ಕಬಳಿಸಿದ ಭಾರತದ ಏಕೈಕ ವೇಗದ ಬೌಲರ್
W,W,W,W,W… ಅರ್ಷದೀಪ್ ಬೆಂಕಿ ಬೌಲಿಂಗ್’ಗೆ 5 ವಿಕೆಟ್ ಉಡೀಸ್! ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಬರೆಯದ ಶ್ರೇಷ್ಠ ದಾಖಲೆ ಸೃಷ್ಟಿ  title=
arshdeep singh

Arshdeep Singh World Record: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ (IND vs SA 1st ODI) ಅರ್ಷದೀಪ್ ಸಿಂಗ್ ಅದ್ಭುತ ಬೌಲಿಂಗ್ ಮಾಡಿ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ತಮ್ಮ ವೃತ್ತಿ ಜೀವನದಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ಇದನ್ನೂ ಓದಿ:ನಾಯಕತ್ವ ಕಳೆದುಕೊಂಡ ರೋಹಿತ್‌ ಶರ್ಮಾ: ಮುಂಬೈ ಇಂಡಿಯನ್ಸ್‌ ಪರ ಆಡೋದು ಡೌಟ್‌

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ಭಾರತದ ಏಕೈಕ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಅರ್ಷದೀಪ್ ಪಾತ್ರರಾಗಿದ್ದಾರೆ. ಈ ಮೊದಲು, ದಕ್ಷಿಣ ಆಫ್ರಿಕಾದಲ್ಲಿ ಆಫ್ರಿಕನ್ ತಂಡದ ವಿರುದ್ಧ ಆಡುವಾಗ ಯಾವುದೇ ಭಾರತೀಯ ವೇಗದ ಬೌಲರ್ ಈ ಸಾಧನೆ ಮಾಡಿರಲಿಲ್ಲ.

ಪಂದ್ಯದಲ್ಲಿ ಅರ್ಷದೀಪ್ 10 ಓವರ್ ಬೌಲ್ ಮಾಡಿ 37 ರನ್ ನೀಡಿ 5 ವಿಕೆಟ್ ಪಡೆದರು. ಇನ್ನು ಅರ್ಷದೀಪ್ ಹೊರತಾಗಿ ಅವೇಶ್ ಖಾನ್ ಕೂಡ ಅದ್ಭುತವಾಗಿ ಬೌಲಿಂಗ್ ಮಾಡಿ 4 ವಿಕೆಟ್ ಪಡೆದರು.

ಇದನ್ನೂ ಓದಿ: ಈ ಪೋಟೋದಲ್ಲಿರುವ ಮಗು ಯಾರು ಗೊತ್ತಾ? ಈಕೆ ಸೌತ್‌ ಸಿನಿರಂಗದ ಅತ್ಯುತ್ತಮ ನಟಿ!   

ಅಂದಹಾಗೆ, ಅರ್ಷದೀಪ್ ದಕ್ಷಿಣ ಆಫ್ರಿಕಾದಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಮೂರನೇ ಬೌಲರ್ ಆಗಿದ್ದಾರೆ. ಅರ್ಶ್‌ದೀಪ್‌’ಗೂ ಮುನ್ನ ಆಶಿಶ್ ನೆಹ್ರಾ 2003ರ ವಿಶ್ವಕಪ್‌’ನಲ್ಲಿ ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಪಡೆದಿದ್ದರೆ, 2018ರಲ್ಲಿ ಯುಜುವೇಂದ್ರ ಚಾಹಲ್ ಸೆಂಚುರಿಯನ್‌’ನಲ್ಲಿ 5 ವಿಕೆಟ್ ಪಡೆದಿದ್ದರು. ಇನ್ನೊಂದೆಡೆ ಅರ್ಷದೀಪ್ ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಮೊದಲ ಬಾರಿಗೆ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News