ವಿರಾಟ್ ಕೊಹ್ಲಿ ಜೊತೆ 'ಸೆಲ್ಫಿ ಕ್ಲಿಕ್ಕಿಸಲು' 23 ಸಾವಿರ ಖರ್ಚು ಮಾಡಿದ ಅಸ್ಸಾಂ ಯುವಕ..!

ಗುವಾಹಟಿಯ ಶಾಂತಿಪುರದ ಯುವಕ ರಾಹುಲ್ ರೈ ತನ್ನ ಕ್ರಿಕೆಟ್ ಆರಾಧ್ಯದೈವ ವಿರಾಟ್ ಕೊಹ್ಲಿಯನ್ನು ಭೇಟಿಯಾಗುವ ಅವಕಾಶ ಪಡೆದಿದ್ದರಿಂದಾಗಿ ತೀವ್ರ ಸಂತಸದಲ್ಲಿದ್ದಾರೆ.

Last Updated : Oct 2, 2022, 11:55 PM IST
  • ಸೆಕ್ಯೂರಿಟಿ ನನಗೆ ಹತ್ತಿರ ಹೋಗಲು ಅಥವಾ ಒಮ್ಮೆ ಭೇಟಿಯಾಗಲು ಅವಕಾಶ ನೀಡಲಿಲ್ಲ.
  • ಆಗ ನನಗೆ ಕೊಹ್ಲಿ ನಗರದಲ್ಲಿರುತ್ತಾರೆ ಎನ್ನುವುದು ನಂಗೆ ತಿಳಿದಿತ್ತು.
ವಿರಾಟ್ ಕೊಹ್ಲಿ ಜೊತೆ 'ಸೆಲ್ಫಿ ಕ್ಲಿಕ್ಕಿಸಲು' 23 ಸಾವಿರ ಖರ್ಚು ಮಾಡಿದ ಅಸ್ಸಾಂ ಯುವಕ..! title=

ನವದೆಹಲಿ: ಗುವಾಹಟಿಯ ಶಾಂತಿಪುರದ ಯುವಕ ರಾಹುಲ್ ರೈ ತನ್ನ ಕ್ರಿಕೆಟ್ ಆರಾಧ್ಯದೈವ ವಿರಾಟ್ ಕೊಹ್ಲಿಯನ್ನು ಭೇಟಿಯಾಗುವ ಅವಕಾಶ ಪಡೆದಿದ್ದರಿಂದಾಗಿ ತೀವ್ರ ಸಂತಸದಲ್ಲಿದ್ದಾರೆ.

ಅಷ್ಟಕ್ಕೂ ಕೊಹ್ಲಿಯನ್ನು ಅವರು ಭೇಟಿ ಮಾಡಲು ಸಾಕಷ್ಟು ಶ್ರಮವನ್ನು ವಹಿಸಿದ್ದಾರೆ.ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಸೆಪ್ಟೆಂಬರ್ 29 ರಂದು ಗುವಾಹಟಿಗೆ ಬಂದಿಳಿದರು. ಇದೆ ವೇಳೆ ರಾಹುಲ್ ಕೊಹ್ಲಿ ಭೇಟಿಯಾಗುವುದನ್ನು ಖಚಿತಪಡಿಸಿಕೊಳ್ಳಲು ಬೋರ್ಜಾರ್‌ನಲ್ಲಿರುವ ಲೋಕೋಪಿಯ ಗೋಪಿನಾಥ್ ಬೊರ್ಡೊಲೋಯ್ ವಿಮಾನ ನಿಲ್ದಾಣಕ್ಕೆ ಹೋದರು.ಆದರೆ ಈ ಸಂದರ್ಭದಲ್ಲಿ ಅವರು ಕೊಹ್ಲಿ ಅವರನ್ನು ಭೇಟಿ ಮಾಡಲು ಬರೋಬ್ಬರಿ 23 ಸಾವಿರ ರೂ.ಗಳನ್ನು ಖರ್ಚು ಮಾಡಿದ್ದಾರೆ.

ಇದನ್ನೂ ಓದಿ: ಅಂಪೈರ್ ನಿರ್ಧಾರಕ್ಕೆ ಅಸಮಾಧಾನಗೊಂಡ ರೋಹಿತ್ ಮೈದಾನದಲ್ಲಿ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ

ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ರೈ 'ನಾನು ವಿಮಾನ ನಿಲ್ದಾಣದಲ್ಲಿದ್ದೆ, ಆಗ ಕೊಹ್ಲಿ ಹೊರಗೆ ಬಂದು ಶಟಲ್ ಬಸ್‌ನ ಬಳಿಗೆ ಬರುವುದನ್ನು ನಾನು ನೋಡಿದೆ. ಸೆಕ್ಯೂರಿಟಿ ನನಗೆ ಹತ್ತಿರ ಹೋಗಲು ಅಥವಾ ಒಮ್ಮೆ ಭೇಟಿಯಾಗಲು ಅವಕಾಶ ನೀಡಲಿಲ್ಲ. ಆಗ ನನಗೆ ಕೊಹ್ಲಿ ನಗರದಲ್ಲಿರುತ್ತಾರೆ ಎನ್ನುವುದು ನಂಗೆ ತಿಳಿದಿತ್ತು. ಮುಂದಿನ ನಾಲ್ಕು ದಿನಗಳವರೆಗೆ ಮತ್ತು ಅಭ್ಯಾಸದ ಅವಧಿಯಲ್ಲಿ ಎಸಿಎ ಬರ್ಸಾಪರಾ ಸ್ಟೇಡಿಯಂನಲ್ಲಿ ಅವರನ್ನು ಭೇಟಿಯಾಗಲು ನನಗೆ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು ಆದರೆ ಇಲ್ಲಿ ಸಾಕಷ್ಟು ಭದ್ರತೆ ಇದ್ದಿದ್ದರಿಂದ, ಸೆಲ್ಪಿ ತೆಗೆಸಿಕೊಳ್ಳುವ ಅವಕಾಶ ಕೈತಪ್ಪಿತು.

ಇದನ್ನೂ ಓದಿ: ವಿಶ್ವದಾಖಲೆ ನಿರ್ಮಿಸಿದ ಕೆ.ಎಲ್.ರಾಹುಲ್ ರೋಹಿತ್ ಶರ್ಮಾ ಜೋಡಿ..!

ಕೊನೆಗೆ ಹೆಚ್ಚಿನ ಆಯ್ಕೆಗಳು ಉಳಿದಿಲ್ಲದ ಕಾರಣ, ಅವರು ವಿರಾಟ್ ಕೊಹ್ಲಿ ಸೇರಿದಂತೆ ಎರಡೂ ತಂಡಗಳು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದರು. ಅದಕ್ಕಾಗಿ ಅವರು ಒಂದು ರಾತ್ರಿ ಉಳಿಯಲು ಬರೋಬ್ಬರಿ 23,400 ರೂ.ಗಳನ್ನು ಖರ್ಚು ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News