Australian Open: ರಾಫೆಲ್ ನಡಾಲ್ ವಿಶ್ವದಾಖಲೆಯ ಸಾಧನೆ ಬಗ್ಗೆ ಫೆಡರರ್ ಮೆಚ್ಚುಗೆ

ರೋಜರ್ ಫೆಡರರ್ ಅವರು ತಮ್ಮ ದೀರ್ಘಕಾಲದ ಸ್ನೇಹಿತ ಮತ್ತು ಪ್ರತಿಸ್ಪರ್ಧಿ ರಾಫೆಲ್ ನಡಾಲ್ ಅವರು ಭಾನುವಾರದಂದು ದಾಖಲೆಯ 21 ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ನಂತರ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

Written by - Zee Kannada News Desk | Last Updated : Jan 30, 2022, 11:14 PM IST
  • ರೋಜರ್ ಫೆಡರರ್ ಅವರು ತಮ್ಮ ದೀರ್ಘಕಾಲದ ಸ್ನೇಹಿತ ಮತ್ತು ಪ್ರತಿಸ್ಪರ್ಧಿ ರಾಫೆಲ್ ನಡಾಲ್ ಅವರು ಭಾನುವಾರದಂದು ದಾಖಲೆಯ 21 ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ನಂತರ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
Australian Open: ರಾಫೆಲ್ ನಡಾಲ್ ವಿಶ್ವದಾಖಲೆಯ ಸಾಧನೆ ಬಗ್ಗೆ ಫೆಡರರ್ ಮೆಚ್ಚುಗೆ title=

ನವದೆಹಲಿ: ರೋಜರ್ ಫೆಡರರ್ ಅವರು ತಮ್ಮ ದೀರ್ಘಕಾಲದ ಸ್ನೇಹಿತ ಮತ್ತು ಪ್ರತಿಸ್ಪರ್ಧಿ ರಾಫೆಲ್ ನಡಾಲ್ ಅವರು ಭಾನುವಾರದಂದು ದಾಖಲೆಯ 21 ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ನಂತರ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

ಭಾನುವಾರದಂದು ನಡೆದ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ನಡಾಲ್ ಡೇನಿಯಲ್ ಮೆಡ್ವೆಡೆವ್ ಅವರನ್ನು ಸೋಲಿಸುವ ಮೂಲಕ ನಡಾಲ್ ಅತಿ ಹೆಚ್ಚು ಪುರುಷರ್ ಸಿಂಗಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ಸಾಧನೆಯನ್ನು ಮಾಡಿದ್ದಾರೆ.ಅಷ್ಟೇ ಅಲ್ಲದೆ ರೋಜರ್ ಫೆಡರರ್ ಮತ್ತು ನೊವಾಕ್ ಜೊಕೊವಿಕ್ ಅವರನ್ನು ಹಿಂದಿಕ್ಕಿದ್ದಾರೆ.

ಇದನ್ನೂ ಓದಿ: IPL 2022 Mega Auction ನಲ್ಲಿ ಈ 2 ವೇಗದ ಬೌಲರ್‌ಗಳಿಗೆ ಭಾರಿ ಬೇಡಿಕೆ!

ಮೆಲ್ಬೋರ್ನ್‌ನಲ್ಲಿ ನಡೆದ ರೋಚಕ ಫೈನಲ್‌ನಲ್ಲಿ ನಡಾಲ್ 2-6, 6-7 (5), 6-4, 6-4, 7-5 ಸೆಟ್‌ಗಳಿಂದ ಗೆದ್ದಿದ್ದಾರೆ.ನಡಾಲ್ ಅವರ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಫೆಡರರ್ " ಎಂತಹ ಪಂದ್ಯ! ನನ್ನ ಸ್ನೇಹಿತ ಮತ್ತು ಶ್ರೇಷ್ಠ ಪ್ರತಿಸ್ಪರ್ಧಿ ರಾಫೆಲ್ ನಡಾಲ್ ಗೆ, 21 ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಹೃತ್ಪೂರ್ವಕ ಅಭಿನಂದನೆಗಳು.ಕೆಲವು ತಿಂಗಳ ಹಿಂದೆ ನಾವು ತಮಾಷೆ ಮಾಡುತ್ತಿದ್ದೆವು..ಶ್ರೇಷ್ಠ ಚಾಂಪಿಯನ್ ಅನ್ನು ಎಂದಿಗೂ ಕಡಿಮೆ ಲೆಕ್ಕಾಚಾರ ಮಾಡಬೇಡಿ , "ಎಂದು ಫೆಡರರ್ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

"ನಿಮ್ಮ ನಂಬಲಾಗದ ಕಾರ್ಯ ನೀತಿ, ಸಮರ್ಪಣೆ ಮತ್ತು ಹೋರಾಟದ ಮನೋಭಾವವು ನನಗೆ ಮತ್ತು ಪ್ರಪಂಚದಾದ್ಯಂತದ ಅಸಂಖ್ಯಾತ ಇತರರಿಗೆ ಸ್ಫೂರ್ತಿಯಾಗಿದೆ.ಈ ಯುಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಹೆಮ್ಮೆಪಡುತ್ತೇನೆ.ನೀವು ಇನ್ನೂ ಮುಂದೆ ಹೆಚ್ಚಿನ ಸಾಧನೆಗಳನ್ನು ಹೊಂದಲಿದ್ದಿರಿ ಎನ್ನುವುದು ನನಗೆ ಖಾತ್ರಿಯಿದೆ, ಆದರೆ ಇದೀಗ ಇದನ್ನು ಆನಂದಿಸಿ!"  ಎಂದು ಅವರು ಅಭಿನಂದಿಸಿದ್ದಾರೆ.

ಈಗ ಟೆನಿಸ್ ಇತಿಹಾಸದಲ್ಲಿ 21 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಮೊದಲ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ನಡಾಲ್ ಪಾತ್ರರಾಗಿದ್ದಾರೆ.

ಇದನ್ನೂ ಓದಿ : Rishabh Pant: ರಿಷಭ್ ಪಂತ್‌ನಿಂದ ಈ ಮೂವರು ಆಟಗಾರರ ವೃತ್ತಿಜೀವನಕ್ಕೆ ಕಂಟಕ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News