Asia Team Championships: ಪಿವಿ ಸಿಂಧು ಭರ್ಜರಿ ಕಂಬ್ಯಾಕ್… ಚೀನಾ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಬ್ಯಾಡ್ಮಿಂಟನ್ ತಾರೆ

Asia Team Championships, PV Sindhu: ಡಬ್ಲ್ಯು ಗುಂಪಿನಲ್ಲಿ ಕೇವಲ ಎರಡು ತಂಡಗಳಿದ್ದ ಕಾರಣ ಮೊದಲ ಪಂದ್ಯಕ್ಕೂ ಮುನ್ನವೇ ನಾಕೌಟ್‌ನಲ್ಲಿ ಭಾರತದ ಗೆಲುವು ಖಚಿತವಾಗಿತ್ತು, ಆದರೆ ಅಗ್ರ ಶ್ರೇಯಾಂಕದ ಚೀನಾವನ್ನು ಸೋಲಿಸುವ ಮೂಲಕ ತಂಡವು ಹೆಮ್ಮೆಯಿಂದ ನಾಕೌಟ್ ಪ್ರವೇಶಿಸಿದೆ.

Written by - Bhavishya Shetty | Last Updated : Feb 14, 2024, 03:56 PM IST
    • ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು
    • ನಾಲ್ಕು ತಿಂಗಳ ನಂತರ ಭರ್ಜರಿ ಕಂಬ್ಯಾಕ್ ಮಾಡಿದ್ದಲ್ಲದೆ, ಅದ್ಭುತ ಗೆಲುವು ದಾಖಲಿಸಿದ್ದಾರೆ
    • ಏಷ್ಯಾ ಟೀಮ್ ಚಾಂಪಿಯನ್‌ಶಿಪ್’ನಲ್ಲಿ ಬಲಿಷ್ಠ ಚೀನಾ ತಂಡ ವಿರುದ್ಧ ಭಾರತಕ್ಕೆ ಗೆಲುವು
Asia Team Championships: ಪಿವಿ ಸಿಂಧು ಭರ್ಜರಿ ಕಂಬ್ಯಾಕ್… ಚೀನಾ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಬ್ಯಾಡ್ಮಿಂಟನ್ ತಾರೆ title=
PV Sindhu

Asia Team Championships, PV Sindhu: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಗಾಯಗೊಂಡು ವಿಶ್ರಾಂತಿ ಪಡೆಯುತ್ತಿದ್ದರು. ಇದೀಗ ನಾಲ್ಕು ತಿಂಗಳ ನಂತರ ಭರ್ಜರಿ ಕಂಬ್ಯಾಕ್ ಮಾಡಿದ್ದಲ್ಲದೆ, ಅದ್ಭುತ ಗೆಲುವು ದಾಖಲಿಸಿದ್ದಾರೆ. ಈ ಗೆಲುವಿನೊಂದಿಗೆ ಭಾರತವು ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಶಿಪ್ (BATC) ಮಹಿಳೆಯರ ಸ್ಪರ್ಧೆಯಲ್ಲಿ ಬಲಿಷ್ಠ ಚೀನಾ ತಂಡವನ್ನು 3-2 ಅಂತರದಿಂದ ಸೋಲಿಸಿದೆ.

ಇದನ್ನೂ ಓದಿ: ರಿಷಿ ಅಭಿನಯದ "ರುದ್ರ ಗರುಡ ಪುರಾಣ" ಚಿತ್ರದ ಚಿತ್ರೀಕರಣ ಪೂರ್ಣ

ಡಬ್ಲ್ಯು ಗುಂಪಿನಲ್ಲಿ ಕೇವಲ ಎರಡು ತಂಡಗಳಿದ್ದ ಕಾರಣ ಮೊದಲ ಪಂದ್ಯಕ್ಕೂ ಮುನ್ನವೇ ನಾಕೌಟ್‌ನಲ್ಲಿ ಭಾರತದ ಗೆಲುವು ಖಚಿತವಾಗಿತ್ತು, ಆದರೆ ಅಗ್ರ ಶ್ರೇಯಾಂಕದ ಚೀನಾವನ್ನು ಸೋಲಿಸುವ ಮೂಲಕ ತಂಡವು ಹೆಮ್ಮೆಯಿಂದ ನಾಕೌಟ್ ಪ್ರವೇಶಿಸಿದೆ.

ಇದನ್ನೂ ಓದಿ: ಟೆಸ್ಟ್ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ಪ್ಲೇಯಿಂಗ್ 11 ಪ್ರಕಟ: ಈ ಆಟಗಾರರಿಗೆ ಅಧಿಕೃತ ಸ್ಥಾನ

ಕಳೆದ ವರ್ಷ ಫ್ರೆಂಚ್ ಓಪನ್ ವೇಳೆ ಮೊಣಕಾಲಿನ ನೋವಿನಿಂದಾಗಿ ಪಿವಿ ಸಿಂಧು ಬ್ಯಾಡ್ಮಿಂಟನ್ ಅಂಗಳದಿಂದ ದೂರವಿದ್ದರು. ಈಗ ಪುನರಾಗಮನ ಮಾಡಿ, 40 ನಿಮಿಷಗಳಲ್ಲಿ 21-17 21-15 ರಲ್ಲಿ ಚೀನಾದ ಉತ್ತಮ ಶ್ರೇಯಾಂಕದ ಹಾನ್ ಯುಯೆ ಅವರನ್ನು ಸೋಲಿಸುವ ಮೂಲಕ ಭಾರತಕ್ಕೆ 1-0 ಮುನ್ನಡೆ ನೀಡಿದರು. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ 28ರ ಹರೆಯದ ಸಿಂಧು 11ನೇ ಶ್ರೇಯಾಂಕ ಹೊಂದಿದ್ದು, ಹೆನ್ ಯುಯಿ ಕಿ ವಿಶ್ವದ ಎಂಟನೇ ಶ್ರೇಯಾಂಕದಲ್ಲಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News