ನವದೆಹಲಿ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ 2021 ಟೂರ್ನಿಯ 35 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ವಿರುದ್ಧ ಆರು ವಿಕೆಟ್ ಗಳ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬೆಂಗಳೂರಿಗೆ ಮೊದಲು ಬ್ಯಾಟಿಂಗ್ ಅವಕಾಶ ನೀಡಿದ ಚೆನ್ನೈ (Chennai Super Kings) ತಂಡವು ಆರ್ಸಿಬಿಯನ್ನು 20 ಓವರ್ ಗಳಲ್ಲಿ 156 ರನ್ ಗಳಿಗೆ ಕಟ್ಟಿ ಹಾಕಿತು.
ಇದನ್ನೂ ಓದಿ: Video: 'ಧೋನಿ ರಿವ್ಯೂ ಸಿಸ್ಟಮ್' ಅನ್ನು ತಪ್ಪಿಸುವುದು ಭಾರೀ ಕಷ್ಟ, ಈ ರೀತಿ ಬ್ಯಾಟ್ಸ್‌ಮನ್ ಅನ್ನು ಚಿಂತೆಗೀಡು ಮಾಡಿದ ಮಹಿ
ಆರಂಭದಲ್ಲಿ ದೇವದತ್ ಪಡಿಕ್ಕಲ್ 70 ಹಾಗೂ ವಿರಾಟ್ ಕೊಹ್ಲಿ 53, ರನ್ ಗಳ ನೆರವಿನಿಂದಾಗಿ ಬೃಹತ್ ಮೊತ್ತವನ್ನು ಗಳಿಸುವ ಸೂಚನೆ ನೀಡಿತ್ತು.ಇಬ್ಬರ ಮೊದಲನೇ ವಿಕೆಟ್ ಜೊತೆಯಾಟವೆ 111 ರನ್ ಗಳಾಗಿತ್ತು, ಹೀಗಾಗಿ ಬೃಹತ್ ಮೊತ್ತವನ್ನು ಗಳಿಸಬಹುದು ಎನ್ನುವ ನಿರೀಕ್ಷೆ ಇತ್ತು.
ಆದರೆ ವಿರಾಟ್ ಕೊಹ್ಲಿ ವಿಕೆಟ್ ಪತನದೊಂದಿಗೆ ಬೆಂಗಳೂರು ತಂಡವು ಬೇಗನೆ ವಿಕೆಟ್ ಗಳನ್ನು ಕಳೆದುಕೊಂಡಿತು. ಅದರಲ್ಲೂ 17ನೇ ಓವರ್ ನಲ್ಲಿ ಡಿವಿಲಿಯರ್ಸ್ ಹಾಗೂ ದೇವದತ್ ಪಡಿಕ್ಕಲ್ ವಿಕೆಟ್ ಒಪ್ಪಿಸಿದ್ದರಿಂದಾಗಿ ರನ್ ವೇಗಕ್ಕೆ ಕಡಿವಾಣ ಬಿದ್ದಿತು.
Back to back wins for @ChennaiIPL! 👏 👏
A convincing victory for #CSK as they beat #RCB by 6⃣ wickets. 👌 👌 #VIVOIPL #RCBvCSK
Scorecard 👉 https://t.co/2ivCYOWCBI pic.twitter.com/qKo58oFAJb
— IndianPremierLeague (@IPL) September 24, 2021
ತದನಂತರ ಬಂತಹ ಆಟಗಾರರು ಯಾರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಆಟವಾಡಲಿಲ್ಲ,ಹೀಗಾಗಿ ಬೆಂಗಳೂರು ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು.ಈ ಗೆಲುವಿನ ಗುರಿಯನ್ನು ಬೆನ್ನತ್ತಿದ ಚೆನ್ನೈ ತಂಡವು ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡವನ್ನು ಸೇರಿತು.
ಇದನ್ನೂ ಓದಿ: IPL 2021: ಮರಳುಗಾಡಿನಲ್ಲಿ ಐಪಿಎಲ್ ಹಬ್ಬ, ಮುಂಬೈ V/s ಚೆನ್ನೈ ಸೆಣಸಾಟ
ಆರಂಭದಲ್ಲಿ ರುತುರಾಜ್ ಗಾಯಕ ವಾಡ್ ಮತ್ತು ದುಪ್ಲೆಸಿಸ್ ಅವರು ಉತ್ತಮ ಅಡಿಪಾಯ ಹಾಕಿದ ಹಿನ್ನಲೆಯಲ್ಲಿ ನಂತರ ಬಂದಂತಹ ಮೊಯಿನ್ ಅಲಿ ಹಾಗೂ ಅಂಬಟಿ ರಾಯಡು ಕ್ರಮವಾಗಿ 23, 32 ರನ್ ಗಳನ್ನು ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ಸೇರಿಸುವಲ್ಲಿ ನೆರವಾದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.