ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮುಂಬೈ ತಂಡವು ಫಿಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು ತಂಡವು ಮನಾನ್ ವೋಹ್ರಾ(45) ಬ್ರೆಂಡನ್ ಮೆಕ್ಲಂ(37) ಮತ್ತು ನಾಯಕ ವಿರಾಟ್ ಕೊಹ್ಲಿ ( 32) ರನ್ ಗಳ ನೆರವಿನಿಂದ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು.
Can there be a better birthday gift for @AnushkaSharma than to see @RCBTweets led by @imVkohli win? Here's that moment. #RCBvMI #VIVOIPL pic.twitter.com/rN3S7BdEKL
— IndianPremierLeague (@IPL) May 1, 2018
That is it! The @RCBTweets have defended 167 to beat #MI by 14 runs. This is their 3rd win the season. #VIVOIPL #RCBvMI
Details - https://t.co/ha0Z6Qlsaa pic.twitter.com/LBH1kRhVGk
— IndianPremierLeague (@IPL) May 1, 2018
ಈ ಗುರಿಯನ್ನು ಬೆನ್ನತ್ತಿದ ಮುಂಬೈ ತಂಡವು 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 153 ರನ್ ಗಳಿಸಲಷ್ಟೇ ಯಶಸ್ವಿಯಾಯಿತು. ಮುಂಬೈ ತಂಡದ ಪರ ಹಾರ್ದಿಕ್ ಪಾಂಡ್ಯ ಅರ್ಧ ಶತಕ ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ತಂದಿದ್ದರು ಆದರೆ ಕೊನೆಯಲ್ಲಿ ವಿಜಯ ಲಕ್ಷ್ಮಿ ಬೆಂಗಳೂರು ತಂದಕ್ಕೆ ಒಲಿದಳು ಆ ಮೂಲಕ ಬೆಂಗಳೂರು 14 ರನ್ ಗಳ ಗೆಲುವು ಸಾಧಿಸಿತು.