Indian Premier League 2024: ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಇರುವುದರಿಂದ ಟಿ-20 ಲೀಗ್ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (UAE)ಗೆ ಸ್ಥಳಾಂತರಿಸಬಹುದು ಎಂಬ ವರದಿಗಳ ಹಿನ್ನೆಲೆ ಜಯ್ ಶಾ ಸ್ಪಷ್ಟನೆ ನೀಡಿದ್ದಾರೆ.
Rishabh Pant in IPL 2024: ಭಾರತದ ಕ್ರಿಕೇಟಿಗ ರಿಷಬ್ ಪಂತ್ ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಆಟ ಆಡಲಿದ್ದಾರೆಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೆ ನೀಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Prasidh Krishna News: ಪ್ರಸಿದ್ಧ್ ಕೃಷ್ಣ ಗಾಯಗೊಂಡಿರುವ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರನ್ನು ಆಯ್ಕೆ ಮಾಡಲಾಗಿಲ್ಲ. ಶುಕ್ರವಾರ ನಡೆದ ರಣಜಿ ಟ್ರೋಫಿ ಪಂದ್ಯದ ವೇಳೆ ಟೀಂ ಇಂಡಿಯಾದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರು ಗಾಯಗೊಂಡಿದ್ದಾರೆ.
Rahul Dravid to be continue as head coach: ಎಲ್ಲಾ ಊಹಾಪೋಹಗಳ ಬಳಿಕ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಟೀಮ್ ಇಂಡಿಯಾದ ಮುಖ್ಯ ಕೋಚ್ ಬಗ್ಗೆ ಮಹತ್ವದ ಘೋಷಣೆ ಹೊರಡಿಸಿದೆ.
IPL auction 2024: ಶುಕ್ರವಾರ ಫ್ರಾಂಚೈಸಿಗಳಿಗೆ ನೀಡಿರುವ ಮಾಹಿತಿ ಪ್ರಕಾರ, 2024ನೇ ಸಾಲಿನ ಐಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆಯ ದಿನಾಂಕ ಅಂತಿಮಗೊಂಡಿದೆ. ಸ್ಪರ್ಧೆಯಲ್ಲಿರುವ ಎಲ್ಲಾ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರರ ಅಂತಿಮ ಪಟ್ಟಿಯನ್ನು ನವೆಂಬರ್ 26 ರೊಳಗೆ ಪ್ರಕಟ ಮಾಡಬೇಕಿದೆ ಎಂದು ಬಿಸಿಸಿಐ ತಿಳಿಸಿದೆ.
World Cup 2023 Schedule: ಎಚ್’ಸಿಎ 45 ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಮಾತ್ರ ಆಯೋಜಿಸಲಿದೆ. ಈ ಮೂರು ಪಂದ್ಯಗಳು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿವೆ.
Z Category Security for Sourav Ganguly: ಗಂಗೂಲಿ ಅವರ ಭದ್ರತೆಯನ್ನು ಹೆಚ್ಚಿಸಲು ಮಮತಾ ಸರ್ಕಾರ ಮಂಗಳವಾರ ನಿರ್ಧರಿಸಿದೆ. ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ನೀಡಲಾಗಿದ್ದ ಭದ್ರತೆ ಅವಧಿ ಮುಗಿದಿದ್ದು, ಪ್ರೋಟೋಕಾಲ್ ಪ್ರಕಾರ ಅವರ ಭದ್ರತೆಯ ಬಗ್ಗೆ ಪರಿಶೀಲನೆ ನಡೆಸಿ ಅದನ್ನು Z ಕೆಟಗರಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
India vs Australia: ಪ್ರಸಕ್ತ ಐಪಿಎಲ್ ನಲ್ಲಿ ಸತತ ಸೋಲು ಕಾಣುತ್ತಿರುವ ಆಲ್ ರೌಂಡರ್ ಗೆ ತಂಡದಲ್ಲಿ ಸ್ಥಾನ ಲಭಿಸಿದೆ. ಡಬ್ಲ್ಯುಟಿಸಿ ಅಂತಿಮ ತಂಡದಲ್ಲಿ ಸ್ಥಾನ ಪಡೆದಿರುವ ಆಲ್ ರೌಂಡರ್ ಬೇರೆ ಯಾರು ಅಲ್ಲ. ಅವೆರೇ ಶಾರ್ದೂಲ್ ಠಾಕೂರ್. ಈ ಬಾರಿಯ ಐಪಿಎಲ್ ನಲ್ಲಿ ಇದುವರೆಗೆ ಕಳಪೆ ಪ್ರದರ್ಶನ ತೋರಿದ್ದಾರೆ.
Indian Cricket Team Chief Selector: ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಜೀ ನ್ಯೂಸ್ನ ಕುಟುಕು ಕಾರ್ಯಾಚರಣೆ 'ಗೇಮ್ ಓವರ್' ನಲ್ಲಿ ಹಲವಾರು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. T20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಕಳಪೆ ಪ್ರದರ್ಶನದ ನಂತರ, ಅವರನ್ನು ಮುಖ್ಯ ಆಯ್ಕೆಗಾರ ಹುದ್ದೆಯಿಂದ ತೆಗೆದುಹಾಕಲಾಯಿತು, ಆದರೆ 2 ತಿಂಗಳ ನಂತರ ಮತ್ತೆ ಅವರಿಗೆ ಅಧಿಕಾರ ನೀಡಲಾಯಿತು.
BCCI Apex Council Meeting: ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸದಸ್ಯರ ಸಭೆಯು ಡಿಸೆಂಬರ್ 21 ರಂದು ನಡೆಯಲಿದೆ. ಈ ಸಭೆಯ ನಂತರ ಭಾರತೀಯ ಕ್ರಿಕೆಟ್ನಲ್ಲಿ ಹಲವು ದೊಡ್ಡ ಬದಲಾವಣೆಗಳನ್ನು ಕಾಣಬಹುದು. ಈ ಸಭೆಯ ನಂತರ ಬಿಸಿಸಿಐ ಹಲವು ಸ್ವರೂಪಗಳಿಗೆ ವಿವಿಧ ತರಬೇತುದಾರರು ಮತ್ತು ನಾಯಕರನ್ನು ಸಹ ಘೋಷಿಸಬಹುದು. ರೋಹಿತ್ ಶರ್ಮಾ ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು, T20 ತಂಡದ ನಾಯಕತ್ವವನ್ನು ನೀಡಬೇಕೆ ಇಲ್ಲವೇ ಎಂಬುದನ್ನು ನಿರ್ಧರಿಸಬಹುದು.
Indian Cricketers Salary Hike: ಕಳೆದ ನಾಲ್ಕು ವರ್ಷಗಳಲ್ಲಿ ಬಿಸಿಸಿಐ ಕ್ರಿಕೆಟಿಗರ ವೇತನವನ್ನು ಯಾವುದೇ ರೀತಿಯಲ್ಲಿ ಹೆಚ್ಚಿಸಿಲ್ಲ. ಈಗ ಹೆಚ್ಚಿನ ಕ್ರಿಕೆಟ್ ಪಂದ್ಯಗಳನ್ನು ಆಡಲಾಗುತ್ತಿದ್ದರೂ, ಬಿಸಿಸಿಐ ಐಪಿಎಲ್ಗೆ ಇನ್ನೂ ಎರಡು ಫ್ರಾಂಚೈಸಿಗಳನ್ನು ವಿಸ್ತರಿಸಿದೆ. ಆದರೆ ಒಪ್ಪಂದ ಮತ್ತು ಗ್ರೇಡ್ ಪ್ರಕಾರ ನೀಡಲಾದ ಮೊತ್ತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
Rohit Sharma T20 Captaincy: ಇದೀಗ, ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ವರದಿಯೊಂದರಲ್ಲಿ, ರೋಹಿತ್ ಬದಲಿಗೆ ಹಾರ್ದಿಕ್ ಪಾಂಡ್ಯಗೆ ಟಿ20 ಮಾದರಿಯಲ್ಲಿ ನಾಯಕತ್ವ ನೀಡುವ ಘೋಷಣೆಯನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದು ಹೇಳಲಾಗಿದೆ
IND vs NZ Series: ಭಾರತ vs ನ್ಯೂಜಿಲೆಂಡ್ ಸರಣಿ ಹಿನ್ನೆಲೆಯಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದು ಗೊತ್ತೇ ಇದೆ. ಭಾರತ ಮತ್ತು ನ್ಯೂಜಿಲೆಂಡ್ ಸರಣಿಯ ಪಂದ್ಯಗಳನ್ನು ಹೊಸ ವೈಶಿಷ್ಟ್ಯಗಳೊಂದಿಗೆ ನೇರ ಪ್ರಸಾರ ಮಾಡಲಾಗುತ್ತದೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ಹೊಸ ಅನುಭವವನ್ನು ನೀಡಲು 'ಇನ್-ಗೇಮ್ ಲ್ಯಾಂಗ್ವೇಜ್ ಸೆಲೆಕ್ಟರ್' ಮತ್ತು 'ರ್ಯಾಪಿಡ್ ರೀಕ್ಯಾಪ್' ನಂತಹ ಕೆಲವು ಹೊಸ ವೈಶಿಷ್ಟ್ಯಗಳನ್ನು ತಂದಿದೆ.
ಜಸ್ಪ್ರೀತ್ ಬುಮ್ರಾ ಅವರು ಬೆನ್ನುನೋವಿನ ಕಾರಣದಿಂದ ಪಂದ್ಯದಿಂದ ಹೊರಗುಳಿದಿದ್ದರು. ಬುಮ್ರಾ ಸ್ಥಾನವನ್ನು ಚಹಾರ್ ತುಂಬುತ್ತಾರೆ ಎಂದು ಭಾವಿಸಿದರೆ, ಇದೀಗ ಸಮಸ್ಯೆ ಹಿನ್ನೆಲೆಯಲ್ಲಿ ಚಹಾರ್ ಕೂಡ ಪಂದ್ಯದಿಂದ ಹೊರಗುಳಿದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.