ಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿಗೆ ಇದೆಯೇ ಸ್ಥಾನ? ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಹೇಳಿದ್ದು ಹೀಗೆ…

Ajit Agarkar statement on Virat Kohli selection: ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ವಿರಾಟ್ ಕೊಹ್ಲಿ ಹಾಗೂ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಹೊಗಳಿದ್ದಾರೆ.

Written by - Bhavishya Shetty | Last Updated : Apr 10, 2024, 08:04 PM IST
    • ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ವಿಶ್ವಕಪ್‌ಗೆ ತಂಡ ಪ್ರಕಟ ಸಾಧ್ಯತೆ
    • ಆಯ್ಕೆಗಾರರ ​​ತಂಡವು ಐಪಿಎಲ್ 2024ರಲ್ಲಿ ಆಟಗಾರರ ಪ್ರದರ್ಶನದ ಮೇಲೆ ಕಣ್ಣಿಟ್ಟಿದೆ
    • ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಅಜಿತ್ ಅಗರ್ಕರ್ ಹೇಳಿಕೆ
ಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿಗೆ ಇದೆಯೇ ಸ್ಥಾನ? ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಹೇಳಿದ್ದು ಹೀಗೆ… title=
Ajit Agarkar-Virat Kohli

Ajit Agarkar statement on Virat Kohli selection: 2024ರ ಟಿ20 ವಿಶ್ವಕಪ್‌’ಗೆ ಬಲಿಷ್ಠ ತಂಡವನ್ನು ಆಯ್ಕೆ ಮಾಡುವ ಒತ್ತಡದಲ್ಲಿ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಇದ್ದಾರೆ. ಅಷ್ಟೇ ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಹಲವು ಪ್ರತಿಭಾವಂತ ಯುವ ಆಟಗಾರರು ಟೀಂ ಇಂಡಿಯಾದ ಬಾಗಿಲು ತಟ್ಟುತ್ತಿದ್ದಾರೆ. ಅವರಲ್ಲಿ ಮಯಾಂಕ್ ಯಾದವ್, ರಿಂಕು ಸಿಂಗ್, ರವಿ ಬಿಶ್ವೋಯ್ ಮತ್ತು ಶಿವಂ ದುಬೆ ಅವರಂತಹ ಆಟಗಾರರು ಕೂಡ ಇದ್ದಾರೆ.

ಅಂದಹಾಗೆ ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಗೆಲುವು ನಿಶ್ಚಿತ, ಜನ ಸೇವೆ ಖಚಿತ: ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ವಿಶ್ವಾಸ

ಅದಕ್ಕೂ ಮುನ್ನ ಆಯ್ಕೆಗಾರರ ​​ತಂಡವು ಐಪಿಎಲ್ 2024ರಲ್ಲಿ ಆಟಗಾರರ ಪ್ರದರ್ಶನದ ಮೇಲೆ ಕಣ್ಣಿಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ವಿರಾಟ್ ಕೊಹ್ಲಿ ಹಾಗೂ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಹೊಗಳಿದ್ದಾರೆ.

“ವಿರಾಟ್ ಕೊಹ್ಲಿ ಈ ಪೀಳಿಗೆಗೆ ಮಾನದಂಡವನ್ನು ಹೊಂದಿಸುತ್ತಾರೆ. 15 ವರ್ಷಗಳ ವೃತ್ತಿ ಜೀವನದಲ್ಲಿ ಅವರು ಮಾಡಿರುವ ಸಾಧನೆ ಅದ್ಭುತ. ತಮ್ಮ ಫಿಟ್ನೆಸ್ ಮಟ್ಟದಲ್ಲಿ ಒಂದು ಉದಾಹರಣೆಯಾಗಿರಿಸಿದ್ದಾರೆ. ಕೊಹ್ಲಿಯ ಫಿಟ್ನೆಸ್ ಬ್ಲೂಪ್ರಿಂಟ್ ಇಡೀ ಭಾರತೀಯ ಕ್ರಿಕೆಟ್ ಮೇಲೆ ಪ್ರಭಾವ ಬೀರಿದೆ” ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.

“ಎಂಎಸ್ ಧೋನಿಯನ್ನು ಶ್ರೇಷ್ಠ ನಾಯಕ ಎಂದು ಕರೆಯುತ್ತೀರಿ. ಏಕೆಂದರೆ ಅವರಿಗೆ ಆಟದ ಬಗ್ಗೆ ತಿಳುವಳಿಕೆ, ಆಟದ ಬಗ್ಗೆ ಸಮರ್ಪಣೆ ಇತ್ತು. ಏನಾಗುತ್ತಿದೆ, ಆಟ ಹೇಗೆ ಬದಲಾಗುತ್ತಿದೆ ಎಂಬುದು ಅವರಿಗೆ ಚೆನ್ನಾಗಿ ಅರಿವಿಗೆ ಬಂದಿತ್ತು. ಆಟದ ಬಗ್ಗೆ ಎಲ್ಲವನ್ನೂ ತಿಳಿದಿದ್ದ ಆಟಗಾರ ಅವರು. ಅದಕ್ಕಾಗಿಯೇ ನಾವು ಅವರನ್ನು ಶ್ರೇಷ್ಠ ನಾಯಕ ಎಂದು ಕರೆಯುತ್ತೇವೆ” ಎಂದಿದ್ದಾರೆ.

ಇದನ್ನೂ ಓದಿ: ಈ ಒಣಹಣ್ಣು ಸಾಕು… ಬೆಳಗ್ಗೆ ಎದ್ದಂತೇ ತಿಂದರೆ ಸೊಂಟದ ಸುತ್ತ ಸಂಗ್ರಹವಾದ ಕೊಬ್ಬು ಕೇವಲ 5 ದಿನದಲ್ಲಿ ಇಳಿಯುತ್ತೆ!

ಇನ್ನು ಅಗರ್ಕರ್ ನೀಡಿರುವ ಈ ಹೇಳಿಕೆಗಳನ್ನು ಗಮನಿಸಿದರೆ ವಿರಾಟ್ ಕೊಹ್ಲಿ T20 ವಿಶ್ವಕಪ್ 2024 ತಂಡದ ಭಾಗವಾಗಲಿದ್ದಾರೆ ಎಂಬುದು ಸ್ಪಷ್ಟವಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News