Bhuvneshwar Kumar, Ranji Trophy: ಭುವನೇಶ್ವರ್ ಕುಮಾರ್ ರಣಜಿ ಟ್ರೋಫಿಯಲ್ಲಿ ಅದ್ಭುತ ಪುನರಾಗಮನ ಮಾಡಿದ್ದಾರೆ. ಜೊತೆಗೆ ಪ್ರಥಮ ದರ್ಜೆ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ಫಿಗರ್ ಎಂದೆನಿಸಿಕೊಂಡಿದ್ದಾರೆ. ಭುವನೇಶ್ವರ್ 2023-24ರ ರಣಜಿ ಟ್ರೋಫಿಯಲ್ಲಿ ಉತ್ತರ ಪ್ರದೇಶ ಪರ ಆಡುತ್ತಿದ್ದಾರೆ. ಬಂಗಾಳ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಭುವಿ 8 ವಿಕೆಟ್ ಪಡೆದು ಸಂಚಲನ ಮೂಡಿಸಿದ್ದರು. ಕಳೆದ 6 ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿರುವ ಭುವನೇಶ್ವರ್ ಮತ್ತೊಮ್ಮೆ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಎಂಟ್ರಿ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಹಾನಗಲ್ ಪ್ರಕರಣವನ್ನು ದುಡ್ಡು ಕೊಟ್ಟು ಮುಚ್ಚಿಹಾಕಲು ಯತ್ನ : ಬಸವರಾಜ ಬೊಮ್ಮಾಯಿ
ಉತ್ತರ ಪ್ರದೇಶ ಪರ ಆಡುತ್ತಿರುವ ಭುವನೇಶ್ವರ್, 6 ವರ್ಷಗಳ ನಂತರ ರಣಜಿ ಟ್ರೋಫಿಗೆ ಮರಳಿದ್ದಾರೆ. ಎಂಟ್ರಿಕೊಟ್ಟ ಮೊದಲ ಪಂದ್ಯದಲ್ಲೇ 8 ವಿಕೆಟ್’ಗಳನ್ನು ಕಬಳಿಸುವ ಪವಾಡ ಸೃಷ್ಟಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಉತ್ತರ ಪ್ರದೇಶ ಕೇವಲ 60 ರನ್’ಗಳಿಗೆ ಸೋಲನುಭವಿಸಿತು. ಇದಕ್ಕೆ ಪ್ರತಿಯಾಗಿ ಭುವನೇಶ್ವರ್ ಕುಮಾರ್ ಬ್ಯಾಟಿಂಗ್’ಗೆ ಬಂದ ಬಂಗಾಳ ತಂಡವನ್ನು ಬೆಂಡೆತ್ತಿದ್ದರು. 22 ಓವರ್’ಗಳಲ್ಲಿ 41 ರನ್ ನೀಡಿ 8 ವಿಕೆಟ್ ಪಡೆದ ಅವರು, 5 ಮೇಡನ್ ಓವರ್’ಗಳನ್ನೂ ಬೌಲ್ ಮಾಡಿದರು.
ಭುವನೇಶ್ವರ್ ಅವರ ಅದ್ಭುತ ಬೌಲಿಂಗ್’ನಿಂದಾಗಿ ಉತ್ತರ ಪ್ರದೇಶ, ಬಂಗಾಳವನ್ನು 188 ರನ್’ಗಳಿಗೆ ಆಲೌಟ್ ಮಾಡಿದೆ. ಭುವಿ ಹೊರತುಪಡಿಸಿ ಉಳಿದ ಎರಡು ವಿಕೆಟ್’ಗಳನ್ನು ಯಶ್ ದಯಾಳ್ ಪಡೆದಿದ್ದಾರೆ. ಮೊದಲ ಇನಿಂಗ್ಸ್’ನಲ್ಲಿ 188 ರನ್‌ಗಳಿಗೆ ಆಲೌಟ್ ಆಗಿದ್ದ ಬಂಗಾಳ 128 ರನ್’ಗಳ ಮುನ್ನಡೆ ಸಾಧಿಸಿದೆ.
ಭುವನೇಶ್ವರ್ ಭಾರತದ ಪರ ಎಲ್ಲಾ ಮೂರು ಸ್ವರೂಪಗಳನ್ನು ಆಡಿರುವ ಆಟಗಾರ. ಆದರೆ ನವೆಂಬರ್ 2022 ರಲ್ಲಿ ಭಾರತಕ್ಕಾಗಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು, ಅದು ನ್ಯೂಜಿಲೆಂಡ್ ವಿರುದ್ಧದ ಟಿ 20 ಆಗಿತ್ತು. ಆದರೆ ಭುವಿ ಜನವರಿ 2022 ರಲ್ಲಿ ತಮ್ಮ ಕೊನೆಯ ODI ಮತ್ತು ಜನವರಿ 2018 ರಲ್ಲಿ ಟೆಸ್ಟ್ ಆಡಿದರು. ಇದೀಗ ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಆಯ್ಕೆಗಾರರ ಗಮನ ಸೆಳೆಯುವ ಯತ್ನದಲ್ಲಿದ್ದಾರೆ. ಇದೀಗ ಅವರು ಟೀಂ ಇಂಡಿಯಾಗೆ ಪುನರಾಗಮನ ಮಾಡುತ್ತಾರೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: Health Tips: ಫ್ಯಾಟಿ ಲಿವರ್ ರೋಗಿಗಳು ಈ ಆಹಾರ ಸೇವಿಸಿ ಕಾಯಿಲೆಗಳಿಗೆ ಗುಡ್ ಬೈ ಹೇಳಿ!
ಭುವನೇಶ್ವರ್ ಇದುವರೆಗೆ 21 ಟೆಸ್ಟ್, 121 ಏಕದಿನ ಮತ್ತು 87 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ ಎಂಬುದು ಗಮನಾರ್ಹ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.