IND vs Aus Border Gavaskar Trophy 2024 Schedule: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪ್ರತಿ ವರ್ಷ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ವೇಳಾಪಟ್ಟಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ. ಭಾರತ ಕ್ರಿಕೆಟ್ ತಂಡ 2024 ರಲ್ಲಿ ಅಂದರೆ ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.
ಇದನ್ನೂ ಓದಿ: ಕಿರುತೆರೆಗೆ ಎಂಟ್ರಿ ಕೊಟ್ಟ ಖ್ಯಾತ ನಟಿ.. ʻಮೈನಾʼದಲ್ಲಿ ಚಿತ್ರತಾರೆ ಭವ್ಯಾ!
ಎರಡು ತಿಂಗಳ ಸುದೀರ್ಘ ಪ್ರವಾಸದ ಮೊದಲ ಪಂದ್ಯ ನವೆಂಬರ್ 22 ರಿಂದ ನಡೆಯಲಿದೆ. ಮೊದಲ ಪಂದ್ಯಕ್ಕೆ ಪರ್ತ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಇನ್ನೊಂದೆಡೆ ಅಡಿಲೇಡ್ ಓವಲ್ ಮೈದಾನವು ಡೇ-ನೈಟ್ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ 2024 ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳು ನಡೆಯಲಿವೆ. 32 ವರ್ಷಗಳ ನಂತರ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 5 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿವೆ. 1991-92ರಲ್ಲಿ ಕೊನೆಯ ಬಾರಿ 5 ಪಂದ್ಯಗಳ ಸರಣಿಯನ್ನು ಆಡಲಾಗಿತ್ತು. ಆತಿಥೇಯ ಆಸ್ಟ್ರೇಲಿಯಾ ಈ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿತು. ಆದರೆ ಈ ಸರಣಿಯ ಸಿಡ್ನಿಯಲ್ಲಿ ನಡೆದ ಟೆಸ್ಟ್’ನಲ್ಲಿ, ರವಿಶಾಸ್ತ್ರಿ ದ್ವಿಶತಕ ಗಳಿಸಿದ್ದರು, ಮತ್ತು ಸಚಿನ್ ತೆಂಡೂಲ್ಕರ್ ಪರ್ತ್ ಪಿಚ್’ನಲ್ಲಿ ಬ್ಯಾಟಿಂಗ್ ಮಾಡಿದ್ದರು, ಇದರಲ್ಲಿ ಅವರು 114 ರನ್’ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದ್ದು ಮರೆಯಲಾಗದ ವಿಷಯ.
ಈ ಸರಣಿಯು ನವೆಂಬರ್ 22 ರಿಂದ ಪರ್ತ್’ನಲ್ಲಿ ನಡೆಯಲಿರುವ ಪಂದ್ಯದೊಂದಿಗೆ ಪ್ರಾರಂಭವಾಗಲಿದ್ದು, ನವೆಂಬರ್ 26 ರವರೆಗೆ ನಡೆಯಲಿದೆ. ಇದರ ನಂತರ, ಸರಣಿಯ ಎರಡನೇ ಪಂದ್ಯವು ಅಡಿಲೇಡ್ ಓವಲ್‌ನಲ್ಲಿ ಡಿಸೆಂಬರ್ 6-10 ರ ನಡುವೆ ನಡೆಯಲಿದೆ. ಈ ಪಂದ್ಯ ಹಗಲು-ರಾತ್ರಿ ಟೆಸ್ಟ್ ಆಗಿರುತ್ತದೆ. ಮೂರನೇ ಟೆಸ್ಟ್ ಪಂದ್ಯ ಡಿಸೆಂಬರ್ 14-18ರ ನಡುವೆ ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ನಡೆಯಲಿದೆ. ನಾಲ್ಕನೇ ಪಂದ್ಯದಲ್ಲಿ, ಎರಡೂ ತಂಡಗಳು ಡಿಸೆಂಬರ್ 26-30 ರ ನಡುವೆ ಮೆಲ್ಬೋರ್ನ್‌ನಲ್ಲಿ ಮುಖಾಮುಖಿಯಾಗಲಿವೆ. ಸರಣಿಯ ಐದನೇ ಮತ್ತು ಕೊನೆಯ ಪಂದ್ಯವು ಜನವರಿ 3-7 ರ ನಡುವೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
- ಮೊದಲ ಟೆಸ್ಟ್: ನವೆಂಬರ್22-26- ಪರ್ತ್ ಸ್ಟೇಡಿಯಂ, ಪರ್ತ್
- ಎರಡನೇ ಟೆಸ್ಟ್: ಡಿಸೆಂಬರ್6-10- ಅಡಿಲೇಡ್ ಓವಲ್, ಅಡಿಲೇಡ್ (ಡೇ-ನೈಟ್ ಟೆಸ್ಟ್)
- ಮೂರನೇ ಟೆಸ್ಟ್: ಡಿಸೆಂಬರ್14-18- ಗಬ್ಬಾ, ಬ್ರಿಸ್ಬೇನ್
- ನಾಲ್ಕನೇ ಟೆಸ್ಟ್: ಡಿಸೆಂಬರ್ 26-30- ಮೆಲ್ಬೋರ್ನ್ ಕ್ರಿಕೆಟ್ ಮೈದಾನ, ಮೆಲ್ಬೋರ್ನ್
- ಐದನೇ ಟೆಸ್ಟ್: ಜನವರಿ3-7- ಸಿಡ್ನಿ ಕ್ರಿಕೆಟ್ ಮೈದಾನ, ಸಿಡ್ನಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ