ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಚೆನ್ನೈ: ಡೆಲ್ಲಿ ವಿರುದ್ಧದ ಸಮರಕ್ಕೆ ಪ್ಲೇಯಿಂಗ್ 11 ಸಿದ್ಧ! ಹೀಗಿದೆ ನೋಡಿ ಆಡುವ ಬಳಗ

IPL 2024, DC vs CSK: ಡೆಲ್ಲಿ ತಂಡವು ಆಟದ ಎರಡೂ ವಿಭಾಗಗಳಲ್ಲಿ ದುರ್ಬಲವಾಗಿದೆ. ಡೆಲ್ಲಿ ಬ್ಯಾಟ್ಸ್‌ಮನ್‌’ಗಳು ಚೆನ್ನೈನ ಮುಸ್ತಾಫಿಜುರ್ ರೆಹಮಾನ್, ದೀಪಕ್ ಚಹಾರ್, ಮತಿಶಾ ಪತಿರಾನಾ ಮತ್ತು ರವೀಂದ್ರ ಜಡೇಜಾ ಅವರಂತಹ ಬೌಲರ್‌’ಗಳನ್ನು ಎದುರಿಸಬೇಕಾಗುತ್ತದೆ.

Written by - Bhavishya Shetty | Last Updated : Mar 31, 2024, 02:46 PM IST
    • ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯ
    • ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸುವ ತವಕ
    • ಚೆನ್ನೈ ಸಂಭಾವ್ಯ ಪ್ಲೇಯಿಂಗ್ 11 ಹೀಗಿರಲಿದೆ
ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಚೆನ್ನೈ: ಡೆಲ್ಲಿ ವಿರುದ್ಧದ ಸಮರಕ್ಕೆ ಪ್ಲೇಯಿಂಗ್ 11 ಸಿದ್ಧ! ಹೀಗಿದೆ ನೋಡಿ ಆಡುವ ಬಳಗ title=
chennai super kings vs delhi capitals

IPL 2024, DC vs CSK: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯ ಇಂದು ಸಂಜೆ 7.30ಕ್ಕೆ ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಮ್ಮೆ ಪ್ರತಿ ವಿಭಾಗದಲ್ಲೂ ಪ್ರಬಲವಾಗಿ ಕಾಣುತ್ತಿದ್ದು, ಇದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸುವ ತವಕದಲ್ಲಿದೆ.

ಡೆಲ್ಲಿ ತಂಡವು ಆಟದ ಎರಡೂ ವಿಭಾಗಗಳಲ್ಲಿ ದುರ್ಬಲವಾಗಿದೆ. ಡೆಲ್ಲಿ ಬ್ಯಾಟ್ಸ್‌ಮನ್‌’ಗಳು ಚೆನ್ನೈನ ಮುಸ್ತಾಫಿಜುರ್ ರೆಹಮಾನ್, ದೀಪಕ್ ಚಹಾರ್, ಮತಿಶಾ ಪತಿರಾನಾ ಮತ್ತು ರವೀಂದ್ರ ಜಡೇಜಾ ಅವರಂತಹ ಬೌಲರ್‌’ಗಳನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: LSG Vs PBKS : ತವರಿನಲ್ಲಿಯೇ ಗೆಲುವಿನ ಖಾತೆ ತೆರೆದ ಲಕ್ನೋ : 21ರನ್ ಗಳಿಂದ ಗೆಲುವು

ಅಂದಹಾಗೆ ಇಂದಿನ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸಂಭಾವ್ಯ ಪ್ಲೇಯಿಂಗ್ 11 ಹೇಗಿರಲಿದೆ ಎಂಬುದನ್ನು ನೋಡೋಣ.

ಆರಂಭಿಕರು: ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಇಂದಿನ ಐಪಿಎಲ್ ಪಂದ್ಯದಲ್ಲಿ ರಚಿನ್ ರವೀಂದ್ರ ಮತ್ತು ನಾಯಕ ರುತುರಾಜ್ ಗಾಯಕ್ವಾಡ್ ಚೆನ್ನೈ ಸೂಪರ್ ಕಿಂಗ್ಸ್‌’ಗೆ ಓಪನಿಂಗ್ ಮಾಡಬಹುದು. ರಚಿನ್ ರವೀಂದ್ರ ಮತ್ತು ರುತುರಾಜ್ ಗಾಯಕ್ವಾಡ್ ಜೋಡಿಯು ತುಂಬಾ ಅಪಾಯಕಾರಿಯಾಗಿದ್ದು, ಇವರಿಬ್ಬರೂ ಸಹ ಪವರ್-ಪ್ಲೇನಲ್ಲಿ ರನ್ ಗಳಿಸುವಲ್ಲಿ ಪ್ರವೀಣರಾಗಿದ್ದಾರೆ.

ಮಧ್ಯಮ ಕ್ರಮಾಂಕ: ಅಜಿಂಕ್ಯ ರಹಾನೆ ಚೆನ್ನೈ ಸೂಪರ್ ಕಿಂಗ್ಸ್‌’ನ ಆಡುವ ಹನ್ನೊಂದರಲ್ಲಿ 3ನೇ ಸ್ಥಾನಕ್ಕೆ ಪ್ರವೇಶಿಸಬಹುದು. ಡೇರಿಲ್ ಮಿಚೆಲ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌’ಗೆ ಬರಬಹುದು. ಶಿವಂ ದುಬೆ 5ನೇ ಕ್ರಮಾಂಕದ ಬ್ಯಾಟಿಂಗ್ ಸ್ಥಾನವನ್ನು ಪ್ರವೇಶಿಸಬಹುದು.

ಆಲ್ರೌಂಡರ್: ಭಾರತದ ಸ್ಫೋಟಕ ಆಲ್‌ರೌಂಡರ್ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್‌ನ ಪ್ಲೇಯಿಂಗ್ ಹನ್ನೊಂದರಲ್ಲಿ 6 ನೇ ಸ್ಥಾನಕ್ಕೆ ಪ್ರವೇಶಿಸಬಹುದು. ಇನ್ನು ಸಮೀರ್ ರಿಜ್ವಿಗೆ 7ನೇ ಕ್ರಮಾಂಕದಲ್ಲಿ ಅವಕಾಶ ಸಿಗಬಹುದು

8ನೇ ಕ್ರಮಾಂಕ ಮತ್ತು ವಿಕೆಟ್‌ ಕೀಪರ್: ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್‌ನ ಪ್ಲೇಯಿಂಗ್ ಹನ್ನೊಂದರಲ್ಲಿ 8 ನೇ ಸ್ಥಾನಕ್ಕೆ ಪ್ರವೇಶಿಸಬಹುದು.

ಸ್ಪಿನ್ ಬೌಲಿಂಗ್ ವಿಭಾಗ: ಮಹೀಶ ತೀಕ್ಷಣ ಚೆನ್ನೈ ಸೂಪರ್ ಕಿಂಗ್ಸ್‌ ಪ್ಲೇಯಿಂಗ್ ಇಲೆವೆನ್‌’ನಲ್ಲಿ ಸ್ಪಿನ್ ವಿಭಾಗದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ವೇಗದ ಬೌಲಿಂಗ್ ವಿಭಾಗ: ಚೆನ್ನೈ ಸೂಪರ್ ಕಿಂಗ್ಸ್‌’ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ವೇಗದ ಬೌಲಿಂಗ್ ವಿಭಾಗದಲ್ಲಿ ಮುಸ್ತಾಫಿಜುರ್ ರೆಹಮಾನ್ ಮತ್ತು ದೀಪಕ್ ಚಹಾರ್‌ಗೆ ಅವಕಾಶ ನೀಡಬಹುದು. ಮತೀಶಾ ಪತಿರಣ ಕೂಡ ಈ ವಿಭಾಗದಲ್ಲಿ ಸ್ಥಾನ ಪಡೆಯಲಿದ್ದಾರೆ.

ಸಂಭಾವ್ಯ ಪ್ಲೇಯಿಂಗ್ 11:

ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ಮುಸ್ತಾಫಿಜುರ್ ರೆಹಮಾನ್, ಮಹೀಶ ತೀಕ್ಷಣ ಮತ್ತು ದೀಪಕ್ ಚಹಾರ್.

ಇಂಪ್ಯಾಕ್ಟ್ ಪ್ಲೇಯರ್:

ಮತೀಶಾ ಪತಿರಣ

ಇದನ್ನೂ ಓದಿ: ಟಾಸ್’ಗೆ ಬಾರದ ಕೆಎಲ್ ರಾಹುಲ್! ಅಸಲಿ ಕಾರಣ ತಿಳಿಸಿದ ಲಕ್ನೋ ತಂಡದ ನೂತನ ನಾಯಕ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News