ಟೀಂ ಇಂಡಿಯಾಗೆ ಸಿಕ್ಕೇಬಿಟ್ರು ಜೂನಿಯರ್ ಧೋನಿ! 19ರ ಹರೆಯದ ಈ ಅದ್ಭುತ ಆಟಗಾರನಿಗೆ CSKಯಲ್ಲಿ ಸ್ಥಾನ

Araveli Avanish, Chennai Super Kings: ಐಪಿಎಲ್ 2024 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಲು ಅರವೇಲಿ ಅವನೀಶ್ ಸದ್ಯ ಉತ್ಸುಕರಾಗಿದ್ದಾರೆ. ಕಳೆದ ತಿಂಗಳು ನಡೆದ ಐಪಿಎಲ್ ಹರಾಜಿನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಅವರು ಅರವೇಲಿ ಅವನೀಶ್ ಅವರನ್ನು ಮೂಲ ಬೆಲೆ 20 ಲಕ್ಷ ರೂ.ಗೆ ಖರೀದಿಸಿತ್ತು.

Written by - Bhavishya Shetty | Last Updated : Feb 11, 2024, 03:44 PM IST
    • ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ICC ಅಂಡರ್-19 ವಿಶ್ವಕಪ್‌
    • ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಲು ಅರವೇಲಿ ಅವನೀಶ್ ಸದ್ಯ ಉತ್ಸುಕರಾಗಿದ್ದಾರೆ
    • ಧೋನಿ ಅವರ ದಿನಗಳನ್ನು ಮರುಕಳಿಸುವಂತೆ ಮಾಡಿದ ಅರವೇಲಿ
ಟೀಂ ಇಂಡಿಯಾಗೆ ಸಿಕ್ಕೇಬಿಟ್ರು ಜೂನಿಯರ್ ಧೋನಿ! 19ರ ಹರೆಯದ ಈ ಅದ್ಭುತ ಆಟಗಾರನಿಗೆ CSKಯಲ್ಲಿ ಸ್ಥಾನ title=
MS Dhoni

ICC U19 World Cup 2024: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ICC ಅಂಡರ್-19 ವಿಶ್ವಕಪ್‌’ನಲ್ಲಿ ಆಡುತ್ತಿರುವ 19 ವರ್ಷದ ಭಾರತೀಯ ವಿಕೆಟ್‌ ಕೀಪರ್ ಬ್ಯಾಟ್ಸ್‌ ಮನ್ ಅರವೇಲಿ ಅವನೀಶ್, ಇಷ್ಟು ಚಿಕ್ಕ ವಯಸ್ಸಿನಲ್ಲಿ IPL ಒಪ್ಪಂದವನ್ನು ಹೊಂದಿರುವ ಕೆಲವೇ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಐಪಿಎಲ್ 2024 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಲು ಅರವೇಲಿ ಅವನೀಶ್ ಸದ್ಯ ಉತ್ಸುಕರಾಗಿದ್ದಾರೆ. ಕಳೆದ ತಿಂಗಳು ನಡೆದ ಐಪಿಎಲ್ ಹರಾಜಿನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಅವರು ಅರವೇಲಿ ಅವನೀಶ್ ಅವರನ್ನು ಮೂಲ ಬೆಲೆ 20 ಲಕ್ಷ ರೂ.ಗೆ ಖರೀದಿಸಿತ್ತು.

ಇದನ್ನೂ ಓದಿ: ಈ ವಿಷಯದಲ್ಲಿ ಧೋನಿಯನ್ನೇ ಹಿಂದಿಕ್ಕಿ ಇತಿಹಾಸ ಸೃಷ್ಟಿಸುವ ತವಕದಲ್ಲಿದ್ದಾರೆ ರೋಹಿತ್!

19ರ ವಿಶ್ವಕಪ್‌’ನಲ್ಲಿ ಹಲವು ಸಂದರ್ಭಗಳಲ್ಲಿ ಧೋನಿ ಅವರ ದಿನಗಳನ್ನು ಮರುಕಳಿಸುವಂತೆ ಮಾಡಿದ ಅರವೇಲಿ, “ಸಿಎಸ್‌’ಕೆ ನನ್ನನ್ನು ಆಯ್ಕೆ ಮಾಡಿದೆ ಎಂದನ್ನು ನನಗೆ ನಂಬೋದಕ್ಕೂ ಸಾಧ್ಯವಾಗಲಿಲ್ಲ, ತುಂಬಾ ಸಮಯ ತೆಗೆದುಕೊಂಡೆ, ಆ ಸಮಯದಲ್ಲಿ ನಾನು ಮನೆಯಲ್ಲಿದ್ದೆ, ಫೋನ್ ನಿರಂತರವಾಗಿ ರಿಂಗ್ ಆಗುತ್ತಿತ್ತು. ಈಗ ನಾನು ಧೋನಿ ಸರ್ ಮತ್ತು ಸಿಎಸ್‌’ಕೆಗೆ ಹೆಮ್ಮೆ ತರಲು ಬಯಸುತ್ತೇನೆ. ಆದರೆ ಈಗ ಐಪಿಎಲ್ ಬಗ್ಗೆ ಯೋಚಿಸುತ್ತಿಲ್ಲ. 19 ವರ್ಷದೊಳಗಿನವರ ವಿಶ್ವಕಪ್ ಫೈನಲ್‌ನ ನಂತರ ಯೋಚಿಸುತ್ತೇನೆ, ಆದರೆ ಸಿಎಸ್‌ಕೆ ಪರ ಮತ್ತು ಧೋನಿ ಸರ್ ನಾಯಕತ್ವದಲ್ಲಿ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಇದು ನನ್ನ ಪಾಲಿಗೆ ಒದಗಿದೆ” ಎಂದು ಹೇಳಿದ್ದಾರೆ.

“ಬಾಲ್ಯದಿಂದಲೂ ಕ್ರಿಕೆಟಿಗನಾಗಬೇಕೆಂಬ ಆಸೆ ಇತ್ತು. ನನ್ನ ತಂದೆಗೆ ನಾನು ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕೆಂಬ ಹಂಬಲ. ಆದರೆ ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದು, ಅವರೊಂದಿಗೆ ಕುಳಿತು ಪಂದ್ಯ ವೀಕ್ಷಿಸುತ್ತಿದ್ದಾಗ ನನ್ನ ಆಸಕ್ತಿ ಅತ್ತಕಡೆ ಹೋಗುತ್ತಿತ್ತು. ಈಗ ಸಿಎಸ್‌’ಕೆ ಭಾಗವಾಗುವುದರ ಮೂಲಕ ಧೋನಿಯಿಂದ ಬಹಳಷ್ಟು ಕಲಿಯಲು ಬಯಸುತ್ತಿದ್ದೇನೆ. ಒತ್ತಡದ ಸಂದರ್ಭಗಳಲ್ಲಿ ದೃಢವಾಗಿರಲು ನಾನು ಅವರಿಂದ ಕಲಿಯಲು ಬಯಸುತ್ತೇನೆ” ಎಂದು ಹೇಳಿದರು.

“ತಂಡ ಸರಿಯಾಗಿ ಆಡದೇ ಇರುವಾಗ ತಂಡವನ್ನು ಸಂಕಷ್ಟದಿಂದ ಪಾರು ಮಾಡಿ ಪಂದ್ಯ ಗೆಲ್ಲಿಸುವುದು ಹೇಗೆ? 2011ರ ವಿಶ್ವಕಪ್‌’ನಲ್ಲಿ ಅವರ ಆ ಇನ್ನಿಂಗ್ಸ್... ಅವರಿಂದ ಕಲಿಯುವುದು ಸಾಕಷ್ಟಿದೆ” ಎಂದು ಮಾಹಿಯ ಗುಣಗಾನ ಮಾಡಿದ್ದಾರೆ ಅರವೇಲಿ.

ಇದನ್ನೂ ಓದಿ: ಮಹಿಳೆಯರ ದೇಹದ ಈ ಭಾಗದಲ್ಲಿ ಕೂದಲು ಬೆಳೆದರೆ ಅದು ಸಿರಿವಂತಿಕೆ ಆಗಮನದ ಸಂಕೇತ

ಸ್ಪಿನ್ನರ್‌’ಗಳ ಮುಂದೆ ವಿಕೆಟ್ ಕೀಪ್ ಮಾಡುವುದು ಮತ್ತು ವಿಕೆಟ್ ಕೀಪಿಂಗ್‌’ನಲ್ಲಿ ಚುರುಕುತನವನ್ನು ತರುವುದು ಹೇಗೆ ಎಂಬುದನ್ನು ನಾನು ಧೋನಿ ಸರ್‌’ನಿಂದ ಕಲಿಯಲು ಬಯಸುತ್ತೇನೆ ಎಂದು ಅರವೇಲಿ ಹೇಳಿದರು. ಅಂದಹಾಗೆ ಅರವೇಲಿ ಅವರ ಸಾರ್ವಕಾಲಿಕ ನೆಚ್ಚಿನ ಕ್ರಿಕೆಟರ್ ಗಿಲ್‌ಕ್ರಿಸ್ಟ್. ಅವರ ವೀಡಿಯೋ ನೋಡಿ ಸಾಕಷ್ಟು ಕಲಿತಿದ್ದೇನೆ. ಆಟದ ಬಗೆಗಿನ ಅವರ ತಿಳುವಳಿಕೆ ಮತ್ತು ಪ್ರತಿಯೊಂದು ಸಂದರ್ಭದಲ್ಲೂ ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳುವುದು ಶ್ಲಾಘನೀಯ. ಅವರಂತೆ ನಾನೂ ಕೂಡ ಉತ್ತಮ ಬ್ಯಾಟ್ಸ್‌ಮನ್ ಆಗಬೇಕೆಂಬ ಆಸೆ ಇದೆ ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News