IPl 2024 Chennai Super Kings: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕಳೆದ ಕೆಲ ದಿನಗಳಿಂದ ಬ್ಯಾಕ್ ಟು ಬ್ಯಾಕ್ ಆಘಾತ ಎದುರಾಗುತ್ತಲೇ ಇದೆ. ಇನ್ನೇನು ಪ್ಲೇ ಆಫ್ ಹತ್ತಿರ ಬರುತ್ತಿದ್ದಂತೆ ಚೆನ್ನೈ ತಂಡದ ಕೆಲ ಕ್ರಿಕೆಟಿಗರು ಗಾಯಕ್ಕೆ ತುತ್ತಾಗುತ್ತಿದ್ದಾರೆ.
ಇದನ್ನೂ ಓದಿ: RCB ಆಟಗಾರ ಗ್ಲೆನ್ ಮಾಕ್ಸ್’ವೆಲ್ ಪತ್ನಿ ಯಾರು ಗೊತ್ತಾ? ವಿದೇಶಿಗನ ಕೈ ಹಿಡಿದ ಈ ಸುಂದರಿ ಭಾರತದವರೇ… ಖ್ಯಾತ ವೈದ್ಯೆಯೂ ಹೌದು
ಅನುಭವಿ ವೇಗದ ಬೌಲರ್ ದೀಪಕ್ ಚಹಾರ್ ಈಗಾಗಲೇ ಗಾಯಗೊಂಡಿದ್ದಾರೆ. ಅವರನ್ನು ಹೊರತುಪಡಿಸಿ ಮುಸ್ತಫಿಜುರ್ ರೆಹಮಾನ್ ಬಾಂಗ್ಲಾದೇಶಕ್ಕೆ ಮರಳಿದ್ದಾರೆ. ಇದೀಗ ಶ್ರೀಲಂಕಾದ ಮತಿಶಾ ಪತಿರಾನಾ ಕೂಡ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಶ್ರೀಲಂಕಾಕ್ಕೆ ಹಿಂತಿರುಗಲಿದ್ದಾರೆ.
ಪತಿರಾನಾ ಶ್ರೀಲಂಕಾಗೆ ಮರಳಿರುವ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದೆ. "ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ಮತಿಶ ಪತಿರಾನ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದು, ಚೇತರಿಸಿಕೊಳ್ಳಲು ಶ್ರೀಲಂಕಾಕ್ಕೆ ಮರಳಲಿದ್ದಾರೆ" ಎಂದು ಹೇಳಿಕೊಂಡಿದೆ.
ಇನ್ನೊಂದೆಡೆ ಈ ಋತುವಿನಲ್ಲಿ ಮತಿಶಾ ಪತಿರಾನ ಬೌಲಿಂಗ್’ಗೆ ಮರಳುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು CSK ಇನ್ನೂ ಸ್ಪಷ್ಟವಾಗಿ ಹೇಳಿಲ್ಲ. CSK ತನ್ನ ಮೊದಲ 10 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇ ಆಫ್ ತಲುಪುವ ರೇಸ್‌ನಲ್ಲಿದೆ.
ಇದನ್ನೂ ಓದಿ: ಎಂಎಸ್ ಧೋನಿ ಅಣ್ಣ ಯಾರು ಗೊತ್ತಾ? ಖ್ಯಾತ ರಾಜಕಾರಣಿ ಇವರು… ಆದ್ರೆ ಅನೇಕ ವರ್ಷಗಳಿಂದ ಮಾತೇ ಬಿಟ್ಟಿದ್ದಾರಂತೆ ಕ್ಯಾಪ್ಟನ್ ಕೂಲ್!
ಐಪಿಎಲ್ 2024 ರ ಲೀಗ್ ಹಂತದ ಕೊನೆಯಲ್ಲಿ ಸಿ ಎಸ್ ಕೆ ಪತಿರಾನಾ ಮತ್ತು ಮುಸ್ತಾಫಿಜುರ್ ರೆಹಮಾನ್ ಇಬ್ಬರೂ ಇಲ್ಲದೆ ಪಂದ್ಯವನ್ನಾಡುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ