weather report: ಅಂತಿಮ ಕ್ಷಣದಲ್ಲಿ ಚೆನ್ನೈ ಹವಾಮಾನ ದಿಢೀರ್ ಬದಲಾವಣೆ: ಭಾರತ vs ಆಸ್ಟ್ರೇಲಿಯಾ ಪಂದ್ಯ ರದ್ದು!

Chennai weather Report Today: ಚೆನ್ನೈನಲ್ಲಿ ಹವಾಮಾನ ಹೇಗಿದೆ? ಇಂದು ಅಂದರೆ ಅಕ್ಟೋಬರ್ 8 ರಂದು ಭಾರತ vs ಆಸ್ಟ್ರೇಲಿಯಾ ಪಂದ್ಯದ ವೇಳೆಗೆ ಮಳೆಯ ಸಂಭವನೀಯತೆಯ ಶೇಕಡಾವಾರು ಎಷ್ಟಿದೆ? ಇಂದಿನ ಪಂದ್ಯಕ್ಕೂ ಮಳೆ ಅಡ್ಡಿ ಮಾಡಲಿದೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

Written by - Bhavishya Shetty | Last Updated : Oct 8, 2023, 01:13 PM IST
    • ಕೆಲವೇ ಗಂಟೆಗಳಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸಲಿದೆ
    • ಚೆನ್ನೈನಲ್ಲಿ ಹವಾ ಹೇಗಿರುತ್ತೆ, ಮ್ಯಾಚ್ ಕಂಪ್ಲೀಟ್ ಆಗುತ್ತಾ ಅನ್ನೋದೇ ಪ್ರಶ್ನೆ
    • ಇದಕ್ಕೆಲ್ಲಾ ಕಾರಣ ಇದಕ್ಕೂ ಮುನ್ನವೇ ಭಾರತದ ಪಂದ್ಯದಲ್ಲಿ ಹವಾಮಾನ ಕ್ರೌರ್ಯ ತೋರಿತ್ತು
weather report: ಅಂತಿಮ ಕ್ಷಣದಲ್ಲಿ ಚೆನ್ನೈ ಹವಾಮಾನ ದಿಢೀರ್ ಬದಲಾವಣೆ: ಭಾರತ vs ಆಸ್ಟ್ರೇಲಿಯಾ ಪಂದ್ಯ ರದ್ದು!  title=
chennai climate today

IND vs AUS, Weather Update: ಇನ್ನೇನು ಕೆಲವೇ ಗಂಟೆಗಳಲ್ಲಿ ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ವಿಶ್ವಕಪ್ ಪಂದ್ಯಕ್ಕೂ ಮುನ್ನ ಭಾರತದ ಎರಡೂ ಅಭ್ಯಾಸ ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಈಗ ಚೆನ್ನೈನಲ್ಲಿ ಹವಾ ಹೇಗಿರುತ್ತೆ, ಮ್ಯಾಚ್ ಕಂಪ್ಲೀಟ್ ಆಗುತ್ತಾ ಅನ್ನೋದೇ ಪ್ರಶ್ನೆ. ಇಲ್ಲವೇ ಕ್ರಿಕೆಟ್ ಅಭಿಮಾನಿಗಳು ಮತ್ತೊಮ್ಮೆ ನಿರಾಸೆ ಅನುಭವಿಸಬೇಕಾಗುತ್ತದೆಯೇ ಎಂಬ ಭಯವೂ ಕಾಡುತ್ತಿದೆ.

ಇದನ್ನೂ ಓದಿ: Anushka shetty: ರಾಣಿ ಅಬ್ಬಕ್ಕ ಅವತಾರದಲ್ಲಿ ಕರಾವಳಿ ಸುಂದರಿ.. ಪೋಸ್ಟರ್ ವೈರಲ್

ಇದಕ್ಕೆಲ್ಲಾ ಕಾರಣ ಇದಕ್ಕೂ ಮುನ್ನವೇ ಭಾರತದ ಪಂದ್ಯದಲ್ಲಿ ಹವಾಮಾನ ಕ್ರೌರ್ಯ ತೋರಿತ್ತು. ಬಹುತೇಕ ಎಲ್ಲಾ ತಂಡಗಳು ತಮ್ಮ ಎರಡೂ ಅಭ್ಯಾಸ ಪಂದ್ಯಗಳನ್ನು ಆಡಿದ್ದವು, ಆದರೆ ಟೀಮ್ ಇಂಡಿಯಾದ ಎರಡೂ ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ.

ಚೆನ್ನೈನಲ್ಲಿ ಹವಾಮಾನ ಹೇಗಿದೆ? ಇಂದು ಅಂದರೆ ಅಕ್ಟೋಬರ್ 8 ರಂದು ಭಾರತ vs ಆಸ್ಟ್ರೇಲಿಯಾ ಪಂದ್ಯದ ವೇಳೆಗೆ ಮಳೆಯ ಸಂಭವನೀಯತೆಯ ಶೇಕಡಾವಾರು ಎಷ್ಟಿದೆ? ಇಂದಿನ ಪಂದ್ಯಕ್ಕೂ ಮಳೆ ಅಡ್ಡಿ ಮಾಡಲಿದೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲು ಹವಾಮಾನ ಇಲಾಖೆಯ ಅನೇಕ ವೆಬ್‌’ಸೈಟ್‌’ಗಳ ಸಹಾಯವನ್ನು ತೆಗೆದುಕೊಂಡಿದ್ದೇವೆ. ಈ ಸಂದರ್ಭದಲ್ಲಿ “ಚೆನ್ನೈನಲ್ಲಿ ಇಂದು ಆರ್ದ್ರತೆಯ ಬಿಸಿ ಇರುತ್ತದೆ ಮತ್ತು ಪ್ರೇಕ್ಷಕರು ಇಡೀ ಪಂದ್ಯವನ್ನು ವೀಕ್ಷಿಸುತ್ತಾರೆ. ಇಂದು ಹವಾಮಾನವು ಸಂಪೂರ್ಣವಾಗಿ ಸ್ಪಷ್ಟವಾಗಿರುತ್ತದೆ ಮತ್ತು ಮಳೆಯಾಗುವ ಸಾಧ್ಯತೆಯಿಲ್ಲ” ಎಂದು ತಿಳಿದುಬಂದಿದೆ.

ಹವಾಮಾನ ಇಲಾಖೆ ಪ್ರಕಾರ, ಇಂದು ಚೆನ್ನೈನಲ್ಲಿ ತಾಪಮಾನವು ಮಧ್ಯಾಹ್ನ 32 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ, ಸಂಜೆಯ ವೇಳೆ ಆಟಗಾರರಿಗೆ ಬಿಸಿಲಿನಿಂದ ಸ್ವಲ್ಪ ವಿಶ್ರಾಂತಿ ಸಿಗುತ್ತದೆ. ತಾಪಮಾನವು ಹೆಚ್ಚು ಕಡಿಮೆಯಾಗುವುದಿಲ್ಲವಾದರೂ. ಹವಾಮಾನ ಇಲಾಖೆ ಪ್ರಕಾರ, ಸಂಜೆ ತಾಪಮಾನವು 29 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಎಣ್ಣೆಯುಕ್ತ ಸೌಂದರ್ಯದ ನಿಯಂತ್ರಣಕ್ಕಾಗಿ ಮೇಕಪ್‌ ಸಲಹೆಗಳು ಇಲ್ಲಿವೆ

ವಿಶ್ವಕಪ್‌’ನ ಐದನೇ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ವಿಶೇಷವೆಂದರೆ ಇಲ್ಲಿಯವರೆಗೂ ಆಸ್ಟ್ರೇಲಿಯಾ ತಂಡ ಚೆನ್ನೈನಲ್ಲಿ ಸೋತಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News