IND vs AUS, T20I Series, Axar Patel: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ T20 ಅಂತಾರಾಷ್ಟ್ರೀಯ ಸರಣಿಯ ಮೊದಲ ಪಂದ್ಯವು ವಿಶಾಖಪಟ್ಟಣಂನ ACA-VDCA ಸ್ಟೇಡಿಯಂನಲ್ಲಿ ನಾಳೆ ಅಂದರೆ ಸೆಪ್ಟೆಂಬರ್ 23ರಿಂದ ನಡೆಯಲಿದೆ. ಅಂದಹಾಗೆ ಈ ಸರಣಿಯ ಮೂಲಕ ಸುದೀರ್ಘ ಸಮಯದ ನಂತರ ಭಾರತ ತಂಡಕ್ಕೆ ಡೇಂಜರಸ್ ಪ್ಲೇಯರ್ ಒಬ್ಬರು ಎಂಟ್ರಿಕೊಟ್ಟಿದ್ದಾರೆ.
ಇದನ್ನೂ ಓದಿ: ಸರ್ವಾರ್ಥ ಸಿದ್ಧಿ ಯೋಗದಲ್ಲಿ ತುಳಸಿ ಪೂಜೆ: ಸಾಕ್ಷಾತ್ ಮಹಾವಿಷ್ಣುವಿನ ಅನುಗ್ರಹದಿಂದ ಈ 4 ರಾಶಿಗೆ ಅನುಕಾಲ ಅದೃಷ್ಟ-ಅಖಂಡ ಸಂಪತ್ತು
ಆಸ್ಟ್ರೇಲಿಯಾದಂತಹ ಅಪಾಯಕಾರಿ ತಂಡದ ವಿರುದ್ಧ ಐದು ಪಂದ್ಯಗಳ T20 ಅಂತಾರಾಷ್ಟ್ರೀಯ ಸರಣಿಯನ್ನು ಗೆಲ್ಲುವುದು ಭಾರತದ ಯುವ ಬ್ರಿಗೇಡ್’ಗೆ ಅಗ್ನಿಪರೀಕ್ಷೆ ಎಂದೇ ಹೇಳಬಹುದು. ಆದರೆ ಈ ಆಟಗಾರ ಟೀಂ ಇಂಡಿಯಾಗೆ ಬ್ರಹ್ಮಾಸ್ತ್ರವಾಗಿ ಕೆಲಸ ಮಾಡಲಿದ್ದಾನೆ.
ಆಲ್ ರೌಂಡರ್ ಅಕ್ಷರ್ ಪಟೇಲ್ ಫಿಟ್ ಆದ ಬಳಿಕ ಟೀಂ ಇಂಡಿಯಾಗೆ ಮರಳಿದ್ದಾರೆ. 3 ತಿಂಗಳ ನಂತರ ಅಕ್ಷರ್ ಪಟೇಲ್ ಭಾರತಕ್ಕಾಗಿ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ. ಈ ವರ್ಷದ ಆಗಸ್ಟ್’ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕಾಗಿ ಕೊನೆಯ ಟಿ20 ಪಂದ್ಯವನ್ನು ಆಡಿದ್ದರು. ಇದೀಗ ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಭವಿಷ್ಯ ಬದಲಿಸಲು ಅಕ್ಷರ್ ಪಟೇಲ್ ಸಿದ್ಧರಾಗಿದ್ದಾರೆ.
ಅಕ್ಷರ್ ಪಟೇಲ್ ಮಾರಕ ಎಡಗೈ ಸ್ಪಿನ್ ಬೌಲಿಂಗ್ ಮತ್ತು ಸ್ಫೋಟಕ ಬ್ಯಾಟಿಂಗ್’ನಲ್ಲಿಯೂ ಪ್ರವೀಣರಾಗಿದ್ದಾರೆ. ಇವರು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದು, ತನ್ನ 10 ಓವರ್’ಗಳ ಬೌಲಿಂಗ್ ಸ್ಪೆಲ್ ನಲ್ಲಿ ಎದುರಾಳಿ ತಂಡಗಳ ಬ್ಯಾಟ್ಸ್ ಮನ್’ಗಳಿಗೆ ಬೆವರಿಳಿಸದೆ ಬಿಡಲ್ಲ ಅಕ್ಸರ್.
ಅಕ್ಷರ್ ಪಟೇಲ್ ಅತ್ಯುತ್ತಮ ಬ್ಯಾಟ್ಸ್‌ಮನ್, ಅದ್ಭುತ ಬೌಲರ್ ಮತ್ತು ಚಾಣಾಕ್ಷ ಫೀಲ್ಡರ್. ಹೀಗಾಗಿ ಟೀಂ ಇಂಡಿಯಾಗೆ ಸಂಪೂರ್ಣ ಪ್ಯಾಕೇಜ್ ಆಗಿ ಅಕ್ಷರ್ ಪಟೇಲ್ ಇರಲಿದ್ದಾರೆ.
ಇದನ್ನೂ ಓದಿ: ಮುಂದಿನ 2 ದಿನ ಈ ಭಾಗಗಳಲ್ಲಿ ಭರ್ಜರಿ ಮಳೆ! ಮಿಂಚು-ಗುಡುಗು ಸಹಿತ ಜಲಪ್ರಳಯದ ಭೀತಿ
ಅಕ್ಷರ್ ಪಟೇಲ್ 45 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 39 ವಿಕೆಟ್ ಪಡೆದಿದ್ದು, 328 ರನ್ ಕೂಡ ಗಳಿಸಿದ್ದಾರೆ. 54 ಏಕದಿನ ಪಂದ್ಯಗಳಲ್ಲಿ 59 ವಿಕೆಟ್ ಮತ್ತು 481 ರನ್ ಗಳಿಸಿದ್ದಾರೆ. ಇನ್ನು 12 ಟೆಸ್ಟ್ ಪಂದ್ಯಗಳಲ್ಲಿ 50 ವಿಕೆಟ್ ಪಡೆದಿದ್ದರೆ, 513 ರನ್ ಗಳಿಸಿದ್ದಾರೆ. ಅಕ್ಷರ್ ಪಟೇಲ್ ಟೆಸ್ಟ್ ಪಂದ್ಯಗಳಲ್ಲಿ 5 ಬಾರಿ ಇನ್ನಿಂಗ್ಸ್’ನಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇದಲ್ಲದೇ ಟೆಸ್ಟ್ ಪಂದ್ಯವೊಂದರಲ್ಲಿ ಅಕ್ಷರ್ ಪಟೇಲ್ 11 ವಿಕೆಟ್ ಪಡೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.