ಈ ಡೆಡ್ಲಿ ಬ್ಯಾಟರ್ ಆಸೀಸ್ ವಿರುದ್ಧ ಆಡೋದು ಖಚಿತ! ಸೂರ್ಯಕುಮಾರ್ ಸುದ್ದಿಗೋಷ್ಠಿ ಬಳಿಕ ಹೊರಬಿತ್ತು ಭಾರತದ ಪ್ಲೇಯಿಂಗ್ 11

Suryakumar Yadav Press Conference: ಮೊದಲ ಬಾರಿಗೆ ಭಾರತದ ನಾಯಕತ್ವ ವಹಿಸಿಕೊಂಡ ಸೂರ್ಯಕುಮಾರ್ ಯಾದವ್, ತಂಡದ ನಿಯಮಿತ ನಾಯಕ ರೋಹಿತ್ ಶರ್ಮಾ ಬಗ್ಗೆ ಮಾತನಾಡಿದ್ದಾರೆ.

Written by - Bhavishya Shetty | Last Updated : Nov 23, 2023, 02:47 PM IST
    • ಮೊದಲ ಬಾರಿಗೆ ಭಾರತದ ನಾಯಕತ್ವ ವಹಿಸಿಕೊಂಡ ಸೂರ್ಯಕುಮಾರ್ ಯಾದವ್
    • ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ T20 ಸರಣಿ
    • ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11
ಈ ಡೆಡ್ಲಿ ಬ್ಯಾಟರ್ ಆಸೀಸ್ ವಿರುದ್ಧ ಆಡೋದು ಖಚಿತ! ಸೂರ್ಯಕುಮಾರ್ ಸುದ್ದಿಗೋಷ್ಠಿ ಬಳಿಕ ಹೊರಬಿತ್ತು ಭಾರತದ ಪ್ಲೇಯಿಂಗ್ 11 title=
Suryakumar Yadav

Suryakumar Yadav Press Conference: ODI ವಿಶ್ವಕಪ್ 2023ರ ಬಳಿಕ ಭಾರತೀಯ ಕ್ರಿಕೆಟ್ ತಂಡ ಇದೀಗ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ T20 ಸರಣಿಯನ್ನು ಆಡಲಿದೆ. ಈ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಸರಣಿಯ ಮೊದಲ ಪಂದ್ಯ ನಾಳೆ ಅಂದರೆ ಗುರುವಾರ, ನವೆಂಬರ್ 23 ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಸೂರ್ಯಕುಮಾರ್ ಯಾದವ್ ಸುದ್ದಿಗೋಷ್ಠಿ ನಡೆಸಿ ಹಲವು ಪ್ರಮುಖ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಸಂಕಷ್ಟದಲ್ಲಿದೆ ಈ ಆಟಗಾರನ ವೃತ್ತಿಜೀವನ! ವಿಶ್ವಕಪ್ ಅಂತ್ಯವಾಗ್ತಿದ್ದಂತೆ ತಂಡದಿಂದ ಹೊರಬಿದ್ದ ಓಪನರ್

ಮೊದಲ ಬಾರಿಗೆ ಭಾರತದ ನಾಯಕತ್ವ ವಹಿಸಿಕೊಂಡ ಸೂರ್ಯಕುಮಾರ್ ಯಾದವ್, ತಂಡದ ನಿಯಮಿತ ನಾಯಕ ರೋಹಿತ್ ಶರ್ಮಾ ಬಗ್ಗೆ ಮಾತನಾಡಿದ್ದಾರೆ. “ರೋಹಿತ್ ಶರ್ಮಾ ಅವರು ಈ ವಿಶ್ವಕಪ್‌’ನಲ್ಲಿ ತಂಡವನ್ನು ಉದಾಹರಣೆಯಾಗಿ ಮುನ್ನಡೆಸಿದರು. ಈ ವಿಶ್ವಕಪ್‌’ನಲ್ಲಿ ರೋಹಿತ್ ಶರ್ಮಾ ಏನೇ ಮಾಡಿದರೂ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಅವರು ಹೇಳಿದ್ದನ್ನೇ ಮಾಡಿದರು” ಎಂದಿದ್ದಾರೆ.

ಪಿಚ್ ವರದಿ:

ಇನ್ನು ವಿಶಾಖಪಟ್ಟಣದ ಪಿಚ್ ಸ್ಪಿನ್‌’ಗೆ ಅನುಕೂಲಕರವಾಗಿದೆ. ಸದ್ಯ ಈ ಕ್ರೀಡಾಂಗಣದಲ್ಲಿ ಡ್ಯೂ ದೊಡ್ಡ ಪಾತ್ರ ವಹಿಸಲಿದೆ. ಹವಾಮಾನವು ತಂಪಾಗಿರಲಿದ್ದು, ರಾತ್ರಿಯಲ್ಲಿ ಇಬ್ಬನಿ ಇರುತ್ತದೆ. ವಿಶೇಷವೆಂದರೆ ಈ ಕ್ರೀಡಾಂಗಣದ ಬೌಂಡರಿ ಚಿಕ್ಕದಾಗಿದ್ದು, ಇದರಿಂದಾಗಿ ಬ್ಯಾಟ್ಸ್‌’ಮನ್‌’ಗಳು ದೊಡ್ಡ ಸ್ಕೋರ್ ಮಾಡಲು ಸಹಾಯ ಮಾಡುವ ಸಾಧ್ಯತೆಯಿದೆ. ಇತ್ತೀಚಿನ ಪಂದ್ಯಗಳಲ್ಲಿಯೂ ಈ ವಿಕೆಟ್ ಸ್ಪಿನ್ನರ್‌’ಗಳಿಗೆ ಸಾಕಷ್ಟು ಸಹಾಯ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಎರಡೂ ತಂಡಗಳು ಅತ್ಯಂತ ಎಚ್ಚರಿಕೆಯಿಂದ ಪ್ಲೇಯಿಂಗ್-11 ಅನ್ನು ಆಯ್ಕೆ ಮಾಡಬೇಕಿದೆ.

ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್, ರಿತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಅಕ್ಷರ್ ಪಟೇಲ್, ಅರ್ಶ್ದೀಪ್ ಸಿಂಗ್ ಮತ್ತು ಪ್ರಸಿದ್ಧ್ ಕೃಷ್ಣ.

ಇದನ್ನೂ ಓದಿ: ಟಿ-20 ಕ್ರಿಕೆಟ್’ಗೆ ನಿವೃತ್ತಿ!? ಬಿಸಿಸಿಐಗೆ ಹೀಗೆಂದು ತನ್ನ ನಿರ್ಧಾರ ತಿಳಿಸಿದ ರೋಹಿತ್ ಶರ್ಮಾ

ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್ 11: ಮ್ಯಾಥ್ಯೂ ಶಾರ್ಟ್, ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ನಾಯಕ/ವಿಕೆಟ್ ಕೀಪರ್), ಮಾರ್ಕಸ್ ಸ್ಟೊಯಿನಿಸ್, ಸೀನ್ ಅಬಾಟ್, ನಾಥನ್ ಎಲ್ಲಿಸ್, ಜೇಸನ್ ಬೆಹ್ರೆನ್‌ಡಾರ್ಫ್ ಮತ್ತು ಆಡಮ್ ಝಂಪಾ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News