David Warner retires: ಹೊಸ ವರ್ಷದಂದೇ ನಿವೃತ್ತಿ ಘೋಷಿಸಿದ ಆಸಿಸ್‌ ಸ್ಟಾರ್‌ ಪ್ಲೇಯರ್‌

David Warner retires: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಹೊಸ ವರ್ಷದಂದೇ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 

Written by - Chetana Devarmani | Last Updated : Jan 1, 2024, 09:34 AM IST
  • ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್
  • ಆಸ್ಟ್ರೇಲಿಯಾದ ಸ್ಟಾರ್‌ ಕ್ರಿಕೆಟರ್‌ ಡೇವಿಡ್ ವಾರ್ನರ್
  • ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಡೇವಿಡ್ ವಾರ್ನರ್
David Warner retires: ಹೊಸ ವರ್ಷದಂದೇ ನಿವೃತ್ತಿ ಘೋಷಿಸಿದ ಆಸಿಸ್‌ ಸ್ಟಾರ್‌ ಪ್ಲೇಯರ್‌   title=
David Warner

David Warner retires: ಆಸ್ಟ್ರೇಲಿಯಾದ ಸ್ಟಾರ್‌ ಕ್ರಿಕೆಟರ್‌ ಡೇವಿಡ್ ವಾರ್ನರ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಜನವರಿ 3 ರಂದು ಪ್ರಾರಂಭವಾಗಲಿರುವ ಪಾಕಿಸ್ತಾನದ ವಿರುದ್ಧದ ಟೆಸ್ಟ್‌ಗೂ ಮುನ್ನ ನಿವೃತ್ತಿ ಘೋಷಿಸಿದ್ದಾರೆ. 37 ವರ್ಷ ವಯಸ್ಸಿನ ಆಸ್ಟ್ರೇಲಿಯನ್ ಬ್ಯಾಟರ್ ಹೊಸ ವರ್ಷದಂದೇ ನಿವೃತ್ತಿ ಘೋಷಿಸಿದ್ದಾರೆ. 

ವಾರ್ನರ್ ತಮ್ಮ ವೃತ್ತಿ ಜೀವನದಲ್ಲಿ 161 ODI ಗಳಲ್ಲಿ ಆಡಿದ್ದು, 45.30 ರ ಸರಾಸರಿಯಲ್ಲಿ 6,932 ರನ್ ಗಳಿಸಿದ್ದಾರೆ. ಒಟ್ಟು 22 ಶತಕಗಳು ಮತ್ತು 33 ಅರ್ಧ ಶತಕಗಳೊಂದಿಗೆ ವಾರ್ನರ್ ಬೌಲರ್‌ಗಳನ್ನು ದುಸ್ವಪ್ನದಂತೆ ಕಾಡುತ್ತಿದ್ದರು. ವಾರ್ನರ್ ಗರಿಷ್ಠ ಸ್ಕೋರ್ 179 ರನ್ ಆಗಿದೆ. 

ಇದನ್ನೂ ಓದಿ : ಈ ಇಬ್ಬರು ಆಟಗಾರರನ್ನು ಪಡೆದ ಟೀಂ ಇಂಡಿಯಾವೇ ಜಗತ್ತಿನ ಅದೃಷ್ಟಶಾಲಿ ತಂಡ: ಇಂಗ್ಲೆಂಡ್ ಆಟಗಾರ ಹೊಗಳಿದ್ದು ಯಾರನ್ನು? 

 

 

"ನಾನು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ. ವಿಶ್ವಕಪ್‌ ನನ್ನ ಕೊನೆಯ ಪಂದ್ಯ. ಆ ಗೆಲುವನ್ನು ಸಾಧಿಸಿದ್ದೇನೆ ಮತ್ತು ಭಾರತದಲ್ಲಿ ಅದನ್ನು ಗೆದ್ದಿದ್ದೇನೆ. ಇದು ಒಂದು ದೊಡ್ಡ ಸಾಧನೆ ಅಂತ ಭಾವಿಸುವೆ" ಎಂದು ಡೇವಿಡ್‌ ವಾರ್ನರ್ ಸೋಮವಾರ ಹೇಳಿದ್ದಾರೆ. ವಾರ್ನರ್ ಅವರು SCG ಅಲ್ಲಿ ತಮ್ಮ ಕೊನೆಯ ಟೆಸ್ಟ್ ಆಡಲು ನಿರ್ಧರಿಸಿದ್ದಾರೆ. 

"ನಾನು ಕುಟುಂಬದೊಂದಿಗೆ ಕಾಲ ಕಳೆಯಬೇಕಿದೆ. ಈ ಹಿನ್ನೆಲೆಯಲ್ಲಿ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತೇನೆ" ಎಂದು ಅವರು ಸಿಡ್ನಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇದನ್ನೂ ಓದಿ : 2024ರ ವಿಶ್ವಕಪ್’ಗೆ ತಂಡ ಪ್ರಕಟಿಸಿದ ಕೋಚ್: ಈ ನಾಲ್ವರು ಹೊಸ ಮುಖಗಳಿಗೆ ಮಣೆ ಹಾಕಿದ ಆಯ್ಕೆ ಸಮಿತಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News