2024ರ ವಿಶ್ವಕಪ್’ಗೆ ತಂಡ ಪ್ರಕಟಿಸಿದ ಕೋಚ್: ಈ ನಾಲ್ವರು ಹೊಸ ಮುಖಗಳಿಗೆ ಮಣೆ ಹಾಕಿದ ಆಯ್ಕೆ ಸಮಿತಿ

Indian Team for FIH Hockey World Cup: ಒಟ್ಟು 16 ತಂಡಗಳು ಹಾಕಿ ಫೈವ್ಸ್ ಮಹಿಳಾ ವಿಶ್ವಕಪ್‌’ನಲ್ಲಿ ಭಾಗವಹಿಸಲಿದ್ದು, ಇದರಲ್ಲಿ ಫಿಜಿ, ಮಲೇಷ್ಯಾ, ನೆದರ್‌ಲ್ಯಾಂಡ್ಸ್ ಮತ್ತು ಆತಿಥೇಯ ಓಮನ್ ಪೂಲ್ ಎ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಉಕ್ರೇನ್ ಮತ್ತು ಜಾಂಬಿಯಾ ಪೂಲ್ ಬಿಯಲ್ಲಿವೆ. ಪೂಲ್ ಡಿ ನ್ಯೂಜಿಲೆಂಡ್, ಪರಾಗ್ವೆ, ಥೈಲ್ಯಾಂಡ್ ಮತ್ತು ಉರುಗ್ವೆಯನ್ನು ಒಳಗೊಂಡಿದೆ.

Written by - Bhavishya Shetty | Last Updated : Dec 31, 2023, 10:10 PM IST
    • ವಿಶ್ವಕಪ್‌’ಗೆ ಹಾಕಿ ಇಂಡಿಯಾ ಪುರುಷರ ಮತ್ತು ಮಹಿಳಾ ತಂಡ ಪ್ರಕಟ
    • ಪುರುಷರ ಸ್ಪರ್ಧೆಯು ಜನವರಿ 28 ರಿಂದ ಜನವರಿ 31 ರವರೆಗೆ ನಡೆಯಲಿದೆ
    • ಒಟ್ಟು 16 ತಂಡಗಳು ಹಾಕಿ ಫೈವ್ಸ್ ಮಹಿಳಾ ವಿಶ್ವಕಪ್‌’ನಲ್ಲಿ ಭಾಗವಹಿಸಲಿದೆ
2024ರ ವಿಶ್ವಕಪ್’ಗೆ ತಂಡ ಪ್ರಕಟಿಸಿದ ಕೋಚ್: ಈ ನಾಲ್ವರು ಹೊಸ ಮುಖಗಳಿಗೆ ಮಣೆ ಹಾಕಿದ ಆಯ್ಕೆ ಸಮಿತಿ title=
Hockey

Indian Team for FIH Hockey World Cup: ಮುಂಬರುವ ವಿಶ್ವಕಪ್‌’ಗೆ (FIH Hockey5 World Cup) ಹಾಕಿ ಇಂಡಿಯಾ ಪುರುಷರ ಮತ್ತು ಮಹಿಳಾ ತಂಡಗಳನ್ನು ಪ್ರಕಟಿಸಿದೆ. ಹಾಕಿ ಫೈವ್ಸ್ ಮಹಿಳಾ ವಿಶ್ವಕಪ್ ಜನವರಿ 24 ರಿಂದ 27 ರವರೆಗೆ ನಡೆಯಲಿದ್ದು, ಪುರುಷರ ಸ್ಪರ್ಧೆಯು ಜನವರಿ 28 ರಿಂದ ಜನವರಿ 31 ರವರೆಗೆ ನಡೆಯಲಿದೆ.

ಇದನ್ನೂ ಓದಿ:  ವ್ಯಾಯಾಮ-ಡಯೆಟ್ ಎಂತದ್ದೂ ಬೇಡ… ಕುಳಿತುಕೊಂಡು ಇದನ್ನು ನೋಡಿದ್ರೆ ಸಾಕು ತೂಕ ಇಳಿಯುತ್ತೆ!

ಮಹಿಳಾ ತಂಡದಲ್ಲಿ ಬನ್ಸಾರಿ ಸೋಲಂಕಿ ಎರಡನೇ ಗೋಲ್‌ ಕೀಪರ್ ಆಗಿದ್ದು, ಅಕ್ಷತಾ ಅಬಾಸೊ ಧೆಕಾಲೆ ಮತ್ತು ಜ್ಯೋತಿ ಛಾತ್ರಿ ಡಿಫೆಂಡರ್‌’ಗಳಾಗಿದ್ದಾರೆ. ಮರಿಯಾನಾ ಕುಜೂರ್ ಮತ್ತು ಮುಮ್ತಾಜ್ ಖಾನ್ ಅವರನ್ನು ಮಿಡ್‌ ಫೀಲ್ಡರ್‌’ಗಳಲ್ಲಿ ಸೇರಿಸಲಾಗಿದ್ದು, ಅಜ್ಮಿನಾ ಕುಜೂರ್, ರುತಾಜಾ ದಾದಾಸೊ ಪಿಸಲ್ ಮತ್ತು ದೀಪಿಕಾ ಸೊರೆಂಗ್ ಫಾರ್ವರ್ಡ್‌’ಗಳಾಗಿದ್ದಾರೆ.

ಅಂದಹಾಗೆ ನಮೀಬಿಯಾ, ಪೋಲೆಂಡ್ ಮತ್ತು ಅಮೆರಿಕದೊಂದಿಗೆ ಭಾರತೀಯ ಮಹಿಳೆಯರು ಪೂಲ್ ಸಿ ನಲ್ಲಿ ಸ್ಥಾನ ಪಡೆದಿದ್ದಾರೆ.

ಒಟ್ಟು 16 ತಂಡಗಳು ಹಾಕಿ ಫೈವ್ಸ್ ಮಹಿಳಾ ವಿಶ್ವಕಪ್‌’ನಲ್ಲಿ ಭಾಗವಹಿಸಲಿದ್ದು, ಇದರಲ್ಲಿ ಫಿಜಿ, ಮಲೇಷ್ಯಾ, ನೆದರ್‌ಲ್ಯಾಂಡ್ಸ್ ಮತ್ತು ಆತಿಥೇಯ ಓಮನ್ ಪೂಲ್ ಎ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಉಕ್ರೇನ್ ಮತ್ತು ಜಾಂಬಿಯಾ ಪೂಲ್ ಬಿಯಲ್ಲಿವೆ. ಪೂಲ್ ಡಿ ನ್ಯೂಜಿಲೆಂಡ್, ಪರಾಗ್ವೆ, ಥೈಲ್ಯಾಂಡ್ ಮತ್ತು ಉರುಗ್ವೆಯನ್ನು ಒಳಗೊಂಡಿದೆ.

ಪುರುಷರ ತಂಡದಲ್ಲಿ ನಾಲ್ವರಿಗೆ ಸ್ಥಾನ:

ಒಲಿಂಪಿಕ್ ಕಂಚಿನ ಪದಕ ವಿಜೇತ ಸಿಮ್ರಂಜೀತ್ ನೇತೃತ್ವದ ಭಾರತ ಪುರುಷರ ತಂಡದಲ್ಲಿ ಗೋಲ್‌ ಕೀಪರ್‌ಗಳಾದ ಸೂರಜ್ ಕರ್ಕೇರಾ ಮತ್ತು ಪ್ರಶಾಂತ್ ಕುಮಾರ್ ಚೌಹಾಣ್ ಇದ್ದಾರೆ. ಮನ್‌ ದೀಪ್ ಮೋರ್ ಅವರು ರಕ್ಷಣಾ ವಿಭಾಗದಲ್ಲಿ ಮಂಜೀತ್ ಜೊತೆಗೆ ಇರುತ್ತಾರೆ. ಮಿಡ್‌ ಫೀಲ್ಡ್‌’ನಲ್ಲಿ ಮೊಹಮ್ಮದ್ ರಹೀಲ್ ಮೌಸಿನ್, ಮಣಿಂದರ್ ಸಿಂಗ್, ಫಾರ್ವರ್ಡ್ ಲೈನ್‌’ನಲ್ಲಿ ನಾಯಕ ಸಿಮ್ರಂಜೀತ್ ಜೊತೆಗೆ ಪವನ್ ರಾಜ್‌ಭರ್, ಗುರ್ಜೋತ್ ಸಿಂಗ್ ಮತ್ತು ಉತ್ತಮ್ ಸಿಂಗ್ ಇದ್ದಾರೆ. ಭಾರತವನ್ನು ಪೂಲ್ ಬಿಯಲ್ಲಿ ಇರಿಸಲಾಗಿದ್ದು, ನಾಕೌಟ್ ಸುತ್ತಿಗೆ ಪ್ರವೇಶಿಸಲು ಈಜಿಪ್ಟ್, ಜಮೈಕಾ ಮತ್ತು ಸ್ವಿಟ್ಜರ್ಲೆಂಡ್ ವಿರುದ್ಧ ಆಡಬೇಕಾಗಿದೆ. ಪೂಲ್ ಎ ನೆದರ್ಲ್ಯಾಂಡ್ಸ್, ನೈಜೀರಿಯಾ, ಪಾಕಿಸ್ತಾನ ಮತ್ತು ಪೋಲೆಂಡ್, ಪೂಲ್ ಸಿ ಯಲ್ಲಿ ಆಸ್ಟ್ರೇಲಿಯಾ, ಕೀನ್ಯಾ, ನ್ಯೂಜಿಲೆಂಡ್, ಟ್ರಿನಿಡಾಡ್ ಮತ್ತು ಟೊಬಾಗೊವನ್ನು ಒಳಗೊಂಡಿದೆ. ಪೂಲ್ ಡಿ ಫಿಜಿ, ಮಲೇಷ್ಯಾ, ಓಮನ್ ಮತ್ತು ಅಮೆರಿಕವನ್ನು ಒಳಗೊಂಡಿದೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಮತ್ತೆ ವಿರಾಟ್ ಕೊಹ್ಲಿ ನಾಯಕತ್ವ… ರೋಹಿತ್ ಶರ್ಮಾ ಪಾರುಪತ್ಯ ಅಂತ್ಯ!?

ಕೋಚ್ ಹೇಳಿದ್ದು ಹೀಗೆ:

ಪುರುಷರ ತಂಡದ ಕೋಚ್ ಸರ್ದಾರ್ ಸಿಂಗ್, 'ಈ ರೋಚಕ ಸ್ವರೂಪದ ಹಾಕಿಗಾಗಿ ನಾವು ಯುವ ಮತ್ತು ಅನುಭವಿ ಆಟಗಾರರ ಸಮತೋಲಿತ ತಂಡವನ್ನು ಆಯ್ಕೆ ಮಾಡಿದ್ದೇವೆ. ಈ ತಂಡದ ಅನೇಕ ಆಟಗಾರರು ಈಗಾಗಲೇ ಈ ಮಾದರಿಯಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ. ಅವರು ಉತ್ತಮ ಪ್ರದರ್ಶನ ನೀಡಲು ಉತ್ಸುಕರಾಗಿದ್ದಾರೆ. ಈ ಪಂದ್ಯಾವಳಿಗಾಗಿ ಶ್ರಮಿಸಿದ್ದೇವೆ ಮತ್ತು ವೇದಿಕೆಯನ್ನು ತಲುಪಲು ಉತ್ಸುಕರಾಗಿದ್ದೇವೆ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News