IPL 2020: ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಸೂಪರ್ ಓವರ್ ನಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಸೂಪರ್ ಓವರ್ ಗಳಲ್ಲಿ ಮಣಿಸಿತು.ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 3 ರನ್ ಗಳ ಗುರಿಯನ್ನು ಕಿಂಗ್ಸ್ ಇಲೆವನ್ ತಲುಪಲು ವಿಫಲವಾಯಿತು. 

Last Updated : Sep 21, 2020, 12:46 AM IST
IPL 2020: ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಸೂಪರ್ ಓವರ್ ನಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ title=

ನವದೆಹಲಿ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ ಕಿಂಗ್ಸ್ ಎಲೆವನ್ ಪಂಜಾಬ್ ತಂಡವನ್ನು ಸೂಪರ್ ಓವರ್ ಗಳಲ್ಲಿ ಮಣಿಸಿತು.ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 3 ರನ್ ಗಳ ಗುರಿಯನ್ನು ಕಿಂಗ್ಸ್ ಇಲೆವನ್ ತಲುಪಲು ವಿಫಲವಾಯಿತು. 

ಇದಕ್ಕೂ ಮೊದಲು ಟಾಸ್ ಗೆದ್ದ ಕಿಂಗ್ಸ್ ಇಲೆವನ್ ತಂಡವು ಫೀಲ್ಡಿಂಗ್ ನ್ನು ಆಯ್ದುಕೊಂಡಿತು, ಬ್ಯಾಟಿಂಗ್ ಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ ಪರವಾಗಿ ಶ್ರೇಯಸ್ ಅಯ್ಯರ್ 39, ರಿಶಬ್ ಪಂತ್ 31,ಮತ್ತು  ಮತ್ತು ಮಾರ್ಕಸ್ ಸ್ಟೋನಿಸ್ 53 ರನ್ ಗಳ ನೆರವಿನಿಂದ 8 ವಿಕೆಟ್ ಗಳನ್ನು ಕಳೆದುಕೊಂಡು 157 ರನ್ ಗಳಿಸಿತು.ಕಿಂಗ್ಸ್ ಇಲೆವನ್ ತಂಡದ ಪರವಾಗಿ ಮೊಹಮ್ಮದ್ ಶಮಿ 3 ವಿಕೆಟ್ ಹಾಗೂ ಶೆಲ್ಡನ್ ಕಾಟ್ರೆಲ್ 2 ವಿಕೆಟ್ ಗಳನ್ನು ಕಬಳಿಸಿದರು.

ಇನ್ನೊಂದೆಡೆ 158 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ ಕಿಂಗ್ಸ್ ಇಲೆವನ್ ತಂಡವು ಮಾಯಾಂಕ್ ಅಗರವಾಲ್ ಅವರ 60 ಎಸೆತಗಳಲ್ಲಿ 89ರನ್ ಗಳಿಸುವ ಮೂಲಕ ಗೆಲುವಿನ ಹಂತಕ್ಕೆ ತಂದಿದ್ದರಾದರೂ ಕೂಡ ಕೊನೆಗೆ ಪಂದ್ಯವು ಟೈ ನಲ್ಲಿ ಕೊನೆಗೊಂಡಿತು.

Trending News