Delhi vs Punjab: ದೆಹಲಿ ಕ್ಯಾಪಿಟಲ್ಸ್ ಗೆ ಗೆಲುವು ತಂದಿತ್ತ ಶಿಖರ್ ಧವನ್

ಮುಂಬೈನಲ್ಲಿನ ವಾಂಖೆಡ್ ಸ್ಟೇಡಿಯಂ ನಲ್ಲಿ ನಡೆದ 2021 ರ ಐಪಿಎಲ್ ಟೂರ್ನಿಯ 11 ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ ತಂಡವು ಪಂಜಾಬ್ ವಿರುದ್ಧ 6 ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.

Last Updated : Apr 18, 2021, 11:50 PM IST
  • ಮುಂಬೈನಲ್ಲಿನ ವಾಂಖೆಡ್ ಸ್ಟೇಡಿಯಂ ನಲ್ಲಿ ನಡೆದ 2021 ರ ಐಪಿಎಲ್ ಟೂರ್ನಿಯ 11 ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ ತಂಡವು ಪಂಜಾಬ್ ವಿರುದ್ಧ 6 ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.
 Delhi vs Punjab: ದೆಹಲಿ ಕ್ಯಾಪಿಟಲ್ಸ್ ಗೆ ಗೆಲುವು ತಂದಿತ್ತ ಶಿಖರ್ ಧವನ್  title=

ನವದೆಹಲಿ: ಮುಂಬೈನಲ್ಲಿನ ವಾಂಖೆಡ್ ಸ್ಟೇಡಿಯಂ ನಲ್ಲಿ ನಡೆದ 2021 ರ ಐಪಿಎಲ್ ಟೂರ್ನಿಯ 11 ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ ತಂಡವು ಪಂಜಾಬ್ ವಿರುದ್ಧ 6 ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.

ದೆಹಲಿ ತಂಡವು ಟಾಸ್ ಗೆದ್ದು ಮೊದಲು ಕ್ಷೇತ್ರ ರಕ್ಷಣೆಗೆ ಮೊರೆಹೋಯಿತು. ಇನ್ನೊಂದೆಡೆ ಮೊದಲ ಬ್ಯಾಟಿಂಗ್ ನ ಸದುಪಯೋಗಪಡಿಸಿಕೊಂಡ ಪಂಜಾಬ್ ತಂಡವು ಮಾಯಾಂಕ್ ಅಗರ್ವಾಲ್ 69 ಹಾಗೂ ಕೆ.ಎಲ್ ರಾಹುಲ್ ಅವರ 61 ರನ್ ಗಳ ನೆರವಿನಿಂದಾಗಿ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು.

ಇದನ್ನೂ ಓದಿ: IPL 2021: ದೆಹಲಿ ಕ್ಯಾಪಿಟಲ್ಸ್ ಬೌಲರ್ ಅನ್ರಿಕ್ ನಾರ್ಟ್ಜೆ ಗೆ ಕೊರೊನಾ ಧೃಢ

ಈ ಬೃಹತ್ ಗೆಲುವಿನ ಗುರಿಯನ್ನು ಬೆನ್ನತ್ತಿದ ದೆಹಲಿ (Delhi Capitals) ತಂಡವು ಉತ್ತಮ ಆರಂಭವನ್ನೇ ಕಂಡಿತು. ಪೃಥ್ವಿ ಶಾ 32, ಹಾಗೂ ಶಿಖರ್ ಧವನ್ 92 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ತಂದಿರಿಸಿದರು. ಕೊನೆಗೆ ಮಾರ್ಕಸ್ ಸ್ತೋನಿಸ್ 27 ರನ್ ಗಳಿಸುವ ಮೂಲಕ ತಂಡಕ್ಕೆ ಇನ್ನೂ 10 ಎಸೆತಗಳು ಬಾಕಿ ಇರುವಂತೆಯೇ ಗೆಲುವನ್ನು ತಂದುಕೊಟ್ಟರು.

ಇದನ್ನೂ ಓದಿ: IPL 2021: ಮೊದಲ ಪಂದ್ಯದಲ್ಲೇ ಸೋಲುಂಡ ಬಳಿಕ ಧೋನಿಗೆ ಎದುರಾಯಿತು ಮತ್ತೊಂದು ಕಂಟಕ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News