ನವದೆಹಲಿ: ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆದ ವಿಶ್ವಕಪ್ 2019 ರಿಂದ ಭಾರತ ನಿರ್ಗಮಿಸಿದಾಗಿನಿಂದಲೂ ಧೋನಿ ನಿವೃತ್ತಿ ಕುರಿತಾದ ಮಾತುಗಳು ಕೇಳಿ ಬರುತ್ತಿವೆ.
ಸದ್ಯ ತಾತ್ಕಾಲಿಕ ವಿಶ್ರಾಂತಿ ಪಡೆದಿರುವ ಧೋನಿ ಮುಂಬರುವ ಬಾಂಗ್ಲಾದೇಶದ ಟೂರ್ನಿಗೆ ಅವರನ್ನು ಆಯ್ಕೆ ಮಾಡಬೇಕೆ ? ಎಂದು ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅವರನ್ನು ಕೇಳಿದಾಗ ಇದಕ್ಕೆ ಅವರು ನಕಾರಾತ್ಮಕವಾಗಿ ಉತ್ತರಿಸಿದರು. ಇದಕ್ಕೆ ಅವರು ಧೋನಿ ಬದಲಿಗೆ ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಸೂಕ್ತ ಎಂದು ಅಭಿಪ್ರಾಯಪಟ್ಟರು. 'ನಾವು ಧೋನಿಯವರನ್ನು ಮೀರಿ ನೋಡಬೇಕಾಗಿದೆ. ಮಹೇಂದ್ರ ಸಿಂಗ್ ಧೋನಿ ನನ್ನ ತಂಡದಲ್ಲಿ ಕನಿಷ್ಠ ಸ್ಥಾನ ಹೊಂದಿಲ್ಲ. ನೀವು ಟಿ 20 ವಿಶ್ವಕಪ್ ಬಗ್ಗೆ ಮಾತನಾಡುತ್ತಿದ್ದರೆ, ನಾನು ಖಂಡಿತವಾಗಿಯೂ ರಿಷಭ್ ಪಂತ್ ಬಗ್ಗೆ ಯೋಚಿಸುತ್ತೇನೆ' ಎಂದು ಗವಾಸ್ಕರ್ ತಿಳಿಸಿದರು.
'ನನಗೆ ಪರ್ಯಾಯ ಆಯ್ಕೆ ಬೇಕಾದರೆ, ನಾನು ಸಂಜು ಸ್ಯಾಮ್ಸನ್ ಬಗ್ಗೆ ಯೋಚಿಸುತ್ತೇನೆ ಏಕೆಂದರೆ ಸಂಜು ಉತ್ತಮ ಕೀಪರ್ ಮತ್ತು ಉತ್ತಮ ಬ್ಯಾಟ್ಸ್‌ಮನ್ ಆಗಿದ್ದಾರೆ. ಟಿ 20 ವಿಶ್ವಕಪ್ ಬಗ್ಗೆ ಯೋಚಿಸಬೇಕಾದರೆ, ನಾವು ನಾನು ಯುವಕರ ಬಗ್ಗೆ ಯೋಚಿಸುತ್ತೇನೆ. ಧೋನಿ ಭಾರತೀಯ ಕ್ರಿಕೆಟ್‌ಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ, ಆದರೆ ಈಗ ಅವರನ್ನು ಮೀರಿ ನೋಡುವ ಸಮಯ ಬಂದಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಮುಂದುವರೆದು ಧೋನಿಯವರನ್ನು ತಳ್ಳುವುದಕ್ಕಿಂತ ಮೊದಲು ಅವರು ಬಿಡಬೇಕು ಎಂದು ಹೇಳಿದರು.