ನವದೆಹಲಿ: ಲಖನೌದಲ್ಲಿ ನಡೆಯುತ್ತಿರುವ ವೆಸ್ಟ್ಇಂಡೀಸ್ ವಿರುದ್ಧ 2 ನೇ ಟ್ವೆಂಟಿ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ನೂತನ ದಾಖಲೆಯನ್ನು ನಿರ್ಮಿಸಿದ್ದಾರೆ. ಹಾಗಾದರೆ ಅದೆನಂತೀರಾ? ಈಗ ಅವರು ಟ್ವೆಂಟಿ -20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1000 ರನ್ ಗಳನ್ನು ಗಳಿಸಿದ ತಲುಪಿದ ಆರನೇಯ ಆಟಗಾರನೆನಿಸಿದ್ದಾರೆ.
ಈ ಪಂದ್ಯಕ್ಕೂ ಮೊದಲು ಧವನ್ 980 ರನ್ ಗಳನ್ನು ಗಳಿಸಿದ್ದ ಅವರು 1000 ರನ್ ಗಳಿಸಲು ಕೇವಲ 20 ರನ್ ಗಳ ಅವಶ್ಯಕತೆ ಇತ್ತು. ಈಗ ಅವರು 43 ಗಳಿಸುವ ಮೂಲಕ ಈ ಸಾಧನೆ ಮಾಡಿದರು. ಇದಕ್ಕೂ ಮೊದಲು ಭಾರತದ ಪರ ವಿರಾಟ್ ಕೊಹ್ಲಿ, ಸುರೇಶ್ ರೈನಾ, ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್ ಮತ್ತು ಸಹ ಆಟಗಾರ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರು ಈ ದಾಖಲೆಯನ್ನು ಮಾಡಿದ್ದ ಆಟಗಾರರಾಗಿದ್ದರು. ಟಿ -20 ಕ್ರಿಕೆಟ್ನಲ್ಲಿ 1000 ರನ್ ಗಳನ್ನು ಭಾರತದ ಪರ ವೇಗವಾಗಿ ಗಳಿಸಿದ ಆಟಗಾರನೆಂದರೆ ವಿರಾಟ್ ಕೊಹ್ಲಿ.
ಇತ್ತೀಚೆಗೆ ಭಾರತದ ಪರ ಅತ್ಯುತ್ತಮ ಫಾರ್ಮ್ ನಲ್ಲಿರುವ ಧವನ್ ಏಷ್ಯಾ ಕಪ್ನಲ್ಲಿ 342 ರನ್ ಗಳನ್ನು ಗಳಿಸುವ ಮೂಲಕ ಅಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು.