ಬ್ರಾವೋ ಆರ್ಭಟಕ್ಕೆ ಬೆಚ್ಚಿದ ಮುಂಬೈ ಇಂಡಿಯನ್ಸ್

      

Last Updated : Apr 8, 2018, 10:33 AM IST
ಬ್ರಾವೋ ಆರ್ಭಟಕ್ಕೆ ಬೆಚ್ಚಿದ ಮುಂಬೈ ಇಂಡಿಯನ್ಸ್

ಮುಂಬೈ:  ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ 2018 ಆವೃತ್ತಿಯ ಆರಂಭಿಕ ಪಂದ್ಯದಲ್ಲಿ 1 ವಿಕೆಟ್ ಅಂತರದ ಮೂಲಕ ರೋಚಕ ಗೆಲುವು ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು  20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಮುಂಬೈ ಪರ ಇಶಾನ್ ಕಿಶನ್(40) ಸೂರ್ಯಕುಮಾರ್ ಯಾದವ್ (43) ಕ್ರುನಾಲ್ ಪಾಂಡ್ಯ(41) ಉತ್ತಮ ಪ್ರದರ್ಶನ ನೀಡಿದರು.

ಆದರೆ ಈ ಸವಾಲಿನ ಮೊತ್ತ ಬೆನ್ನತ್ತಿದ್ದ ಚೆನ್ನೈ ತಂಡವು ಡ್ವೇನ್ ಬ್ರಾವೋ ರವರ ಭರ್ಜರಿ 68 ರನ್ ಗಳ ನೆರವಿನಿಂದ 9 ವಿಕೆಟ್ ನಷ್ಟದೊಂದಿಗೆ 19.5 ಓವರ್ ಗಳಲ್ಲಿ ಗೆಲುವಿನ ಗುರಿ ತಲುಪಿತು. ಬ್ರಾವೋ ಕೇವಲ 30 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಏಳು ಸಿಕ್ಸರ್ ಗಳಿಂದ ಗಮನ ಸೆಳೆದರು.

ಮುಂಬೈ ಇಂಡಿಯನ್ಸ್ ಪರ ಹಾರ್ದಿಕ್ ಪಾಂಡ್ಯ ಮತ್ತು ಮಾಯಾಂಕ್ ಮಾರ್ಕಂಡೆ ಚೆನ್ನೈ ತಂಡದ  ತಲಾ ಮೂರು ವಿಕೆಟ್ ಗಳನ್ನೂ ಪಡೆದರು   

More Stories

Trending News