T20 World Cup 2024 : T20 ವಿಶ್ವಕಪ್ 2024 ರ ಪಂದ್ಯಗಳ ದಿನಾಂಕಗಳನ್ನು ಪ್ರಕಟಿಸಲಾಗಿದೆ.ಈ ಟೂರ್ನಿ ಜೂನ್ 1ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಜೂನ್ 29 ರಂದು ನಡೆಯಲಿದೆ.ಈ ಮಧ್ಯೆ, ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ಈ ಟೂರ್ನಿಯಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಮುಂಬರುವ SA20 ರ ಋತುವಿನಲ್ಲಿ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ಅನ್ನು ಮುನ್ನಡೆಸಲಿದ್ದಾರೆ. ಈ ವರ್ಷದ ಜೂನ್‌ನಲ್ಲಿ ನಡೆಯಲಿರುವ T20 ವಿಶ್ವಕಪ್ (T20 World Cup 2024)ನಲ್ಲಿ ಮತ್ತೊಮ್ಮೆ ನ್ಯಾಷನಲ್ ಟೀಂ ನ ಜರ್ಸಿಯನ್ನು ಧರಿಸುವ ಅಭಿಲಾಷೆ ಅವರದ್ದು.
ವಿಶ್ವ ಕಪ್ ಬಗ್ಗೆ ಮನದ ಮಾತು :
SA20 ಲೀಗ್‌ನ ಆರಂಭದ ಮೊದಲು ಕಾರ್ಯಕ್ರಮವೊಂದರಲ್ಲಿ T20 ವಿಶ್ವಕಪ್ ಕುರಿತು ಕೇಳಿದಾಗ, ಈ ಪಂದ್ಯಾವಳಿಯು ನನಗೆ ಅತ್ಯಂತ ಮುಖ್ಯವಾದದ್ದು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ. ಈ ಪಂದ್ಯಾವಳಿಯ ಮೂಲಕ ನಾನು ನನಗೆ ಕೊನೆಯ ಅವಕಾಶ ನೀಡಲು ಬಯಸುತ್ತೇನೆ. ನಾನು ಈಗಲೂ ಉತ್ತಮ ಕ್ರಿಕೆಟ್ ಆಡುತ್ತೇನೆ ಎಂದು ಸಾಬೀತು ಪಡಿಸಲು ಇದೊಂದು ಒಳ್ಳಯ ಅವಕಾಶ ಎಂದು ಹೇಳಿದ್ದಾರೆ.
ಇದನ್ನೂ ಓದಿ : Mohammed Shami: ನನ್ನ ಜೀವನದಲ್ಲಿ ದೊಡ್ಡ ಸಾಧನೆ.. ಅರ್ಜುನ ಪ್ರಶಸ್ತಿ ಕುರಿತು ಶಮಿ ಕಾಮೆಂಟ್!
ಐಪಿಎಲ್ 2023ರಲ್ಲಿ ರನ್ ಸುರಿಮಳೆ :
ಐಪಿಎಲ್ 2023ರಲ್ಲಿ ಫಾಫ್ ಡು ಪ್ಲೆಸಿಸ್ ತಮ್ಮ ಬ್ಯಾಟಿಂಗ್ ಮೂಲಕ ರನ್ ಗಳ ಮಳೆಯನ್ನೇ ಸುರಿಸಿದ್ದಾರೆ. ಈ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ 14 ಪಂದ್ಯಗಳಲ್ಲಿ 730 ರನ್ ಗಳಿಸಿದ್ದಾರೆ. ಅವರು ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು 2014 ಮತ್ತು 2016 ರ ಟಿ 20 ವಿಶ್ವಕಪ್‌ಗಳಲ್ಲಿ ದಕ್ಷಿಣ ಆಫ್ರಿಕಾದ ನಾಯಕರಾಗಿದ್ದರು. ಆದರೆ ವೈಟ್ ಬಾಲ್ ಕ್ರಿಕೆಟ್‌ನಿಂದ ಅಧಿಕೃತವಾಗಿ ನಿವೃತ್ತಿಯಾಗದಿದ್ದರೂ, ಕಳೆದ ಎರಡು ಪಂದ್ಯಾವಳಿಗಳಲ್ಲಿ ಆಯ್ಕೆಗಾರರು ಅವರನ್ನು ಆಯ್ಕೆ ಮಾಡಲಿಲ್ಲ.
ದಕ್ಷಿಣ ಆಫ್ರಿಕಾದ ಅಂಕಿಅಂಶಗಳು ಹೀಗಿವೆ :
ಡು ಪ್ಲೆಸಿಸ್ ದಕ್ಷಿಣ ಆಫ್ರಿಕಾ ಪರ 69 ಟೆಸ್ಟ್ ಪಂದ್ಯಗಳಲ್ಲಿ 10 ಶತಕ ಮತ್ತು 21 ಅರ್ಧ ಶತಕಗಳೊಂದಿಗೆ 4163 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, 143 ಏಕದಿನ ಪಂದ್ಯಗಳನ್ನು ಆಡುವಾಗ, 12 ಶತಕ ಮತ್ತು 35 ಅರ್ಧ ಶತಕಗಳೊಂದಿಗೆ 5507 ರನ್ ಗಳಿಸಿದ್ದಾರೆ. ಟಿ20 ಪಂದ್ಯಗಳಲ್ಲಿ 50 ಪಂದ್ಯಗಳನ್ನು ಆಡಿದ್ದಾರೆ ಮತ್ತು ಈ ಪಂದ್ಯಗಳಲ್ಲಿ 1528 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ಅವರು 1 ಶತಕ ಮತ್ತು 10 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.
ಇದನ್ನೂ ಓದಿ : Hardik Pandya: ಐಪಿಎಲ್ ತಯಾರಿ ಆರಂಭಿಸಿದ ಹಾರ್ದಿಕ್ ಪಾಂಡ್ಯ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.