ಸಂಗಾತಿ ಜೊತೆ ಬ್ರಿಟನ್ ಪ್ರವಾಸ - ಟೀಂ ಇಂಡಿಯಾ ಸದಸ್ಯರಿಗೆ ಅವಕಾಶ

ಭಾರತ ತಂಡ ಇಂಗ್ಲೆಂಡಿನಲ್ಲಿ ಆಗಸ್ಟ್ 4 ರಿಂದ ಐದು ಟೆಸ್ಟ್ ಪಂದ್ಯಗಳನ್ನು ಆಡಲಿದೆ.  ಅದಕ್ಕೂ ಮೊದಲು ಜೂನ್ 18-22ರವರೆಗೆ  ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವನ್ನು ಆಡಲಿದೆ. ಟೀಂ ಇಂಡಿಯಾ ಸುಮಾರು ನಾಲ್ಕು ತಿಂಗಳು ಕ್ರಿಕೆಟ್ ಪ್ರವಾಸದಲ್ಲೇ ಇರಲಿದೆ. 

Written by - Ranjitha R K | Last Updated : Jun 1, 2021, 12:54 PM IST
  • ಟೀಂ ಇಂಡಿಯಾ ಸದಸ್ಯರಿಗೆ ಸಿಹಿ ಸುದ್ದಿ
  • ಸಂಗಾತಿ ಜೊತೆ ಪ್ರವಾಸಕ್ಕೆ ಬ್ರಿಟನ್ ಒಪ್ಪಿಗೆ
  • ವಿರಾಟ್ ಜೊತೆ ಅನುಷ್ಕಾ ತೆರಳುತ್ತಾರಾ ಎಂಬುದು ಪ್ರಶ್ನೆ
ಸಂಗಾತಿ ಜೊತೆ ಬ್ರಿಟನ್ ಪ್ರವಾಸ - ಟೀಂ ಇಂಡಿಯಾ ಸದಸ್ಯರಿಗೆ ಅವಕಾಶ title=
ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ (file photo zee news)

ನವದೆಹಲಿ : ಟೀಂ ಇಂಡಿಯಾಕ್ಕೊಂದು (Team India) ಸಿಹಿ ಸುದ್ದಿ. ಮುಂಬರುವ ಇಂಗ್ಲೆಂಡ್ ಪ್ರವಾಸದಲ್ಲಿ ತಮ್ಮ ಸಂಗಾತಿಯನ್ನು ಜೊತೆಗೆ ಕರೆತರಲು ಬ್ರಿಟನ್ (Britain) ಸರ್ಕಾರ  ಒಪ್ಪಿಗೆ ನೀಡಿದೆ. ಮಡದಿ ಅಥವಾ ಗರ್ಲ್ ಫ್ರೆಂಡ್ ಜೊತೆಗೆ ಇದೀಗ ಇಂಗ್ಲಂಡ್ ಪ್ರವಾಸಕ್ಕೆ ತೆರಳಲು ಭಾರತೀಯ ಕ್ರಿಕೆಟ್ ಟೀಂಗೆ ಅವಕಾಶ ಸಿಕ್ಕಿದೆ.  ವಿರಾಟ್ ಕೊಹ್ಲಿಯೂ (Virat Kohliಸೇರಿದಂತೆ ತಂಡದ ಎಲ್ಲಾ ಸದಸ್ಯರು ತಮ್ಮ ಪತ್ನಿಯರ ಜೊತೆ ಇಂಗ್ಲೆಂಡ್ ಪ್ರವಾಸ ಮಾಡಬಹುದಾಗಿದೆ. 

ಸಂಗಾತಿ ಜೊತೆ ಇಂಗ್ಲೆಂಡ್ ಪ್ರವಾಸಕ್ಕೆ ಅನುಮತಿ
ಭಾರತ ತಂಡ ಇಂಗ್ಲೆಂಡಿನಲ್ಲಿ ಆಗಸ್ಟ್ 4 ರಿಂದ ಐದು ಟೆಸ್ಟ್ ಪಂದ್ಯಗಳನ್ನು ಆಡಲಿದೆ.  ಅದಕ್ಕೂ ಮೊದಲು ಜೂನ್ 18-22ರವರೆಗೆ  ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವನ್ನು ಆಡಲಿದೆ. ಟೀಂ ಇಂಡಿಯಾ (Team India) ಸುಮಾರು ನಾಲ್ಕು ತಿಂಗಳು ಕ್ರಿಕೆಟ್ ಪ್ರವಾಸದಲ್ಲೇ ಇರಲಿದೆ. 

ಇದನ್ನೂ ಓದಿ : ಸೆಪ್ಟೆಂಬರಿನಲ್ಲಿ ಮತ್ತೆ ಐಪಿಎಲ್ ಶುರು.! ಫೈನಲ್ ಮ್ಯಾಚ್ ಯಾವಾಗ ಗೊತ್ತಾ..?

ಜೂನ್ 3 ರಂದು ಲಂಡನ್ ತಲುಪಲಿದೆ ಟೀಂ ಇಂಡಿಯಾ.
ಜೂನ್ ಮೂರರಂದು ಟೀಂ ಇಂಡಿಯಾ ಲಂಡನ್ (London) ತಲುಪಲಿದೆ. ಅಲ್ಲಿಂದ ಸೌಂಥಂಪ್ಟನ್ ಗೆ ತೆರಳಲಿದೆ. ಅಲ್ಲಿ ಕ್ವಾರಂಟೀನ್ ನಲ್ಲಿ ಇರಲಿದೆ.  ಕ್ವಾರಂಟೀನ್ ನಲ್ಲಿ ಎಷ್ಟು ದಿನ ಇರಲಿದೆ ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಇದೀಗ ತಂಡ ಮುಂಬಯಿಯನಲ್ಲಿ (Mumbai) ಐಸೋಲೇಶನ್ ನಲ್ಲಿ ಇದೆ. 

ಜೂನ್ 2 ರಂದು ಇಂಗ್ಲೆಂಡಿಗೆ ನಿರ್ಗಮನ
ಐಪಿಎಲ್ (IPL) ಕೊನೆಗೊಂಡ ಬಳಿಕ ಭಾರತೀಯ ಕ್ರಿಕೆಟಿಗರು (Team India) ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ.  ಜೂನ್ 2 ರಂದು ತಂಡ ಲಂಡನ್ ಪ್ರವಾಸಕ್ಕೆ ಭಾರತದಿಂದ ನಿರ್ಗಮಿಸಲಿದೆ. 

ಇದನ್ನೂ ಓದಿ : Asian Boxing Championship: ಭಾರತೀಯ ಬಾಕ್ಸರ್ ಮೇರಿ ಕೋಮ್ ಗೆ ಬೆಳ್ಳಿ ಪದಕ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News