Video Viral: ಆಟಗಾರ್ತಿಯ ತುಟಿಗೆ ಚುಂಬಿಸಿದ್ದ ಸ್ಪೇನ್ ಫುಟ್ಬಾಲ್ ಫೆಡರೇಷನ್ ಅಧ್ಯಕ್ಷ ಸಸ್ಪೆಂಡ್..!

FIFA Women's World Cup 2023: 46 ವರ್ಷದ ಲೂಯಿಸ್‍ರನ್ನು ಕನಿಷ್ಠ 90 ದಿನಗಳವರೆಗೆ ಅಮಾನತು ಮಾಡಲಾಗಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಫುಟ್ಬಾಲ್ ಚಟುವಟಿಕೆಗಳಲ್ಲಿ ತೊಡಗುವಂತಿಲ್ಲವೆಂದು ತಿಳಿಸಲಾಗಿದೆ.

Written by - Puttaraj K Alur | Last Updated : Aug 27, 2023, 12:31 PM IST
  • ಫಿಫಾ ಮಹಿಳಾ ವಿಶ್ವಕಪ್ ಗೆದ್ದ ನಂತರ ಸ್ಪೇನ್‌ ತಂಡದ ಆಟಗಾರ್ತಿಯ ತುಟಿಗೆ ಕಿಸ್
  • ಸ್ಪೇನ್ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಲೂಯಿಸ್ ರುಬಿಯೇಲ್ಸ್ ರನ್ನು ಅಮಾನತುಗೊಳಿಸಿದ ಫಿಫಾ
  • ತಮ್ಮದೇ ದೇಶದ ಆಟಗಾರ್ತಿಗೆ ವೇದಿಕೆ ಮೇಲೆಯೇ ಕಿಸ್‌ ಮಾಡಿದ ಲೂಯಿಸ್ ರುಬಿಯಾಲ್ಸ್ ವಿರುದ್ಧ ಕಠಿಣ ಕ್ರಮ
Video Viral: ಆಟಗಾರ್ತಿಯ ತುಟಿಗೆ ಚುಂಬಿಸಿದ್ದ ಸ್ಪೇನ್ ಫುಟ್ಬಾಲ್ ಫೆಡರೇಷನ್ ಅಧ್ಯಕ್ಷ ಸಸ್ಪೆಂಡ್..! title=
ಲೂಯಿಸ್ ರುಬಿಯೇಲ್ಸ್ ರನ್ನು ಅಮಾನತು!

ನವದೆಹಲಿ: ಇತ್ತೀಚೆಗೆ ನಡೆದ ಫಿಫಾ ಮಹಿಳಾ ವಿಶ್ವಕಪ್(FIFA Women's World Cup) ಫೈನಲ್ ಪಂದ್ಯ ಗೆದ್ದ ನಂತರ ಸ್ಪೇನ್‌ ತಂಡದ ಆಟಗಾರ್ತಿ ಜೆನ್ನಿ ಎರ್ಮೊಸೋರ ತುಟಿಗೆ ಸ್ಪೇನ್ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಲೂಯಿಸ್ ರುಬಿಯೇಲ್ಸ್ ಕಿಸ್ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಲೂಯಿಸ್ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಅವರನ್ನು ಫಿಫಾ ಅಮಾನತುಗೊಳಿಸಿ ಆದೇಶಿಸಿದೆ.

ತಮ್ಮದೇ ದೇಶದ ಆಟಗಾರ್ತಿಗೆ ವೇದಿಕೆ ಮೇಲೆಯೇ ಕಿಸ್‌ ಮಾಡಿದ ಲೂಯಿಸ್ ರುಬಿಯಾಲ್ಸ್ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಫಿಫಾದ ಶಿಸ್ತು ಸಮಿತಿಯು, ಅವರ ನಡವಳಿಕೆಯ ಕುರಿತು ತನಿಖೆ ನಡೆಸುತ್ತಿದೆ. ಈ ಘಟನೆಯಿಂದ ನನಗೆ ತುಂಬಾ ಮುಜುಗರವಾಗಿದೆ ಎಂದು ಸ್ವತಃ ಜೆನ್ನಿ ಎರ್ಮೊಸೋ ಹೇಳಿಕೊಂಡಿದ್ದರು.

ಇದನ್ನೂ ಓದಿ: 1983ರಲ್ಲಿ ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಆಟಗಾರರ ಸಂಬಳ ಎಷ್ಟಿತ್ತು ಗೊತ್ತಾ? ದಿನಗೂಲಿಗಿಂತಲೂ ಕಡಿಮೆ ಕಣ್ರೀ..!

ಈ ಹಿನ್ನೆಲೆ ತಮ್ಮ ಸ್ಥಾನವನ್ನು ಪದತ್ಯಾಗ ಮಾಡುವಂತೆ ಲೂಯಿಸ್‍ಗೆ ಸೂಚಿಸಲಾಗಿತ್ತು. ಆದರೆ ಅವರು ಇದಕ್ಕೆ ನಿರಾಕರಿಸಿದ್ದರು. ಇದೀಗ ಕ್ರಮ ಕೈಗೊಂಡಿರುವ ಫಿಫಾ, ಆಟಗಾರ್ತಿಯ ಒಪ್ಪಿಗೆಯಿಲ್ಲದೆ ತುಟಿಗೆ ಚುಂಬಿಸಿರುವುದಕ್ಕೆ ಅಮಾನತು ಮಾಡಿದೆ.

46 ವರ್ಷದ ಲೂಯಿಸ್‍ರನ್ನು ಕನಿಷ್ಠ 90 ದಿನಗಳವರೆಗೆ ಅಮಾನತು ಮಾಡಲಾಗಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಫುಟ್ಬಾಲ್ ಚಟುವಟಿಕೆಗಳಲ್ಲಿ ತೊಡಗುವಂತಿಲ್ಲವೆಂದು ತಿಳಿಸಲಾಗಿದೆ. ಅಲ್ಲದೆ ಆಟಗಾರ್ತಿ ಜೆನ್ನಿ ಎರ್ಮೊಸೋ ಅಥವಾ ಆಕೆಯ ಆಪ್ತರನ್ನು ಯಾವುದೇ ಕಾರಣಕ್ಕೂ ಸಂಪರ್ಕಿಸುವಂತಿಲ್ಲವೆಂದು ಸಹ ಸೂಚಿಸಲಾಗಿದೆ. 2023ರ ಫಿಫಾ ಮಹಿಳಾ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಸ್ಪೇನ್‌ ತಂಡವು ಇಂಗ್ಲೆಂಡ್‌ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿ ವಿಶ್ವಕಪ್‌ ಗೆದ್ದುಕೊಂಡಿತು.

ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲೇ ಕ್ರಿಕೆಟಿಗ ಶಿಖರ್ ಧವನ್ ಕಾಲರ್ ಹಿಡಿದೆಳೆದ ವ್ಯಕ್ತಿ! ಶಾಕಿಂಗ್ ವಿಡಿಯೋ ವೈರಲ್

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News