ಬೆಲ್ಜಿಯಂ ಕನಸು ನುಚ್ಚುನೂರು, ಫೈನಲ್ ಗೆ ಲಗ್ಗೆ ಇಟ್ಟ ಫ್ರಾನ್ಸ್

     

Updated: Jul 11, 2018 , 11:59 AM IST
ಬೆಲ್ಜಿಯಂ ಕನಸು ನುಚ್ಚುನೂರು, ಫೈನಲ್ ಗೆ ಲಗ್ಗೆ ಇಟ್ಟ ಫ್ರಾನ್ಸ್

ಮಾಸ್ಕೋ: ಸಾಕಷ್ಟು ಕೂತೂಹಲ ಕೆರಳಿಸಿದ್ದ ಫ್ರಾನ್ಸ್ ಮತ್ತ್ತುಬೆಲ್ಜಿಯಂ ನಡುವಿನ ಪಂಧ್ಯದಲ್ಲಿ ಫ್ರಾನ್ಸ್ ತಂಡವು ಕೊನೆಗೂ 1-0 ರ ಅಂತರದಲ್ಲಿ ಗೆಲುವನ್ನು ಸಾಧಿಸಿದೆ.

ಆ ಮೂಲಕ ಈ ಬಾರಿಯ ಪುಟ್ಬಾಲ್ ಕಪ್ ಟೂರ್ನಿಯಲ್ಲಿ ಅಂತಿಮ ಘಟ್ಟಕ್ಕೆ ತಲುಪಿದೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ಮೊದರ್ಲರ್ದದಲ್ಲಿ  ಉಭಯ ತಂಡಗಳು ಗೋಲನ್ನು ಗಳಿಸುವಲ್ಲಿ ವಿಫಲವಾದವು. ಒಂದು ಹಂತದಲ್ಲಿ  21 ನೆ ನಿಮಿಷದಲ್ಲಿ ಬೆಲ್ಜಿಯಂ ಕಾರ್ನರ್ ನಲ್ಲಿ ಅವಕಾಶ ಸಿಕ್ಕರೂ ಕೂಡ ಆದರು ಗೋಲು ಗಳಿಸುವಲ್ಲಿ ವಿಫಲವಾಗಿತ್ತು. ಇದಾದ ನಾಲ್ಕು ನಿಮಿಷಗಳಲ್ಲಿ  ಫ್ರಾನ್ಸ್ ಗೆ ಸಹ ಕಾರ್ನರ್ ಅವಕಾಶ ದೊರೆತಿತ್ತು ಆದರೆ ಫ್ರಾನ್ಸ್ ಕೂಡ ವಿಫಲವಾಯಿತು. 

ಪಂದ್ಯದ ದ್ವೀತಿಯಾರ್ಧದಲ್ಲಿ ಕೇವಲ ಐದೇ ನಿಮಿಷದಲ್ಲಿ  ಫ್ರಾನ್ಸ್ ತಂಡದ ಸ್ಯಾಮುವಲ್ ಅವರ ಗೋಲ್ ನಿಂದಾಗಿ ಫ್ರಾನ್ಸ್ ಮುನ್ನಡೆಯನ್ನು ಸಾಧಿಸಿತು.ನಂತರ ಬೆಲ್ಜಿಯಂ ತಂಡವು ಗೋಲು ಗಳಿಸಲು ಸಾಕಷ್ಟು ಪ್ರಯತ್ನ ಪಟ್ಟರೂ ಸಹಿತ ಅದು ಸಾಧ್ಯವಾಗಲಿಲ್ಲ. ಇದರಿಂದ ಫ್ರಾನ್ಸ್ ತಂಡವು ಸುಲಭವಾಗಿ ವಿಶ್ವಕಪ್ ಪುಟ್ಬಾಲ್ ಫೈನಲ್ ಗೆ ಪ್ರವೇಶಿಸಿದೆ. ಇಂದು ನಡೆಯುವ ಇಂಗ್ಲೆಂಡ್ ಮತ್ತು ಕ್ರೋಶಿಯಾ ವಿರುದ್ದ ಪಂಧ್ಯದಲ್ಲಿ ಗೆಲ್ಲುವವರ ಪೈಕಿ ಅದು ಫೈನಲ್ ನಲ್ಲಿ ಎದುರಿಸಲಿದೆ.