FIFA ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ನೇರ ಪ್ರಸಾರದ ವರದಿ ಮಾಡುತ್ತಿದ್ದ ಪತ್ರಕರ್ತೆಯನ್ನು ಮುತ್ತಿಕ್ಕಿ, ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿ ಕ್ಷಮೆ ಕೋರಿದ್ದಾನೆ.
ಜರ್ಮನ್ ಚಾನೆಲ್ಗಾಗಿ ಕೆಲಸ ಮಾಡುತ್ತಿರುವ ಕೊಲಂಬಿಯಾದ ಪತ್ರಕರ್ತೆ ಜೂಲಿಯೆಟ್ ಗೊಂಜೆಲೆಜ್ ಥೆರಾನ್ ಈ ಘಟನೆಯ ವೀಡಿಯೊವನ್ನು ತನ್ನ ಸೋಶಿಯಲ್ ಮಿಡಿಯಾ ಅಕೌಂಟ್'ನಲ್ಲಿ ಶೇರ್ ಮಾಡಿದ್ದರು. ಈ ಘಟನೆ ವಿಶ್ವಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ವೀಡಿಯೋದಲ್ಲಿ ರಷ್ಯಾದಲ್ಲಿ ನಡೆಯುತ್ತಾ ಫುಟ್ಬಾಲ್ ಪದ್ಯದ ನೇರಪ್ರಸಾರ ವರದಿ ಮಾಡುತ್ತಿದ್ದ ಪತ್ರಕರ್ತೆಗೆ ವ್ಯಕ್ತಿಯೋರ್ವ ಇದ್ದಕ್ಕಿದ್ದಂತೆ ಬಂದು ಮುತ್ತಿಕ್ಕಿ, ಅಸಭ್ಯವಾಗಿ ವರ್ತಿಸಿ ಮಾಯವಾಗಿದ್ದ. ಆದರೂ ವಿಚಲಿತಗೊಳ್ಳದ ಪತ್ರಕರ್ತೆ ವರದಿ ಮುಂದುವರೆಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಳು.
ಆದರೆ, ಈ ಘಟನೆ ಬಗ್ಗೆ ಸ್ವತಃ ಆ ವ್ಯಕ್ತಿಯೇ ಬಹಿರಂಗವಾಗಿ ಕ್ಷಮೆ ಕೇಳಿ ವಿವರಣೆ ನೀಡಿದ್ದಾರೆ. ಫುಟ್ಬಾಲ್ ಅಭಿಮಾನಿಯಾಗಿರುವ ಆತ, ಟಿವಿ ಆಂಕರ್ ಕೆನ್ನೆಗೆ ಮುತ್ತಿಡುವುದಾಗಿ ತನ್ನ ಸ್ನೇಹಿತನೊಂದಿಗೆ ಬೆಟ್ ಕಟ್ಟಿದ್ದಾಗಿಯೂ, ಆ ಸಂದರ್ಭದಲ್ಲಿ ಆಕೆಯ ಭುಜ ಎಂದು ತಿಳಿದು ಎದೆ ಭಾಗವನ್ನು ಕೈತಪ್ಪಿ ಮುಟ್ಟಿದಾಗಿಯೂ ವಿವರಿಸಿದ್ದಾನೆ.