ಹೆಂಡತಿ, ಮಕ್ಕಳ ಎದುರೇ ಗುಂಡಿಕ್ಕಿ ಶ್ರೀಲಂಕಾ ಕ್ರಿಕೆಟಿಗನ ಹತ್ಯೆ..!

Dhammika Niroshana shot dead: ನಿರೋಶನರ ಕೊಲೆಗೆ ಕಾರಣವೇನು ಅನ್ನೋದು ಇನ್ನು ತಿಳಿದುಬಂದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ನಿರೋಶನರ ಮೇಲೆ ಗುಂಡಿನ ದಾಳಿ ನಡೆದಾಗ ಅವರ ಪತ್ನಿ ಮತ್ತು ಮಕ್ಕಳು ಮನೆಯಲ್ಲಿಯೇ ಇದ್ದರು ಎನ್ನಲಾಗಿದೆ.

Written by - Puttaraj K Alur | Last Updated : Jul 17, 2024, 04:35 PM IST
  • ಹೆಂಡತಿ ಮತ್ತು ಮಕ್ಕಳ ಎದುರೇ ಗುಂಡಿಕ್ಕಿ ಶ್ರೀಲಂಕಾದ ಮಾಜಿ ಕ್ರಿಕೆಟಿಗನ ಹತ್ಯೆ
  • ಶ್ರೀಲಂಕಾದ ಗಾಲೆ ನಗರದ ಅಂಬಲಂಗೋಡದಲ್ಲಿ ಧಮ್ಮಿಕಾ ನಿರೋಶನರ ಹತ್ಯೆ
  • ಶ್ರೀಲಂಕಾದ ಅಂಡರ್ 19 ತಂಡದ ಕ್ಯಾಪ್ಟನ್‌ ಸಹ ಆಗಿದ್ದ ಧಮ್ಮಿಕಾ ನಿರೋಶನ
ಹೆಂಡತಿ, ಮಕ್ಕಳ ಎದುರೇ ಗುಂಡಿಕ್ಕಿ ಶ್ರೀಲಂಕಾ ಕ್ರಿಕೆಟಿಗನ ಹತ್ಯೆ..! title=
ಶ್ರೀಲಂಕಾದ ಮಾಜಿ ಕ್ರಿಕೆಟಿಗನ ಹತ್ಯೆ!

Dhammika Niroshana shot dead: ಹೆಂಡತಿ ಮತ್ತು ಮಕ್ಕಳ ಎದುರೇ ಗುಂಡಿಕ್ಕಿ ಶ್ರೀಲಂಕಾ ಕ್ರಿಕೆಟಿಗನನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಶ್ರೀಲಂಕಾದ ಗಾಲೆ ನಗರದ ಅಂಬಲಂಗೋಡದಲ್ಲಿ ಈ ಘಟನೆ ನಡೆದಿದ್ದು, ಮನೆಗೆ ನುಗ್ಗಿ ಮಾಜಿ ಕ್ರಿಕೆಟಿಗ 41 ವರ್ಷದ ಧಮ್ಮಿಕಾ ನಿರೋಶನರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಧಮ್ಮಿಕಾ ನಿರೋಶನ ಅವರು ಶ್ರೀಲಂಕಾದ ಅಂಡರ್ 19 ತಂಡದ ಕ್ಯಾಪ್ಟನ್‌ ಸಹ ಆಗಿದ್ದರು. ಮಂಗಳವಾರ ರಾತ್ರಿ ನಿರೋಶನರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಪತ್ನಿ ಮತ್ತು ಮಕ್ಕಳ ಎದುರೇ ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಿ ಎಸ್ಕೇಪ್‌ ಆಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಹತ್ಯೆ ಮಾಡಿದ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

ಇದನ್ನೂ ಓದಿ: ಶ್ರೀಲಂಕಾದ ಮಾಜಿ ಕ್ರಿಕೆಟಿಗನ ಹತ್ಯೆ..! ಭಾರತ ಪ್ರವಾಸಕ್ಕೂ ಮುನ್ನವೇ ಶ್ರೀಲಂಕಾದಲ್ಲಿ ಆತಂಕದ ವಾತಾವರಣ...

ನಿರೋಶನರ ಕೊಲೆಗೆ ಕಾರಣವೇನು ಅನ್ನೋದು ಇನ್ನು ತಿಳಿದುಬಂದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ನಿರೋಶನರ ಮೇಲೆ ಗುಂಡಿನ ದಾಳಿ ನಡೆದಾಗ ಅವರ ಪತ್ನಿ ಮತ್ತು ಮಕ್ಕಳು ಮನೆಯಲ್ಲಿಯೇ ಇದ್ದರು ಎನ್ನಲಾಗಿದೆ. ಹಠಾತ್‌ ಮನೆಗೆ ನುಗ್ಗಿದ ದುಷ್ಕರ್ಮಿಗಳು ಗುಂಡಿ ಹಾರಿಸಿದ್ದಾರೆ. ಪರಿಣಾಮ ನಿರೋಶನ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಇದುವರೆಗೂ ಆರೋಪಿಗಳ ಬಗ್ಗೆ ಸುಳಿವು ಸಿಕಿಲ್ಲವೆಂದು ವರದಿಯಾಗಿದೆ.

ಸದ್ಯ ಈ ಹತ್ಯೆ ಪ್ರಕರಣದ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಕೈಗೊಂಡಿದ್ದಾರೆ. ನಿರೋಶನರನ್ನು ಏಕೆ ಹತ್ಯೆ ಮಾಡಲಾಗಿದೆ ಅನ್ನೋದರ ಬಗ್ಗೆ ಪೊಲೀಸರು ಉನ್ನತಮಟ್ಟದ ತನಿಖೆ ನಡೆಸುತ್ತಿದ್ದಾರೆ. ನಿರೋಶನ ಅವರು ಶ್ರೀಲಂಕಾದ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಲು ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಬಲಗೈ ವೇಗದ ಬೌಲರ್ ಆಗಿದ್ದ ಅವರು ಕೆಳಕ್ರಮಾಂಕದ ಬ್ಯಾಟ್ಸ್‌ಮನ್ ಸಹ ಆಗಿದ್ದರು. 2001 ಮತ್ತು 2004ರ ನಡುವೆ ಗಾಲೆ ಕ್ರಿಕೆಟ್ ಕ್ಲಬ್‌ ಪರ 12 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು 8 ಲಿಸ್ಟ್ A ಪಂದ್ಯಗಳನ್ನು ಆಡಿದ್ದಾರೆ.

ಇದನ್ನೂ ಓದಿ: "ನಾನು ಏನಾಗಿದ್ದರೂ ಅದು ಕೇವಲ ನಿನ್ನಿಂದಲೇ"..ತಾಯಿಯ ನೆನೆದು ಭಾವುಕ ಪೋಸ್ಟ್‌ ಹಂಚಿಕೊಂಡ ರವೀಂದ್ರಾ ಜಡೇಜಾ

2000ರಲ್ಲಿ ಶ್ರೀಲಂಕಾದ ಅಂಡರ್-19 ತಂಡಕ್ಕೆ ಪಾದಾರ್ಪಣೆ ಮಾಡಿದ ನಿರೋಶನ 2 ವರ್ಷಗಳ ಕಾಲ ಆಡಿದ್ದರು. ಈ ಅವಧಿಯಲ್ಲಿ ಅವರು 10 ಪಂದ್ಯಗಳಲ್ಲಿ ನಾಯಕತ್ವ ಸಹ ವಹಿಸಿದ್ದರು. ಏಂಜೆಲೊ ಮ್ಯಾಥ್ಯೂಸ್, ಉಪಲ್ ತರಂಗ ಸೇರಿದಂತೆ ಶ್ರೀಲಂಕಾದ ಅನೇಕ ಸ್ಟಾರ್ ಆಟಗಾರರು ನಿರೋಶನರ ನಾಯಕತ್ವದಡಿ ಆಡಿದ್ದರು. 2004ರ ಡಿಸೆಂಬರ್ ತಿಂಗಳಿನಲ್ಲಿ ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News