ಗಾಡ್ ಆಫ್ ಕ್ರಿಕೆಟ್ Sachin Tendulkar ಪತ್ನಿ ಅಂಜಲಿಗಿಂತ ತುಂಬಾ ಚಿಕ್ಕವರು: ಇವರಿಬ್ಬರ ವಯಸ್ಸಿನ ಅಂತರ ಎಷ್ಟು ಗೊತ್ತಾ?

Sachin Tendulkar and Anjali Tendulkar Age Difference: ಸಚಿನ್ ತೆಂಡೂಲ್ಕರ್ ಅವರ ಪರಿಚಯ ಯಾರಿಗೆ ಇಲ್ಲ ಹೇಳಿ. ಆದರೆ ಸಚಿನ್ ಮದುವೆಯಾದ ಅಂಜಲಿ ಬಗ್ಗೆ ಯಾರಿಗೂ ಹೆಚ್ಚು ಮಾಹಿತಿ ಇರಲಿಕ್ಕಿಲ್ಲ. ಅಂಜಲಿ ತೆಂಡೂಲ್ಕರ್ ಜನಪ್ರಿಯ ಕೈಗಾರಿಕೋದ್ಯಮಿ ಅಶೋಕ್ ಮೆಹ್ತಾ ಅವರ ಪುತ್ರಿ. ಇವರು ಮಕ್ಕಳ ವೈದ್ಯರಾಗಿ ಕೆಲಸ ಮಾಡಿದವರು.

Written by - Bhavishya Shetty | Last Updated : Feb 4, 2023, 10:21 AM IST
    • ಅಂಜಲಿ ತೆಂಡೂಲ್ಕರ್ ಅವರೊಂದಿಗಿನ ವಿವಾಹದ ಬಗ್ಗೆ ಹೆಚ್ಚು ಮಾತನಾಡಲಾಗುತ್ತದೆ
    • ವಯಸ್ಸಿನಲ್ಲಿ ಹಿರಿಯ ಸಂಗಾತಿಯನ್ನು ಮದುವೆಯಾದ ಅನೇಕ ಕ್ರಿಕೆಟಿಗರಲ್ಲಿ ಸಚಿನ್ ಕೂಡ ಒಬ್ಬರು
    • ಇವರ ಭೇಟಿ, ಮದುವೆ ಇವೆಲ್ಲದರ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ
ಗಾಡ್ ಆಫ್ ಕ್ರಿಕೆಟ್ Sachin Tendulkar ಪತ್ನಿ ಅಂಜಲಿಗಿಂತ ತುಂಬಾ ಚಿಕ್ಕವರು: ಇವರಿಬ್ಬರ ವಯಸ್ಸಿನ ಅಂತರ ಎಷ್ಟು ಗೊತ್ತಾ?
Sachin Tendulkar

Sachin Tendulkar and Anjali Tendulkar Age Difference: 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಪ್ರಪಂಚದಾದ್ಯಂತದ ಅವರ ಲಕ್ಷಾಂತರ ಅಭಿಮಾನಿಗಳು ಅವರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತಾರೆ. ಇನ್ನು ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಅಂಜಲಿ ತೆಂಡೂಲ್ಕರ್ ಅವರೊಂದಿಗಿನ ವಿವಾಹದ ಬಗ್ಗೆ ಹೆಚ್ಚು ಮಾತನಾಡಲಾಗುತ್ತದೆ. ತನಗಿಂತ ವಯಸ್ಸಿನಲ್ಲಿ ಹಿರಿಯ ಸಂಗಾತಿಯನ್ನು ಮದುವೆಯಾದ ಅನೇಕ ಕ್ರಿಕೆಟಿಗರಲ್ಲಿ ಸಚಿನ್ ಕೂಡ ಒಬ್ಬರು. ಇವರಿಬ್ಬರ ಪ್ರೀತಿ ಹೇಗಿತ್ತು ಗೊತ್ತಾ? ಇವರ ಭೇಟಿ, ಮದುವೆ ಇವೆಲ್ಲದರ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ.  

ಸಚಿನ್ ತೆಂಡೂಲ್ಕರ್ ಅವರ ಪರಿಚಯ ಯಾರಿಗೆ ಇಲ್ಲ ಹೇಳಿ. ಆದರೆ ಸಚಿನ್ ಮದುವೆಯಾದ ಅಂಜಲಿ ಬಗ್ಗೆ ಯಾರಿಗೂ ಹೆಚ್ಚು ಮಾಹಿತಿ ಇರಲಿಕ್ಕಿಲ್ಲ. ಅಂಜಲಿ ತೆಂಡೂಲ್ಕರ್ ಜನಪ್ರಿಯ ಕೈಗಾರಿಕೋದ್ಯಮಿ ಅಶೋಕ್ ಮೆಹ್ತಾ ಅವರ ಪುತ್ರಿ. ಇವರು ಮಕ್ಕಳ ವೈದ್ಯರಾಗಿ ಕೆಲಸ ಮಾಡಿದವರು.

ಇದನ್ನೂ ಓದಿ: Team India: ಹಣೆಗೆ ಕುಂಕುಮ ಇಡುತ್ತಿದ್ದಂತೆ ಬೇಡ ಎಂದು ಹಿಂದೆ ಸರಿದ ಟೀಂ ಇಂಡಿಯಾ ಸ್ಟಾರ್ ಆಟಗಾರರು: ಕಾರಣವೇನು ಗೊತ್ತಾ?

ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ತೆಂಡೂಲ್ಕರ್ ಮೊದಲ ಬಾರಿಗೆ ಭೇಟಿಯಾದರು. 1990 ರಲ್ಲಿ ಸಚಿನ್ ತೆಂಡೂಲ್ಕರ್ ಅವರು ತಮ್ಮ ಮೊದಲ ಅಂತರರಾಷ್ಟ್ರೀಯ ಕ್ರಿಕೆಟ್ ಪ್ರವಾಸದಿಂದ ಅವರ ತಂಡದೊಂದಿಗೆ ಹಿಂದಿರುಗುತ್ತಿರುವಾಗ, ಅಂಜಲಿ ತೆಂಡೂಲ್ಕರ್ ತನ್ನ ತಾಯಿಯನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಇದುವೇ ಅವರ ಮೊದಲ ಭೇಟಿ. ಅಂಜಲಿಯನ್ನು ಕಾಣುತ್ತಿದ್ದಂತೆ ಸಚಿನ್ ಮನಸಿನಲ್ಲಿ ಏನೋ ವಿಶೇಷ ಭಾವ ಮೂಡಿತ್ತಂತೆ.

ಬಾಲಿವುಡ್‌ಶಾದಿಸ್ ವರದಿಯ ಪ್ರಕಾರ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅಂಜಲಿ ತೆಂಡೂಲ್ಕರ್ ಈ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ, “1990 ರಲ್ಲಿ ಅವರು ತಮ್ಮ ಮೊದಲ ಇಂಗ್ಲೆಂಡ್ ಪ್ರವಾಸದಲ್ಲಿ ಚೊಚ್ಚಲ ಟೆಸ್ಟ್ ಶತಕವನ್ನು ಗಳಿಸಿದ ನಂತರ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಭೇಟಿಯಾದೆ. ನಿಜ ಹೇಳಬೇಕೆಂದರೆ, ನಾನು ಅವರನ್ನು ಮೊದಲು ವಿಮಾನ ನಿಲ್ದಾಣದಲ್ಲಿ ನೋಡಿದಾಗ ಅವರು ಯಾರೆಂದು ನನಗೆ ತಿಳಿದಿರಲಿಲ್ಲ. ಇದು ಸಂಪೂರ್ಣವಾಗಿ ಆಕಸ್ಮಿಕವಾಗಿ ನಡೆದ ಘಟನೆ” ಎಂದು ಹೇಳಿದ್ದಾರೆ.

ಮುಂದೆ, ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ತೆಂಡೂಲ್ಕರ್ ಕಾಮನ್ ಫ್ರೆಂಡ್ ಮನೆಯಲ್ಲಿ ಭೇಟಿಯಾದರು. ಈ ಭೇಟಿಯೇ ಮುಂದೆ ಬಹಳ ಗಟ್ಟಿಯಾದ ಬಂಧ ಬೆಸೆಯುವಂತೆ ಮಾಡಿದೆ ಎನ್ನಬಹುದು. ಅವರು ಮೊದಲು ಭೇಟಿಯಾದ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದ್ದರೆ, ಅಂಜಲಿ ತೆಂಡೂಲ್ಕರ್ ವೈದ್ಯಕೀಯ ಅಭ್ಯಾಸ ಮಾಡುತ್ತಿದ್ದರು.

ಇಬ್ಬರು ಡೇಟಿಂಗ್ ಮಾಡಲು ಪ್ರಾರಂಭಿಸಿದಾಗ, ಅಂಜಲಿ ಕ್ರಿಕೆಟ್ ಬಗ್ಗೆ ಹೆಚ್ಚು ಕಲಿಯಲು ಪ್ರಾರಂಭಿಸಿದರು. ಬಾಲಿವುಡ್‌ಶಾದಿಸ್‌ನ ವರದಿಯ ಪ್ರಕಾರ, ಅಂಜಲಿ ತೆಂಡೂಲ್ಕರ್‌ಗೆ ಕ್ರಿಕೆಟ್ ಬಗ್ಗೆ ಕಡಿಮೆ ಜ್ಞಾನವೇ ಸಚಿನ್ ತೆಂಡೂಲ್ಕರ್ ಮೇಲೆ ಪ್ರೀತಿ ಹೆಚ್ಚಾಗಲು ಕಾರಣವಾಗಿತ್ತಂತೆ.

ಇನ್ನು ಅಂಜಲಿ ತೆಂಡೂಲ್ಕರ್ ಮತ್ತು ಸಚಿನ್ ತೆಂಡೂಲ್ಕರ್ ಅವರು 5 ವರ್ಷಗಳ ಸುದೀರ್ಘ ಡೇಟಿಂಗ್ ನಡೆಸಿ ಬಳಿಕ 24 ಮೇ 1995 ರಂದು ವಿವಾಹವಾದರು. ಮುಂಬೈನ ವರ್ಲಿಯಲ್ಲಿರುವ ಜ್ಯುವೆಲ್ ಆಫ್ ಇಂಡಿಯಾದಲ್ಲಿ ಅದ್ಧೂರಿ ವಿವಾಹವಾದರು. ಅವರ ನಿಶ್ಚಿತಾರ್ಥ ಸಮಾರಂಭ ಬ್ರೀಚ್ ಕ್ಯಾಂಡಿ ಕ್ಲಬ್‌ನಲ್ಲಿ ನಡೆದಿತ್ತು.

ಇವೆಲ್ಲದರ ಮಧ್ಯೆ ಅಂಜಲಿ ಮತ್ತು ಸಚಿನ್ ಅವರ ವಯಸ್ಸಿನ ಚರ್ಚೆ ನಡೆದಿತ್ತು. ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ತೆಂಡೂಲ್ಕರ್ ನಡುವಿನ ವಯಸ್ಸಿನ ವ್ಯತ್ಯಾಸವು ಕೊಂಚ ವಿಭಿನ್ನವಾಗಿದೆ. ಇಬ್ಬರಿಗೂ 6 ವರ್ಷ ವಯಸ್ಸಿನ ವ್ಯತ್ಯಾಸವಿದೆ. ಅಂಜಲಿ ತೆಂಡೂಲ್ಕರ್ ಅವರು ಸಚಿನ್ ತೆಂಡೂಲ್ಕರ್ ಅವರಿಗಿಂತ 6 ವರ್ಷ ಹಿರಿಯರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: India Cricket: ಟೀಂ ಇಂಡಿಯಾದ ಈ ಸೂಪರ್ಸ್ಟಾರ್ ಟೆಸ್ಟ್ ಪದಾರ್ಪಣೆ ಖಚಿತ: ಆಸೀಸ್ ಉಡೀಸ್ ಆಗೋದು ಕನ್ಫರ್ಮ್!

1997 ರಲ್ಲಿ ಅಂಜಲಿ ತೆಂಡೂಲ್ಕರ್ ಅವರು ಮೊದಲ ಮಗು ಸಾರಾ ತೆಂಡೂಲ್ಕರ್ ಗೆ ಜನ್ಮ ನೀಡಿದರು. ಎರಡು ವರ್ಷಗಳ ನಂತರ ಈ ಜೋಡಿಗೆ ಅರ್ಜುನ್ ತೆಂಡೂಲ್ಕರ್ ಎಂಬ ಗಂಡು ಮಗು ಹುಟ್ಟಿತು. ಸಾರಾ ತೆಂಡೂಲ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಅವರು ಇತ್ತೀಚೆಗೆ ಮಾಡೆಲಿಂಗ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಮತ್ತೊಂದೆಡೆ, ಅರ್ಜುನ್ ತೆಂಡೂಲ್ಕರ್ ತಂದೆಯಂತೆ ಕ್ರಿಕೆಟ್ ಕ್ಷೇತ್ರದಲ್ಲಿ ಮಿಂಚುತ್ತಿದ್ದು, ಉತ್ತಮ ಬೌಲರ್ ಕೂಡ ಹೌದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

More Stories

Trending News