Bigg Boss Kannada season 11: ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಸೋಶಿಯಲ್ ಮೀಡಿಯಾದಲ್ಲಿ ಪೋಲಿಂಗ್ಸ್ ಜಾಸ್ತಿ ಆಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸರ್ವೆ ಮಾಡಲಾಗುತ್ತಿದೆ. ಯಾರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಬಹುದು? ಯಾರು ರನ್ನರ್ ಆಗಬಹುದು? ಯಾರಿಗೆ ಥರ್ಡ್ ಪ್ಲೇಸ್? ಟಾಪ್ ಫೈವ್ಗೆ ಯಾರೆಲ್ಲ ಬರುತ್ತಾರೆ ಅಂತಾ ಪೋಲ್ಸ್ ನಡೆಯುತ್ತಿದೆ. ಈ ಪೋಲ್ಸ್ ಪ್ರಕಾರ, ಯಾರ್ಯಾರಿಗೆ ಎಷ್ಟೆಷ್ಟು ವೋಟ್ ಬಂದಿದೆ? ಟೋಟಲ್ ಓವರ್ ಆಲ್ ವೋಟ್ಸ್ ಬಿದ್ದಿರೋದು ಎಷ್ಟು? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಅಂದಹಾಗೆ ಓವರ್ ಆಲ್ ಸೋಶಿಯಲ್ ಮೀಡಿಯಾದಲ್ಲಿ ನಡೆದಿರುವ ಸರ್ವೆ ಪ್ರಕಾರ, ಇದುವರೆಗೆ ಓವರ್ ಆಲ್ ವೋಟ್ಸ್ ಬಂದಿರುವುದು 76 ಲಕ್ಷಕ್ಕೂ ಹೆಚ್ಚಂತೆ. ಎಲ್ಲರಿಗೂ ಸೇರಿ ಓವರ್ ಆಲ್ 76 ಲಕ್ಷಕ್ಕೂ ಹೆಚ್ಚಿನ ವೋಟ್ಸ್ನಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಬಂದಿದೆ? ಇದರ ಮಾಹಿತಿ ತಿಳಿಯಲು ಪ್ರತಿಯೊಬ್ಬರಿಗೂ ಕುತೂಹಲ ಇರುತ್ತದೆ. ಇದರ ಪ್ರಕಾರ, ಕಡಿಮೆ ವೋಟ್ಸ್ ಬಂದಿರೋದು ಚೈತ್ರಾ ಕುಂದಾಪುರ ಅವರಿಗೆ. ಇವರಿಗೆ ಕೇವಲ 2% ವೋಟ್ ಬಂದಿದೆಯಂತೆ. ಅಂದರೆ 1,52,000+ ವೋಟ್ಸ್ ಚೈತ್ರಾ ಕುಂದಾಪುರರಿಗೆ ಬಂದಿದೆಯಂತೆ.
ಇದನ್ನೂ ಓದಿ: ನೀ ಹಿಂಗ ನೋಡಬ್ಯಾಡ.. ನೋಡಿ ಕೆಣಕ ಬ್ಯಾಡ.. ದಿಲ್ ದಾರಿ ತಪ್ಪುತ್ತೆ ಜಾನ್ವಿ..! ಫೋಟೋಸ್ ಇಲ್ಲಿವೆ..
ಇನ್ನು ಒಂಬತ್ತನೇ ಸ್ಥಾನದಲ್ಲಿ ಐಶ್ವರ್ಯ ಇದ್ದಾರೆ. 3% ಅಂದರೆ 2,28,000+ ವೋಟ್ಸ್ ಪಡೆದುಕೊಂಡಿರುವ ಅವರು ಒಂಬತ್ತನೇ ಸ್ಥಾನದಲ್ಲಿದ್ದಾರಂತೆ. ಎಂಟನೇ ಸ್ಥಾನದಲ್ಲಿ ರಜತ್ ಇದ್ದು, ಇವರು 3% ಅಂದರೆ 2,28,000+ ಮತಗಳನ್ನು ಪಡೆದುಕೊಂಡಿದ್ದಾರೆ. ಏಳನೇ ಸ್ಥಾನದಲ್ಲಿ ಧನರಾಜ್ ಆಚಾರ್ಯ ಇದ್ದು, ಇವರು ಸಹ 3% ಅಂದರೆ 2,20,000+ ವೋಟ್ಸ್ ಪಡೆದಿದ್ದಾರಂತೆ. ಆರನೇ ಸ್ಥಾನದಲ್ಲಿ ಗೌತಮಿ ಇದ್ದು, ಇವರು ಸಹ 3% ಅಂದರೆ 2,26,000+ ವೋಟ್ಸ್ ಪಡೆದುಕೊಂಡಿದ್ದಾರೆ. ಈ ನಾಲ್ಕೂ ಜನರು 3% ಅಂದರೆ 2,20,000+ ಮತಗಳನ್ನು ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ಮಾತುಗಳ ಬಾಣ!
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/4uQOauLxN5
— Colors Kannada (@ColorsKannada) December 21, 2024
ಇನ್ನು ಬಿಗ್ ಬಾಸ್ ಫಿನಾಲೆಗೆ ಬರುವ ಟಾಪ್ ಫೈವ್ ಕಂಟೆಸ್ಟೆಂಟ್ಸ್ ಯಾರಪ್ಪ ಅಂತಾ ನೀವು ಯೋಚಿಸುತ್ತಿದ್ದರೆ ಅದಕ್ಕೆ ಇಲ್ಲಿದೆ ಉತ್ತರ. ಟ್ರೆಂಡಿಂಗ್ ಪ್ರಕಾರ, ಸೋಶಿಯಲ್ ಮೀಡಿಯಾ ಸರ್ವೆದಲ್ಲಿ ಯಾರು ಟಾಪ್ ಫೈವ್ ಬರಬಹುದು? ಈ ಪೈಕಿ ಐದನೇ ಸ್ಥಾನದಲ್ಲಿ ಉಗ್ರ ಮಂಜು ಇದ್ದು, ಅವರು 8% ಅಂದರೆ 6,08,000 ವೋಟ್ಸ್ ಪಡೆದುಕೊಂಡಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಮೋಕ್ಷಿತಾ ಪೈ ಇದ್ದು, ಅವರು 9% ಅಂದರೆ 6,84,000+ ಮತಗಳನ್ನ ಪಡೆದುಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿ ಭವ್ಯಾ ಗೌಡ ಇದ್ದು, ಅವರು 10% ಅಂದರೆ 7,60,000 ಮತಗಳನ್ನ ಪಡೆದುಕೊಂಡಿದ್ದಾರೆ.
ಅತಿಹೆಚ್ಚು ವೋಟ್ಸ್ ಪಡೆದುಕೊಂಡಿರುವ ಸ್ಪರ್ಧಿಗಳಲ್ಲಿ ತ್ರಿವಿಕ್ರಮ ಮತ್ತು ಹನುಮಂತ ಟಾಪ್ 2ನಲ್ಲಿದ್ದಾರೆ. ಸೋಶಿಯಲ್ ಮೀಡಿಯಾ ಸರ್ವೆ ಪ್ರಕಾರ, 2ನೇ ಸ್ಥಾನದಲ್ಲಿ ತ್ರಿವಿಕ್ರಮ ಇದ್ದು, ಅವರು 29% ಅಂದರೆ 7,60,000+ ಮತಗಳನ್ನು ಪಡೆದುಕೊಂಡಿದ್ದಾರೆ. ಇನ್ನೂ ಟಾಪ್ಅಲ್ಲಿ ಹನುಮಂತ ಇದ್ದು, ಇವರು 30%ರಷ್ಟು ಅಂದರೆ 8,36,000+ ಮತಗಳನ್ನು ಪಡೆದುಕೊಂಡಿದ್ದಾರಂತೆ. ತ್ರಿವಿಕ್ರಮ್ಗೂ ಮತ್ತು ಹನುಮಂತನಿಗೂ 10% ವೋಟುಗಳ ಡಿಫರೆನ್ಸ್ ಇದೆಯಂತೆ. ಈಗಿನ ಟ್ರೆಂಡ್ ಮುಂದಿನ 40 ದಿನಗಳ ನಂತರ ಚೇಂಜ್ ಆಗಬಹುದು. ಆದರೆ ಹನುಮಂತು ಬಿಗ್ಬಾಸ್ ವಿನ್ನರ್ ಆಗ್ತಾನೆ ಅನ್ನೋ ಚರ್ಚೆ ಈಗಾಗಲೇ ಶುರುವಾಗಿದೆ. ಅಂತಿಮವಾಗಿ ಯಾವ ಸ್ಪರ್ಧಿ ಬಿಗ್ಬಾಸ್ 11ರ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.