IPL 2024: ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ʼನಿಂದ ಔಟ್.. ಈ ತಂಡ ಸೇರಲಿದ್ದಾರೆ ಸ್ಟಾರ್‌ ಆಲ್‌ರೌಂಡರ್!?

IPL 2024: ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ಹೊರಗುಳಿದಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್ ಸೀಸನ್‌ಗೂ ಮುನ್ನ ಗುಜರಾತ್ ಟೈಟಾನ್ಸ್ ತೊರೆಯಬಹುದು. ಹಾರ್ದಿಕ್ ಯಾವ ತಂಡ ಸೇರಲಿದ್ದಾರೆ ಎಂಬ ವರದಿ ಹೊರಬಿದ್ದಿದೆ.  

Written by - Chetana Devarmani | Last Updated : Nov 25, 2023, 07:31 AM IST
  • ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ
  • ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ʼನಿಂದ ಔಟ್?‌
  • ಈ ತಂಡ ಸೇರಲಿದ್ದಾರೆ ಸ್ಟಾರ್‌ ಆಲ್‌ರೌಂಡರ್!?
IPL 2024: ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ʼನಿಂದ ಔಟ್.. ಈ ತಂಡ ಸೇರಲಿದ್ದಾರೆ ಸ್ಟಾರ್‌ ಆಲ್‌ರೌಂಡರ್!? title=
Hardik Pandya

Hardik Pandya In IPL 2024:  ಐಪಿಎಲ್ 2024 ರ ಮೊದಲೇ ತಂಡಗಳಲ್ಲಿ ಕೆಲ ದೊಡ್ಡ ಬದಲಾವಣೆಯನ್ನು ನೋಡಬಹುದು. ಭಾರತದ ಟಿ20 ನಾಯಕ ಹಾರ್ದಿಕ್ ಪಾಂಡ್ಯ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನ ಮುನ್ನ ಗುಜರಾತ್ ಟೈಟಾನ್ಸ್‌ನಿಂದ ಹೊರಬರಬಹುದು. ಹಾರ್ದಿಕ್ ಯಾವ ತಂಡ ಸೇರಲಿದ್ದಾರೆ ಎಂಬ ವರದಿ  ಹೊರಬಿದ್ದಿದೆ.

ಹಾರ್ದಿಕ್ ಗುಜರಾತ್ ಟೈಟಾನ್ಸ್ ತೊರೆದು ಮತ್ತೆ ಮುಂಬೈ ಇಂಡಿಯನ್ಸ್ ಸೇರಬಹುದು ಎನ್ನಲಾಗ್ತಿದ. ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ಆದರೆ ಹಾರ್ದಿಕ್ ಮತ್ತೆ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಬಹುದು ಎಂಬ ಊಹಾಪೋಹಗಳಿವೆ. ಹಾರ್ದಿಕ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದಲ್ಲಿ 7 ಸೀಸನ್‌ಗಳನ್ನು ಆಡಿದ್ದಾರೆ. 

ಇದನ್ನೂ ಓದಿ: Navdeep Saini: ಆರ್‌ಸಿಬಿ ವೇಗಿ ನವದೀಪ್ ಲವ್‌ ಮ್ಯಾರೇಜ್‌..! ಬಹುಕಾಲದ ಪ್ರಿಯತಮೆ ಯಾರು ಗೊತ್ತಾ? 

ಗುಜರಾತ್ ಟೈಟಾನ್ಸ್‌ಗೆ ಸೇರಿದ ನಂತರ, ಹಾರ್ದಿಕ್ ಪಾಂಡ್ಯ ಈ ಹೊಸ ಐಪಿಎಲ್ ತಂಡವನ್ನು ಸತತ ಎರಡು ಬಾರಿ ಫೈನಲ್‌ಗೆ ಕರೆದೊಯ್ದರು. ಇವುಗಳಲ್ಲಿ ಗುಜರಾತ್ ತಂಡವೂ ತನ್ನ ಚೊಚ್ಚಲ ಸೀಸನ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಈಗ ಅವರು ತಂಡವನ್ನು ಬದಲಾಯಿಸುವ ಸಾಧ್ಯತೆಯಿದೆ, ಆದರೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಹಾರ್ದಿಕ್ ಇನ್ನೂ ಒಪ್ಪಂದಕ್ಕೆ ಸಹಿ ಹಾಕಿಲ್ಲ.

ಹಾಗೊಂದು ವೇಳೆ ಹಾರ್ದಿಕ್ ಮುಂಬೈಗೆ ಸೇರಿದರೆ, ಅವರ ಸ್ಥಾನದಲ್ಲಿ ಯಾವ ಆಟಗಾರ ಗುಜರಾತ್ ತಂಡವನ್ನು ಸೇರುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮುಂಬೈ ಜೋಫ್ರಾ ಆರ್ಚರ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ಇನ್ನೂ ಖಚಿತಪಡಿಸಿಲ್ಲ. ಮುಂಬೈ ಈ ಇಂಗ್ಲೆಂಡ್ ವೇಗಿಯನ್ನು 8 ಕೋಟಿ ರೂ.ಗೆ ಬೃಹತ್ ಮೊತ್ತಕ್ಕೆ ಖರೀದಿಸಿತ್ತು, ಆದರೆ ಗಾಯದ ಕಾರಣ ಕಳೆದ ಎರಡು ಸೀಸನ್‌ಗಳಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. 

ಇದನ್ನೂ ಓದಿ: ಭಾರತದ ಟಿ20 ಕ್ರಿಕೆಟ್’ಗೆ ಸಿಕ್ಕಾಯ್ತು ಪರ್ಫೆಕ್ಟ್ ಮ್ಯಾಚ್ ವಿನ್ನರ್! ಈತ ಎಂಟ್ರಿಯಾಗ್ತಿದ್ದಂತೆ ಸಿಕ್ಸರ್ ಸುರಿಮಳೆ ಗ್ಯಾರಂಟಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News