Heath Streak is Alive: ಜಿಂಬಾಬ್ವೆ ತಂಡದ ಮಾಜಿ ನಾಯಕ ಮತ್ತು ಅನುಭವಿ ಆಲ್’ರೌಂಡರ್ ಹೀತ್ ಸ್ಟ್ರೀಕ್ ಅವರು 49 ನೇ ವಯಸ್ಸಿನಲ್ಲಿ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ ಎಂಬ ಸುದ್ದಿ ಭಾರೀ ಗಂಭೀರತೆಯನ್ನು ಸೃಷ್ಟಿ ಮಾಡಿತ್ತು, ಆದರೆ ಇದೀಗ ಅವರು ಇನ್ನೂ ಬದುಕಿದ್ದಾರೆ ಎಂದು ಹೇಳುತ್ತಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಐರ್ಲೆಂಡ್ ಸರಣಿಯಲ್ಲಿ ಈ ಕ್ರಿಕೆಟಿಗನಿಗೆ ಟಿ20 ಪದಾರ್ಪಣೆಗೆ ಅವಕಾಶ ನೀಡುವರೇ ಕ್ಯಾಪ್ಟನ್ ಬುಮ್ರಾ?
ಸ್ಟ್ರೀಕ್ ಅವರ ಮಾಜಿ ಸಹ ಆಟಗಾರ ಹೆನ್ರಿ ಒಲಂಗಾ ಅವರು ಈ ಸುದ್ದಿಯನ್ನು ಸಂಪೂರ್ಣವಾಗಿ ಫೇಕ್ ಎಂದು ಹೇಳುತ್ತಿದ್ದಾರೆ. ಸ್ಟ್ರೀಕ್ ಜೀವಂತವಾಗಿದ್ದಾರೆ ಮತ್ತು ಹೆನ್ರಿ ಸ್ಟ್ರೀಕ್ ಅವರಿಗೆ ಕಳುಹಿಸಿರುವ ಸಂದೇಶದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
I can confirm that rumours of the demise of Heath Streak have been greatly exaggerated. I just heard from him. The third umpire has called him back. He is very much alive folks. pic.twitter.com/LQs6bcjWSB
— Henry Olonga (@henryolonga) August 23, 2023
“ಹೀತ್ ಸ್ಟ್ರೀಕ್ ಈಗ ಬೇರೆ ಜಗತ್ತಿಗೆ ಹೋಗಿದ್ದಾರೆ ಎಂಬ ದುಃಖದ ಸುದ್ದಿ ಬಂದಿದೆ” ಎಂದು ಹೆನ್ರಿ ಒಲಂಗಾ ಈ ಹಿಂದೆ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದರು. ಆದರೆ ಇದೀಗ ಈ ಟ್ವೀಟನ್ನು ಅಳಿಸುವುದರ ಜೊತೆಗೆ, ಸ್ಟ್ರೀಲ್ ಜೀವಂತವಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಐರ್ಲೆಂಡ್ ಸರಣಿಯಲ್ಲಿ ಈ ಕ್ರಿಕೆಟಿಗನಿಗೆ ಟಿ20 ಪದಾರ್ಪಣೆಗೆ ಅವಕಾಶ ನೀಡುವರೇ ಕ್ಯಾಪ್ಟನ್ ಬುಮ್ರಾ?
ಜಿಂಬಾಬ್ವೆ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್, ಮಂಡಳಿಯೊಂದಿಗಿನ ವಿವಾದದಿಂದಾಗಿ ಕೇವಲ 31 ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್;ಗೆ ವಿದಾಯ ಹೇಳಿದ್ದರು. ಸ್ಟ್ರೀಕ್ ಜಿಂಬಾಬ್ವೆ ಪರ 65 ಟೆಸ್ಟ್ ಮತ್ತು 189 ODIಗಳಲ್ಲಿ ಆಡಿದ್ದಾರೆ. ಈ ಸಮಯದಲ್ಲಿ, ಅವರು ಎರಡೂ ಸ್ವರೂಪಗಳಲ್ಲಿ ಒಟ್ಟು 4933 ರನ್’ಗಳೊಂದಿಗೆ 455 ವಿಕೆಟ್’ಗಳನ್ನು ಕಬಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ