ಭಾರತ ವಿರುದ್ಧ ಫೈನಲ್ ಆಡಬೇಕೆಂದರೆ ಪಾಕ್-ಲಂಕಾಗೆ ಬೇಕಿರುವ ಅಂಕಗಳೆಷ್ಟು? ಅರ್ಹತೆಗಳೇನು? ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ

Asia Cup 2023 Final Race: ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಸೂಪರ್-4 ಸುತ್ತಿನ ಪಂದ್ಯದಲ್ಲಿ ಭಾರತ 41 ರನ್‌’ಗಳಿಂದ ಶ್ರೀಲಂಕಾವನ್ನು ಸೋಲಿಸಿತು. ಈ ಮೂಲಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡುತ್ತಿರುವ ಟೀಂ ಇಂಡಿಯಾ 11ನೇ ಬಾರಿಗೆ ಏಷ್ಯಾಕಪ್ ಫೈನಲ್‌’ಗೆ ಟಿಕೆಟ್ ಗಿಟ್ಟಿಸಿಕೊಂಡಿದೆ.

Written by - Bhavishya Shetty | Last Updated : Sep 13, 2023, 12:58 PM IST
    • ಭಾರತೀಯ ಕ್ರಿಕೆಟ್ ತಂಡ ಏಷ್ಯಾ ಕಪ್-2023ರ ಫೈನಲ್‌’ಗೆ ಪ್ರವೇಶಿಸಿದೆ
    • ಈ ಮಧ್ಯೆ ಒಂದು ತಂಡವು ಫೈನಲ್‌’ನ ರೇಸ್‌’ನಿಂದ ಸಂಪೂರ್ಣವಾಗಿ ಹೊರಬಿದ್ದಿದೆ.
    • ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವೂ ಹೊರಬೀಳುವ ಭೀತಿಯಲ್ಲಿದೆ
ಭಾರತ ವಿರುದ್ಧ ಫೈನಲ್ ಆಡಬೇಕೆಂದರೆ ಪಾಕ್-ಲಂಕಾಗೆ ಬೇಕಿರುವ ಅಂಕಗಳೆಷ್ಟು? ಅರ್ಹತೆಗಳೇನು? ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ title=
Asia Cup-2023 Final

Asia Cup 2023 Final Race: ಭಾರತೀಯ ಕ್ರಿಕೆಟ್ ತಂಡ ಏಷ್ಯಾ ಕಪ್-2023ರ ಫೈನಲ್‌’ಗೆ ಪ್ರವೇಶಿಸಿದೆ. ಸ್ಫೋಟಕ ಆರಂಭಿಕ ಆಟಗಾರ ರೋಹಿತ್ ಶರ್ಮಾ ಸಾರಥ್ಯದ ತಂಡ ಮಂಗಳವಾರ ರಾತ್ರಿ ನಡೆದ ಸೂಪರ್-4 ಸುತ್ತಿನ ಪಂದ್ಯದಲ್ಲಿ ಶ್ರೀಲಂಕಾವನ್ನು 41 ರನ್‌’ಗಳಿಂದ ಸೋಲಿಸಿತು. ಈ ಮಧ್ಯೆ ಒಂದು ತಂಡವು ಫೈನಲ್‌’ನ ರೇಸ್‌’ನಿಂದ ಸಂಪೂರ್ಣವಾಗಿ ಹೊರಬಿದ್ದಿದೆ.

ಇದನ್ನೂ ಓದಿ: “ಭಾರತ ಗೆಲುವಿನ ಹೀರೋಗಳು ಈ ಇಬ್ಬರು ಆಟಗಾರರು”… ಸಂತಸದಲ್ಲಿ ರೋಹಿತ್ ಶರ್ಮಾ ಹೇಳಿಕೆ

ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಸೂಪರ್-4 ಸುತ್ತಿನ ಪಂದ್ಯದಲ್ಲಿ ಭಾರತ 41 ರನ್‌’ಗಳಿಂದ ಶ್ರೀಲಂಕಾವನ್ನು ಸೋಲಿಸಿತು. ಈ ಮೂಲಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡುತ್ತಿರುವ ಟೀಂ ಇಂಡಿಯಾ 11ನೇ ಬಾರಿಗೆ ಏಷ್ಯಾಕಪ್ ಫೈನಲ್‌’ಗೆ ಟಿಕೆಟ್ ಗಿಟ್ಟಿಸಿಕೊಂಡಿದೆ. ಈಗ ಭಾರತವು ಏಷ್ಯಾ ಕಪ್-2023 ಪ್ರಶಸ್ತಿಗಾಗಿ ಪಾಕಿಸ್ತಾನ ಅಥವಾ ಶ್ರೀಲಂಕಾವನ್ನು ಎದುರಿಸಲಿದೆ. ಈ ಫೈನಲ್ ಪಂದ್ಯ ಸೆಪ್ಟೆಂಬರ್ 17 ರಂದು ನಡೆಯಲಿದ್ದು, ಎಂಟನೇ ಟ್ರೋಫಿ ಎತ್ತಿಹಿಡಿಯಲು ಟೀಂ ಇಂಡಿಯಾ ಕಾತುರದಿಂದ ಕಾಯುತ್ತಿದೆ.

ಬಾಂಗ್ಲಾದೇಶ ತಂಡ ಏಷ್ಯಾಕಪ್‌’ನ ಫೈನಲ್‌’ಗೆ ತಲುಪುವ ರೇಸ್‌’ನಿಂದ ಸಂಪೂರ್ಣವಾಗಿ ಹೊರಗುಳಿದಿದೆ. ಸೂಪರ್-4 ಸುತ್ತಿನಲ್ಲಿ ಬಾಂಗ್ಲಾದೇಶ ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ಈಗಾಗಲೇ 2 ಪಂದ್ಯಗಳನ್ನು ಆಡಿರುವ ಬಾಂಗ್ಲಾಗೆ, ಸೆಪ್ಟೆಂಬರ್ 15ರಂದು ಭಾರತ ಸವಾಲೆಸೆಯಲಿದೆ.

ಇದನ್ನೂ ಓದಿ: ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಯಾರು?

ಪಾಕಿಸ್ತಾನಕ್ಕೂ ಅಪಾಯ:

ಇದೇ ವೇಳೆ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವೂ ಹೊರಬೀಳುವ ಭೀತಿಯಲ್ಲಿದೆ. ಸೆಪ್ಟೆಂಬರ್ 14 ಗುರುವಾರದಂದು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಸೂಪರ್-4 ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಗೆಲ್ಲುವ ತಂಡವು 2023 ರ ಏಷ್ಯಾಕಪ್‌’ನ ಫೈನಲ್ ಅನ್ನು ಸೆಪ್ಟೆಂಬರ್ 17 ರಂದು ಭಾರತದ ವಿರುದ್ಧ ಆಡಲಿದೆ. ಭಾರತ ತನ್ನ ಕೊನೆಯ ಪಂದ್ಯದಲ್ಲಿ ಎರಡೂ ತಂಡಗಳನ್ನು ಸೋಲಿಸಿದೆ. ಇನ್ನು ಶ್ರೀಲಂಕಾ ತಂಡ ಪಾಕಿಸ್ತಾನವನ್ನು ಸೋಲಿಸಿದರೆ ಫೈನಲ್‌’ಗೆ ನೇರ ಟಿಕೆಟ್ ಪಡೆಯುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News