ಒಂದು ಟ್ವೀಟ್ ಗೆ ವಿರಾಟ್ ಕೊಹ್ಲಿ ಗಳಿಕೆ ಎಷ್ಟು?

ಅಮೆರಿಕಾದ ಒಂದು ಸ್ಪೋರ್ಟ್ಸ್ ವೆಬ್ ಸೈಟ್ ಪ್ರಕಾರ ಕ್ರಿಸ್ಟಿಯಾನೋ ರೋನಾಲ್ಡೋ ಒಂದು ಟ್ವೀಟ್ ನಿಂದ ಅತಿ ಹೆಚ್ಚು ಗಳಿಕೆ ಮಾಡುವ ಆಟಗಾರರಾಗಿದ್ದಾರೆ. ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

Updated: Feb 24, 2020 , 05:22 PM IST
ಒಂದು ಟ್ವೀಟ್ ಗೆ ವಿರಾಟ್ ಕೊಹ್ಲಿ ಗಳಿಕೆ ಎಷ್ಟು?

ನವದೆಹಲಿ:ವೆಲಿಂಗ್ಟನ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ನಲ್ಲಿ ಸೋತ ಟೀಮ್ ಇಂಡಿಯಾ ಇದೀಗ ಸೋಲಿನ ಕಾರಣಗಳತ್ತ ಗಮನ ಹರಿಸುತ್ತಿದೆ. ಅಪ್ಪಿತಪ್ಪಿಯೂ ಕೂಡ ಈ ಸೋಲನ್ನು ಪುನರಾವರ್ತಿಸುವ ಮೂಡ್ ನಲ್ಲಿ ತಂಡದ ನಾಯಕ ವಿರಾಟ್ ಕೊಹ್ಲಿ ಇಲ್ಲ. ಏತನ್ಮಧ್ಯೆ ಅಮೇರಿಕಾದ ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಕಂಪನಿ ಓಪನ್ ಡೋರ್ಸ್, ವಿರಾಟ್ ಕೊಹ್ಲಿ ಒಂದು ಟ್ವೀಟ್ ಗೆ ಅತಿ ಹೆಚ್ಚು ಗಳಿಕೆ ಮಾಡುವ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ ಎಂದು ಹೇಳಿದೆ.

ಪೋರ್ಚುಗೀಸ್ ನ ಖ್ಯಾತ ಫುಟ್ ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ ಈ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದು, ಅವರು ಒಂದು ಟ್ವೀಟ್ ನಿಂದ 868,604 ಡಾಲರ್ ಅಂದರೆ 6.24 ಕೋಟಿ ರೂ. ಹಣ ಹಳಿಸುತ್ತಾರೆ. ಎರಡನೇ ಸ್ಥಾನದಲ್ಲಿ ಸ್ಪೇನ್ ನ ಬಾರ್ಸಿಲೋನಾ ಫುಟ್ ಬಾಲ್ ಆಟಗಾರ ಎಂಡ್ರೆಸ್ ಇನಿಯಸ್ತ್ ಹೆಸರಿದ್ದು, ಅವರು 590,825 ಡಾಲರ್ ಅಂದರೆ 4.25 ಕೋಟಿ ರೂ.ಗಳಿಕೆ ಮಾಡುತ್ತಾರೆ.

ಈ ಪಟ್ಟಿಯ ಐದನೇ ಸ್ಥಾನದಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ ಇದ್ದು, ವಿರಾಟ್ ಒಂದು ಟ್ವೀಟ್ ಹಿಂದೆ 350,101ಡಾಲರ್ ಅಂದರೆ 2.51 ಕೋಟಿ ರೂ. ಗಳಿಕೆ ಮಾಡುತ್ತಾರೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಇನ್ಸ್ಟಾ ಗ್ರಾಮ್ ಮೇಲೆ ತಮ್ಮ ಹಿಂಬಾಲಕರ ಸಂಖ್ಯೆಯನ್ನು 5 ಕೋಟಿ ದಾಟಿದ್ದಾರೆ.

ಈ ಪಟ್ಟಿಯ ಮೂರನೇ ಸ್ಥಾನದಲ್ಲಿ ಬ್ರೇಜಿಲ್ ಫುಟ್ ಬಾಲ್ ಆಟಗಾರ ನೆಮಾರ್ ಇದ್ದು, ನೆಮಾರ್ ಒಂದು ಟ್ವೀಟ್ ಮೂಲಕ 478,138 ಡಾಲರ್ ಅಂದರೆ 3.44 ಕೋಟಿ ರೂ. ಗಳಿಕೆ ಮಾಡುತ್ತಾರೆ. ನಾಲ್ಕನೇ ಸ್ಥಾನದಲ್ಲಿ ಅಮೇರಿಕಾದ ಆಟಗಾರ ಲೆಬ್ರೋನ್ ಜೇಮ್ಸ್ ಇದ್ದು, ಇವರು ತಮ್ಮ ಒಂದು ಟ್ವೀಟ್ ನಿಂದ 470,356 ಡಾಲರ್ ಅಂದರೆ 3.38 ಕೋಟಿ ರೂ. ಗಳಿಸುತ್ತಾರೆ.