IND vs PAK: ಇಂಡೋ-ಪಾಕ್ ಪಂದ್ಯಕ್ಕೆ ಭಾರೀ ಡಿಮ್ಯಾಂಡ್! ಟಿಕೆಟ್ ಬೆಲೆ ಎಷ್ಟು ತಿಳಿದರೆ ಶಾಕ್ ಆಗೋದು ಗ್ಯಾರಂಟಿ

IND vs PAK, T20 World Cup 2024: ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಹೆಚ್ಚು ಕಾಯುತ್ತಿದ್ದಾರೆ. ಜೂನ್ 2 ರಂದು ಆರಂಭವಾಗಲಿರುವ ಈ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ಧ 5 ರಂದು ಆಡಲಿದೆ. ಜೂನ್ 9 ರಂದು ಪಾಕಿಸ್ತಾನದೊಂದಿಗೆ ಸೆಣಸಾಡಲಿದೆ.

Written by - Bhavishya Shetty | Last Updated : Mar 4, 2024, 01:38 PM IST
    • ಮಾರ್ಚ್ 22 ರಿಂದ ಐಪಿಎಲ್ 17ನೇ ಸೀಸನ್ ಆರಂಭ
    • ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್
    • ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಹೆಚ್ಚು ಕಾಯುತ್ತಿದ್ದಾರೆ
IND vs PAK: ಇಂಡೋ-ಪಾಕ್ ಪಂದ್ಯಕ್ಕೆ ಭಾರೀ ಡಿಮ್ಯಾಂಡ್! ಟಿಕೆಟ್ ಬೆಲೆ ಎಷ್ಟು ತಿಳಿದರೆ ಶಾಕ್ ಆಗೋದು ಗ್ಯಾರಂಟಿ title=
t20 world cup ticket price

india vs pakistan match ticket price: ಸದ್ಯ ಕ್ರಿಕೆಟ್ ಅಭಿಮಾನಿಗಳು IPLಗಾಗಿ ಕಾಯುತ್ತಿದ್ದಾರೆ. ಮಾರ್ಚ್ 22 ರಿಂದ ಐಪಿಎಲ್ 17ನೇ ಸೀಸನ್ ಆರಂಭವಾಗುತ್ತಿದ್ದು, ಸುಮಾರು 2 ತಿಂಗಳ ಕಾಲ ನಡೆಯುವ ಈ ಟೂರ್ನಿಯ ಬಳಿಕ ಟಿ20 ವಿಶ್ವಕಪ್ ಶುರುವಾಗಲಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಈ ಟೂರ್ನಿಯ ಕ್ರೇಜ್ ಈಗಾಗಲೇ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಅದರಲ್ಲೂ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಹೆಚ್ಚು ಕಾಯುತ್ತಿದ್ದಾರೆ. ಜೂನ್ 2 ರಂದು ಆರಂಭವಾಗಲಿರುವ ಈ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ಧ 5 ರಂದು ಆಡಲಿದೆ. ಜೂನ್ 9 ರಂದು ಪಾಕಿಸ್ತಾನದೊಂದಿಗೆ ಸೆಣಸಾಡಲಿದೆ.

ಇದನ್ನೂ ಓದಿ: IND vs ENG 5th Test: ಧರ್ಮಶಾಲಾದಲ್ಲಿ ಅತಿದೊಡ್ಡ ದಾಖಲೆ ಮುರಿಯಲಿರುವ ರೋಹಿತ್‌ ಶರ್ಮಾ..!

ಭಾರತ-ಪಾಕ್ ಪಂದ್ಯಕ್ಕೆ ಇನ್ನೂ ಮೂರು ತಿಂಗಳಿಗಿಂತ ಹೆಚ್ಚು ಸಮಯವಿದೆ. ಆದರೆ ಟಿಕೆಟ್‌’ಗಾಗಿ ಈಗಾಗಲೇ ಪೈಪೋಟಿ ಪ್ರಾರಂಭವಾಗಿದೆ. ಈ ಪಂದ್ಯದ ಟಿಕೆಟ್‌’ಗಳ ಬೆಲೆ ಅಮೆರಿಕದ ದೊಡ್ಡ ಕ್ರೀಡಾ ತಜ್ಞರನ್ನೇ ಅಚ್ಚರಿಗೊಳಿಸಿದೆ. ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾದಾಗ, ಪಂದ್ಯವನ್ನು ವೀಕ್ಷಿಸುವ ಯಾವುದೇ ಅವಕಾಶವನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ. ಇದಕ್ಕಾಗಿ ಎಷ್ಟೇ ದುಡ್ಡು ಖರ್ಚು ಮಾಡಲು ಸಿದ್ಧರಾಗಿದ್ದಾರೆ.

T20 ವಿಶ್ವಕಪ್ ಪಂದ್ಯದ ಟಿಕೆಟ್‌’ಗಳ ಕಡಿಮೆ ಬೆಲೆ 497 ರೂ ($6). ಭಾರತ ಮತ್ತು ಪಾಕಿಸ್ತಾನದ ಪಂದ್ಯದ ಪ್ರೀಮಿಯಂ ಸೀಟ್‌’ಗಳ ಅತ್ಯಂತ ದುಬಾರಿ ಟಿಕೆಟ್ ತೆರಿಗೆ ಇಲ್ಲದೆ ರೂ 33,148 ($400). ಮಾಧ್ಯಮ ವರದಿಗಳ ಪ್ರಕಾರ, StubHub ಮತ್ತು SeatGeek ನಂತಹ ಪ್ಲಾಟ್‌ಫಾರ್ಮ್‌’ಗಳಲ್ಲಿ ಬೆಲೆಗಳು ತುಂಬಾ ಹೆಚ್ಚಿವೆ. 33,148 ರೂಪಾಯಿಗಳಿದ್ದ ಟಿಕೆಟ್‌ಗಳು ಮರುಮಾರಾಟ ಸೈಟ್‌’ಗಳಲ್ಲಿ ಸರಿಸುಮಾರು 33 ಲಕ್ಷ ರೂಪಾಯಿಗಳಿಗೆ (40 ಸಾವಿರ ಡಾಲರ್) ಮಾರಾಟವಾಗುತ್ತಿವೆ. ಇದಕ್ಕೆ ಪ್ಲಾಟ್‌ಫಾರ್ಮ್ ಶುಲ್ಕವನ್ನು ಸೇರಿಸಿದರೆ, ಅದು ಸರಿಸುಮಾರು 41 ಲಕ್ಷ (50 ಸಾವಿರ ಡಾಲರ್) ತಲುಪುತ್ತದೆ.

1.86 ಕೋಟಿ ಮೌಲ್ಯದ ಟಿಕೆಟ್!

ಯುಎಸ್ಎ ಟುಡೆ ವರದಿಯ ಪ್ರಕಾರ, ಸೂಪರ್ ಬೌಲ್ 58 ರ ಸರಾಸರಿ ಟಿಕೆಟ್ ಅನ್ನು ದ್ವಿತೀಯ ಮಾರುಕಟ್ಟೆಯಲ್ಲಿ $9000 (ರೂ. 7,46,009) ಗೆ ಮಾರಾಟ ಮಾಡಲಾಗಿದೆ. NBA ಫೈನಲ್‌’ಗಾಗಿ ಕೋರ್ಟ್‌ಸೈಡ್ ಸೀಟುಗಳ ಬೆಲೆ $24,000 (Rs 19,89,358) ವರೆಗೆ ಇತ್ತು. ಭಾರತ-ಪಾಕಿಸ್ತಾನ ಪಂದ್ಯದ ಅತ್ಯಂತ ದುಬಾರಿ ಟಿಕೆಟ್ ಅನ್ನು ಸುಮಾರು 1.4 ಕೋಟಿ ರೂ. ($175,000) ನಿಗದಿಪಡಿಸಲಾಗಿದೆ. ಇದಕ್ಕೆ ಪ್ಲಾಟ್‌ ಫಾರ್ಮ್ ಶುಲ್ಕಗಳು ಮತ್ತು ಹೆಚ್ಚುವರಿ ಶುಲ್ಕಗಳನ್ನು ಸೇರಿಸಿದರೆ, ಈ ಅಂಕಿಅಂಶವು ಸರಿಸುಮಾರು 1.86 ಕೋಟಿ ರೂ. ಆಗಲಿದೆ.

ಇದನ್ನೂ ಓದಿ: ಮಾರ್ಚ್ 7 ರಂದು ತೆರೆ ಕಾಣಲಿದೆ ಟ್ರೇಲರ್ ನಲ್ಲೇ ಮೋಡಿ ಮಾಡಿರುವ "ಜೋಗ್ 101"  

ಭಾರತ-ಪಾಕಿಸ್ತಾನ ಮುಖಾಮುಖಿ

ಟಿ20 ವಿಶ್ವಕಪ್‌’ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಇದುವರೆಗೆ 8 ಪಂದ್ಯಗಳು ನಡೆದಿವೆ. ಭಾರತ 7 ಪಂದ್ಯಗಳಲ್ಲಿ ಗೆದ್ದಿದೆ. ಪಾಕಿಸ್ತಾನ 1 ಪಂದ್ಯದಲ್ಲಿ ಯಶಸ್ಸು ಕಂಡಿದೆ. ಭಾರತದ ಗೆಲುವಿನಲ್ಲಿ 2007ರ ಟೈ ಪಂದ್ಯವೂ ಸೇರಿದೆ. ಆಗ ಟೀಂ ಇಂಡಿಯಾ ಬೌಲ್ ಔಟ್’ನಲ್ಲಿ ಪಂದ್ಯ ಗೆದ್ದಿತ್ತು. ಪಾಕಿಸ್ತಾನದ ಏಕೈಕ ಗೆಲುವು 2021 ರಲ್ಲಿ. 2022ರಲ್ಲಿ ಆ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿತ್ತು. ವಿರಾಟ್ ಕೊಹ್ಲಿ ಅವರ ಸ್ಮರಣೀಯ ಇನ್ನಿಂಗ್ಸ್‌’ನಿಂದಾಗಿ ಪಾಕ್ ಸೋಲು ಕಂಡಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News