ನವದೆಹಲಿ: ಎಂ.ಎ ಚಿದಂಬರ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಕೋಲ್ಕತ್ತಾ ತಂಡವು ಹೈದರಾಬಾದ್ ವಿರುದ್ಧ 10 ರನ್ ಗಳ ಗೆಲುವು ಸಾಧಿಸಿದೆ.
ಇದನ್ನೂ ಓದಿ: IPL 2021: ಮೊದಲ ಪಂದ್ಯದಲ್ಲೇ ಸೋಲುಂಡ ಬಳಿಕ ಧೋನಿಗೆ ಎದುರಾಯಿತು ಮತ್ತೊಂದು ಕಂಟಕ
Manish Pandey brings up his half-century off 37 deliveries.
Live - https://t.co/yqAwBPCpkb #VIVOIPL #SRHvKKR pic.twitter.com/eXw200hBRe
— IndianPremierLeague (@IPL) April 11, 2021
ಇದನ್ನೂ ಓದಿ: ವಿರಾಟ್ ಕೊಹ್ಲಿ ದಾಖಲೆಗಳಿಗೆ ಲಗ್ಗೆ ಇಡುತ್ತಿದ್ದಾನೆ ಈ ಪಾಕ್ ಆಟಗಾರ..!
ಟಾಸ್ ಗೆದ್ದ ಹೈದರಾಬಾದ್ ತಂಡವು ಕೋಲ್ಕತ್ತಾ ತಂಡಕ್ಕೆ ಬ್ಯಾಟಿಂಗ್ ಅವಕಾಶವನ್ನು ನೀಡಿತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕೋಲ್ಕತ್ತಾ ತಂಡವು ಆರಂಭದಲ್ಲಿಯೇ ಆಕ್ರಮಣಕಾರಿ ಬ್ಯಾಟಿಂಗ್ ಗೆ ಮೊರೆ ಹೋಯಿತು. ಕೆಕೆಆರ್ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ ನಿತೀಶ್ ರಾಣಾ ಕೇವಲ 56 ಎಸೆತಗಳಲ್ಲಿ ಭರ್ಜರಿ ಆರು ಸಿಕ್ಸರ್ ಹಾಗೂ ಒಂಬತ್ತು ಬೌಂಡರಿ ಗಳೊಂದಿಗೆ 80 ರನ್ ಗಳಿಸಿದರು.ಇನ್ನೊಂದೆಡೆಗೆ ತ್ರಿಪಾಠಿ ಕೂಡ ವೇಗವಾಗಿ ಅರ್ಧಶತಕವನ್ನು ಪೂರೈಸುವ ಮೂಲಕ ತಂಡದ ಮೊತ್ತ 180 ರನ್ ದಾಟಲು ನೆರವಾದರು.
A six off the final delivery from Manish Pandey, but #SRH fall short by 10 runs.@KKRiders with a comprehensive win in their first game of #VIVOIPL 2021 season.
Scorecard - https://t.co/yqAwBPCpkb #SRHvKKR pic.twitter.com/qdynz3QL2b
— IndianPremierLeague (@IPL) April 11, 2021
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಹೈದರಾಬಾದ್ ತಂಡಕ್ಕೆ ತಂಡದ ಮೊತ್ತ 10 ಆಗುವಷ್ಟರಲ್ಲಿ ಡೇವಿಡ್ ವಾರ್ನರ್ ಅವರ ವಿಕೆಟ್ ಕಳೆದು ಕೊಳ್ಳುವ ಮೂಲಕ ಆರಂಭಿಕ ಆಘಾತವನ್ನು ಅನುಭವಿಸಿತು.ಇದಾದ ನಂತರ ಬಂದಂತಹ ವ್ರುದ್ದಿಮಾನ್ ಸಹಾ ಕೂಡ ಬೇಗನೆ ವಿಕೆಟ್ ಒಪ್ಪಿಸಿದರು. ಒಂದು ಹಂತದಲ್ಲಿ ಮನೀಶ್ ಪಾಂಡೆ ಹಾಗೂ ಜಾನಿ ಬೇರ್ ಸ್ಟೋ ಕ್ರಮವಾಗಿ 61 ಹಾಗೂ 55 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ಅಂಚಿಗೆ ಕೊಂಡೋಯ್ದಿದ್ದರು.ಆದರೆ ಕೊನೆಗೆ ಹೈದರಾಬಾದ್ ತಂಡವು ಐದು ವಿಕೆಟ್ ನಷ್ಟಕ್ಕೆ 177 ರನ್ ಗಳನ್ನು ಮಾತ್ರಗಳಿಸಲು ಶಕ್ತವಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.