ನವದೆಹಲಿ: ಭಾರತದ ವಿಕೆಟ್‌ಕೀಪರ್ ಮತ್ತು ಬ್ಯಾಟ್ಸಮನ್ ದಿನೇಶ್ ಕಾರ್ತಿಕ್ ಬಹಳ ಸಮಯದಿಂದ ರಾಷ್ಟ್ರೀಯ ತಂಡದಲ್ಲಿದ್ದಾರೆ.ಅವರು 2004 ರಲ್ಲಿಯೇ ಇಂಗ್ಲೆಂಡ್ ವಿರುದ್ಧ ಅಂತರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು.ಆದರೆ ಅಂದಿನಿಂದ ಅವರು ತಂಡದಲ್ಲಿ ಸಾಕಷ್ಟು ಬಾರಿ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಆದರೆ ಇದಕ್ಕೆ ಇನ್ನೊಂದು ಪ್ರಮುಖ ಕಾರಣವಿತ್ತು, ಏಕೆಂದರೆ ಇದೆ ವೇಳೆ ಎಂ.ಎಸ್ ಧೋನಿ ಆಗಮನ ಪಾರ್ಥಿವ್ ಪಟೇಲ್ ಹಾಗೂ ದಿನೇಶ್ ಕಾರ್ತಿಕ್ ನಂತಹ ಆಟಗಾರರನ್ನು ಹಿಂದಕ್ಕೆ ತಳ್ಳುವಂತೆ ಮಾಡಿತ್ತು.
#TeamIndia comeback ✅
Motivation level 💯
His journey from India's 1st T20I to now 👌You wouldn't want to miss this special interview with @DineshKarthik. 😎 👍 #INDvSA | @Paytm
Full interview 📽️ 🔽 https://t.co/ktexXftzL0 pic.twitter.com/F5YSS6D4Qi
— BCCI (@BCCI) June 16, 2022
ಈಗ ತಮ್ಮ ಪ್ರಯಾಣದ ಕುರಿತಾಗಿ BCCI.tv ಯೊಂದಿಗೆ ಮಾತನಾಡುತ್ತಾ,"ನನ್ನನ್ನು ಹಲವು ಬಾರಿ ಕೈಬಿಡಲಾಗಿದೆ ಮತ್ತು ನಾನು ಯಾವಾಗಲೂ ಭಾರತ ತಂಡಕ್ಕೆ ಮರಳಲು ಬಯಸುತ್ತಿದ್ದೆ. ಅದು ನನ್ನ ದೊಡ್ಡ ಸಾಮರ್ಥ್ಯವಾಗಿತ್ತು. ನನ್ನಲ್ಲಿರುವ ತೀವ್ರತರ ಹಸಿವು ಒಂದು ರೀತಿ ಹಿಂದಿರುಗಲು ಬಯಸುತ್ತಿತ್ತು. ಇದಕ್ಕಾಗಿ ನಾನು ನನ್ನ ಆಟವನ್ನು ಸುಧಾರಿಸಲು ಯಾವಾಗಲೂ ಮಾರ್ಗಗಳನ್ನು ಕಂಡುಕೊಂಡಿದ್ದೇನೆ ಮತ್ತು ಆ ಪ್ರಯಾಣದಲ್ಲಿ ನಿಜವಾಗಿಯೂ ಸಹಾಯ ಮಾಡಿದ ಜನರನ್ನು ನನ್ನ ಸುತ್ತಲೂ ಹೊಂದಿದ್ದೇನೆ" ಎಂದು ಕಾರ್ತಿಕ್ ಹೇಳಿದರು.
ಇದನ್ನೂ ಓದಿ: ಕದ್ದುಮುಚ್ಚಿ ಥಿಯೇಟರ್‌ಗೆ ಬಂದು ‘ಕೆಜಿಎಫ್-2’ ನೋಡಿದ್ರಾ ನಟಿ ಸಾಯಿ ಪಲ್ಲವಿ..?
ಕ್ರಿಕೆಟ್ ಈ ಹಿಂದೆ ಇಂದಿದ್ದಕ್ಕೂ ಮತ್ತು ಈಗಿನದಕ್ಕೂ ಸಾಕಷ್ಟು ಬದಲಾವಣೆ ಇದೆ ಎಂದು ನಾನು ಭಾವಿಸುತ್ತೇನೆ.ನಾನು ಬದಲಾವಣೆಯ ಸಮಯದಲ್ಲಿ ಅದರ ಭಾಗವಾಗಿ ಅದನ್ನು ನೋಡಿದ್ದೇನೆ ಎನ್ನುವುದು ಒಂದು ರೀತಿ ವಿಶೇಷವಾಗಿದೆ, ಭಾರತ ತಂಡವನ್ನು ಈಗ ಮತ್ತೆ ಪ್ರತಿನಿಧಿಸುವುದು ಈಗ ಹೆಚ್ಚು ಅರ್ಥಪೂರ್ಣವಾಗಿದೆ, ಇಲ್ಲಿ ಇರುವುದಕ್ಕೆ ನಾನು ನಿಜಕ್ಕೂ ಅದೃಷ್ಟಶಾಲಿ' ಎಂದು ದಿನೇಶ್ ಕಾರ್ತಿಕ್ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.