ನಾನು ಕ್ರಿಕೆಟರ್ ಹೊರತು, ಮಹಿಳಾ ಕ್ರಿಕೆಟರ್ ಅಲ್ಲ- ಸ್ಮೃತಿ ಮಂಧಾನಾ

ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂಧಾನಾ ಈಗ ತಾವು ಕ್ರಿಕೆಟರ್  ಹೊರತು ಮಹಿಳಾ ಕ್ರಿಕೆಟ್ ರ ಅಲ್ಲ ಎಂದು ಹೇಳಿದ್ದಾರೆ.ಅಲ್ಲದೆ ಅಂತಹ ಯಾವುದೇ ತರದ ಲೇಬಲ್ ಗಳ ಅಗತ್ಯವಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.

Last Updated : May 8, 2019, 03:32 PM IST
ನಾನು ಕ್ರಿಕೆಟರ್ ಹೊರತು, ಮಹಿಳಾ ಕ್ರಿಕೆಟರ್ ಅಲ್ಲ- ಸ್ಮೃತಿ ಮಂಧಾನಾ title=
file photo

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂಧಾನಾ ಈಗ ತಾವು ಕ್ರಿಕೆಟರ್  ಹೊರತು ಮಹಿಳಾ ಕ್ರಿಕೆಟ್ ರ ಅಲ್ಲ ಎಂದು ಹೇಳಿದ್ದಾರೆ.ಅಲ್ಲದೆ ಅಂತಹ ಯಾವುದೇ ತರದ ಲೇಬಲ್ ಗಳ ಅಗತ್ಯವಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.

"ನಾನು ಎಂದಿಗೂ ಕೂಡ ಮಹಿಳಾ ಕ್ರಿಕೆಟ್ ಆಟಗಾರ್ತಿಯಾಗಿ ಗುರುತಿಸಿಕೊಳ್ಳಲು ಇಚ್ಚಿಸುವುದಿಲ್ಲ, ಬದಲಾಗಿ ಕ್ರಿಕೆಟ್ ರ ಆಗಿ ಗುರುತಿಸಿಕೊಳ್ಳಲು ಇಚ್ಛಿಸುವೆ. ಅಂತಹ ಲೇಬಲ್ ಗಳು ಏಕೆ ಇವೆ ಎನ್ನುವುದೇ ತಿಳಿಯುತ್ತಿಲ್ಲ "ಎಂದು ಸ್ಮೃತಿ ಮಂಧಾನಾ ಪ್ರಶ್ನಿಸಿದರು. ಮಹಾರಾಷ್ಟ್ರ ಅಂಡರ್-15 ತಂಡಕ್ಕೆ ಆಕೆಯಾದಾಗ ಅವರಿಗೆ  ಕೇವಲ 9 ವರ್ಷ. ಹೀಗೆ ಅತಿ ಕಿರಿಯ ವಯಸ್ಸಿನಲ್ಲಿಯೇ ಅವರು ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. 

ಪುರುಷ ಆಟಗಾರರ ವಿಷಯದಲ್ಲಿ ಅವರ ಪ್ರದರ್ಶನದ ಮೇಲೆ ಪ್ರಶ್ನಿಸಲಾಗುತ್ತದೆ ಆದರೆ ಅದೇ ಮಹಿಳೆ ವಿಚಾರದಲಿ ಲಿಂಗದ ಆಧಾರದ ಮೇಲೆ ಅಳೆಯಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ತಮ್ಮ ಗುರಿ ಯಾವುದೇ ಹೊಂದಾಣಿಕೆ ಇಲ್ಲದೆ ಲಿಂಗ ಆಧಾರಿತ ಸಾಮಾಜಿಕ ಸ್ಥಿತಿಗಳನ್ನು ಮೀರಿ ತಮ್ಮ ಕನಸುಗಳನ್ನು ಕಟ್ಟುವುದು ಎಂದು ತಿಳಿಸಿದರು. 

ಸ್ಮೃತಿ ಮಂಧಾನಾ ಆರಂಭಿಕ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯಾಗಿದ್ದು. 2018 ರಲ್ಲಿ 12 ಏಕದಿನ ಪಂದ್ಯದಲ್ಲಿ  669 ರನ್ ಗಳನ್ನು ಗಳಿಸಿದ್ದರು. ಈ ಪ್ರದರ್ಶನಕ್ಕಾಗಿ ಬಿಸಿಸಿಐ ಅತ್ಯುತ್ತಮ ಅಂತರಾಷ್ಟ್ರೀಯ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಪಡೆದಿದ್ದರು.

Trending News