ನಾನು ಕುಂಬ್ಳೆಗೆ ವಿಕೆಟ್ ಒಪ್ಪಿಸುವುದಿಲ್ಲ ಎಂದು ವಕಾರ್ ಗೆ ಹೇಳಿದ್ದೆ ! ..ಅಕ್ರಮ್ ಹೇಳಿದ ರೋಚಕ ಕಥೆ

1999ರಲ್ಲಿ  ಫಿರೋಜ್ ಷಾ ಕೋಟ್ಲಾ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ಅನಿಲ್ ಕುಂಬ್ಳೆ ಸಾಧಿಸಿದ 10 ವಿಕೆಟ್ ಗಳ ಮೈಲುಗಲ್ಲು ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿದೆ. ವಿಶೇಷವೆಂದರೆ ಈ ಸಾಧನೆ ಮಾಡಿದ ಕುಂಬ್ಳೆ ಎರಡೇ ಬೌಲರ್ ಆಗಿದ್ದರು.

Last Updated : May 23, 2020, 05:18 PM IST
ನಾನು ಕುಂಬ್ಳೆಗೆ ವಿಕೆಟ್ ಒಪ್ಪಿಸುವುದಿಲ್ಲ ಎಂದು ವಕಾರ್ ಗೆ ಹೇಳಿದ್ದೆ ! ..ಅಕ್ರಮ್ ಹೇಳಿದ ರೋಚಕ ಕಥೆ  title=
file photo(AFP)

ನವದೆಹಲಿ: ಅನಿಲ್ ಕುಂಬ್ಳೆ 1999ರಲ್ಲಿ ಫಿರೋಜ್ ಷಾ ಕೋಟ್ಲಾ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ಸಾಧಿಸಿದ 10 ವಿಕೆಟ್ ಗಳ ಮೈಲುಗಲ್ಲು ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿದೆ. ವಿಶೇಷವೆಂದರೆ ಈ ಸಾಧನೆ ಮಾಡಿದ ಕುಂಬ್ಳೆ ಎರಡೇ ಬೌಲರ್ ಆಗಿದ್ದರು.

ನವದೆಹಲಿಯ ಫಿರೋಜ್ ಷಾ ಕೋಟ್ಲಾದಲ್ಲಿ ನಡೆದ ಭಾರತ ವಿರುದ್ಧ ಪಾಕಿಸ್ತಾನ 2 ನೇ ಟೆಸ್ಟ್ ಪಂದ್ಯದ 2 ನೇ ಇನ್ನಿಂಗ್ಸ್‌ನಲ್ಲಿ ಅನಿಲ್ ಕುಂಬ್ಳೆ ಪಾಕಿಸ್ತಾನದ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿದರು. ಅವರು ಎಲ್ಲಾ 10 ವಿಕೆಟ್‌ಗಳನ್ನು ಪಡೆದ ಮೊದಲ ಮತ್ತು ಏಕೈಕ ಭಾರತದ ಬೌಲರ್ ಎನಿಸಿಕೊಂಡರು ಮತ್ತು 1956 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಈ ಸಾಧನೆ ಮಾಡಿದ ಇಂಗ್ಲೆಂಡ್‌ನ ಜಿಮ್ ಲೇಕರ್ ನಂತರ ವಿಶ್ವದ ಎರಡನೇ ಆಟಗಾರ. 

ಅನಿಲ್ ಕುಂಬ್ಳೆ 10 ವಿಕೆಟ್ ತೆಗೆದ ಸಂದರ್ಭದಲ್ಲಿ ಪಾಕಿಸ್ತಾನ ತಂಡದ ನಾಯಕನಾಗಿದ್ದ ವಾಸಿಮ್ ಅಕ್ರಮ್ ಈ ಸಾಧನೆ ಕುರಿತಾಗಿ ಮಾತನಾಡಿದ್ದಾರೆ.198/9 ರಲ್ಲಿ ಪಾಕಿಸ್ತಾನದೊಂದಿಗೆ, ಕುಂಬ್ಳೆ ತನ್ನ ಪರ್ಫೆಕ್ಟ್ -10 ಅನ್ನು ಪಡೆದುಕೊಳ್ಳುವುದನ್ನು ತಡೆಯಲು ಬೇರೊಬ್ಬರಿಗೆ ಔಟ್ ಆಗಬೇಕೆನ್ನುವ ಆಲೋಚನೆ ಇತ್ತು ಎಂಬ ಅಭಿಪ್ರಾಯವನ್ನು ಅಕ್ರಮ್ ತಳ್ಳಿಹಾಕಿದರು

'ಇಲ್ಲ. ಇದು ಕ್ರೀಡಾಪಟುವಿನ ಮನೋಭಾವಕ್ಕೆ ವಿರುದ್ಧವಾಗಿರಬಹುದು, ನೀವು ಸಾಮಾನ್ಯ ಕ್ರಿಕೆಟ್ ಆಡುತ್ತೀರಿ ಎಂದು ನಾನು ವಾಕರ್ ಯೂನಿಸ್‌ಗೆ ಹೇಳಿದೆ, ನಾನು ಅನಿಲ್ ಕುಂಬ್ಳೆಗೆ ಔಟಾಗುವುದಿಲ್ಲ. ನಾಯಕನಾಗಿ, ನಾನು ವಾಕರ್ ಅವರಿಗೆ ಸಾಮಾನ್ಯ ಆಟವನ್ನು ಆಡಲು ಮತ್ತು (ಜಾವಗಲ್) ಶ್ರೀನಾಥ್ ವಿರುದ್ಧ ಹೊಡೆತಗಳಿಗೆ ಹೋಗಬೇಕೆಂದು ಹೇಳಿದೆ. ಮೊದಲ ಎಸೆತ ಕುಂಬ್ಳೆ ಬೌಲ್ ಮಾಡಿದರು, ನಾನು ಸಿಕ್ಕಿಹಾಕಿಕೊಂಡೆ.ಇದು ಭಾರತ ಮತ್ತು ಕುಂಬ್ಳೆಗೆ ದೊಡ್ಡ ದಿನವಾಗಿತ್ತು. ಎಂದು ಅಕ್ರಮ್ ಆಕಾಶ್ ಚೋಪ್ರಾ ಅವರಿಗೆ ಯುಟ್ಯೂಬ್ ವಿಡಿಯೋದಲ್ಲಿ ತಿಳಿಸಿದ್ದಾರೆ.
 

Trending News