ICC Awards Of Decade: ಈ ದಶಕದ T20 ಹಾಗೂ ODI ತಂಡಕ್ಕೆ ಕ್ಯಾಪ್ಟನ್ ಕೂಲ್ MSD ನಾಯಕ

ICC Awards Of Decade:ICC ಈ ದಶಕದ ಬೆಸ್ಟ್ ತಂಡಗಳ ಘೋಷಣೆ ಮಾಡಿದೆ. ಕ್ಯಾಪ್ಟನ್ ಕೂಲ್ MS Dhoni T20 ಹಾಗೂ ODI ಎರಡು ತಂಡಗಳಿಗೆ ನಾಯಕರಾಗಿ ಆಯ್ಕೆಯಾಗಿದ್ದಾರೆ.

Written by - Nitin Tabib | Last Updated : Dec 27, 2020, 05:56 PM IST
  • MSDಗೆ ಗೌರವ ಸಲ್ಲಿಸಿದ ICC.
  • ಈ ದಶಕದ ODI ಹಾಗೂ T20 ತಂಡಗಳ ನಾಯಕರಾಗಿ ಕ್ಯಾಪ್ಟನ್ ಕೂಲ್ ಆಯ್ಕೆ.
  • ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೂ ಕೂಡ ತಂಡದಲ್ಲಿ ಸ್ಥಾನ.
ICC Awards Of Decade: ಈ ದಶಕದ T20 ಹಾಗೂ ODI ತಂಡಕ್ಕೆ ಕ್ಯಾಪ್ಟನ್ ಕೂಲ್ MSD ನಾಯಕ title=
ICC Awards Of Decades (File Photo)

ನವದೆಹಲಿ: ICC Awards Of Decade - ಭಾರತೀಯ ತಂಡದ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಈ ವರ್ಷದ ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ್ದಾರೆ. ಟೀಮ್ ಇಂಡಿಯಾ ಅವರ ನಾಯಕತ್ವದಲ್ಲಿ ಒತ್ತು ಎರಡು ವಿಶ್ವಕಪ್ ಗೆದ್ದಿದೆ ಮತ್ತು ಐಸಿಸಿ ಅವರ ಅವರ ಈ ಸಾಧನೆಯನ್ನು ಗೌರವಿಸಿದೆ.

ICC ಈ ದಶಕದ ಏಕದಿನ ತಂಡದ ನಾಯಕ MSD
28 ವರ್ಷಗಳ ಬಳಿಕ ಭಾರತಕ್ಕೆ ಏಕದಿನ ವಿಶ್ವಕಪ್ ತಂದುಕೊಟ್ಟ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ (MS Dhoni) ಅವರನ್ನು ಈ ದಶಕದ 50 ಓವರ್‌ಗಳ ತಂಡದ ನಾಯಕರಾಗಿ ಐಸಿಸಿ ನೇಮಕ ಮಾಡಿದೆ. ಧೋನಿ ಹೊರತಾಗಿ ಈ ತಂಡದಲ್ಲಿ ಇನ್ನೂ ಇಬ್ಬರು ಭಾರತೀಯರಿದ್ದಾರೆ. ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಅವರು ಕೂಡ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇವರುಗಳ ಜೊತೆಗೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಹಾಗೂ ಮಿಷೆಲ್ ಸ್ಟಾರ್ಕ್ ಕೂಡ ಈ ತಂಡಕ್ಕೆ ಆಯ್ಕೆಯಾಗಿದ್ದಾರೆ. ಬಾಂಗ್ಲಾದೇಶದ ಶಾಕೀಬ್ ಅಲ್ ಹಸನ್ ಹಾಗೂ ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ ಈ ಇಬ್ಬರು ಆಲ್ ರೌಂಡರ್ ಗಳು ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಇಮ್ರಾನ್ ತಾಹಿರ್ ತಂಡದ ಎರಡನೇ ಸ್ಪಿನ್ನರ್ ಆಗಿದ್ದಾರೆ.

ಇದನ್ನು ಓದಿ- ಜನಪ್ರಿಯತೆಯಲ್ಲಿ ಧೋನಿ ಸಚಿನ್ ಮತ್ತು ಕೊಹ್ಲಿಯನ್ನು ಮೀರಿಸಿದ್ದಾರೆ-ಸುನಿಲ್ ಗವಾಸ್ಕರ್

ದಕ್ಷಿಣ ಆಫ್ರಿಕಾದ AB ಡಿವಿಲಿಯರ್ಸ್ ಕೂಡ ತಂಡದಲ್ಲಿ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನ್ಯೂಜಿಲೆಂಡ್ ತಂಡದ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಕೂಡ ತಂಡದಲ್ಲಿ ಶಾಮೀಲಾಗಿದ್ದಾರೆ.

T20 ತಂಡದ ನಾಯಕನಾಗಿ ಕ್ಯಾಪ್ಟನ್ ಕೂಲ್ ಆಯ್ಕೆ
ICC ಈ ದಶಕದ ಪುರುಷರ ಟಿ20 ತಂಡದ ನಾಯಕನಾಗಿಯೂ ಕೂಡ ಮಹೇಂದ್ರ ಸಿಂಗ್ ಧೋನಿ ಅವರನ್ನು ಆಯ್ಕೆ ಮಾಡಿದೆ. ಈ ತಂಡದಲ್ಲಿ ಭಾರತೀಯ ಕ್ರಿಕೆಟ್ ಆಟಗಾರರಾಗಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ವಿರಾಟ್ ಕೊಹ್ಲಿ ಕೂಡ ಶಾಮೀಲಾಗಿದ್ದಾರೆ. ದಕ್ಷಿಣ ಆಫ್ರಿಕಾದ ಅಬ್ರಹಾಂ ಡಿವಿಲಿಯರ್ಸ್ ಹಾಗೂ ವೆಸ್ಟ್ ಇಂಡೀಸ್ ತಂಡದ ಕೆರನ್ ಪೋಲಾರ್ಡ್ ಸೇರಿದಂತೆ ಕ್ರಿಸ್ ಗೈಲ್ ಕೂಡ ಈ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅಫ್ಘಾನಿಸ್ತಾನ್ ದ ಲೆಗ್ ಸ್ಪಿನ್ನರ್ ರಾಶಿದ್ ಖಾನ್ ಈ ತಂಡದ ಏಕೈಕ ಸ್ಪಿನ್ನರ್ ಆಗಿದ್ದಾರೆ.

ಇದನ್ನು ಓದಿ- IPL 2020: ಐಪಿಎಲ್ ನಲ್ಲಿ ನೂತನ ದಾಖಲೆ ನಿರ್ಮಿಸಿದ ಎಂ.ಎಸ್ ಧೋನಿ

ICCಯ ಈ ದಶಕದ ODI ತಂಡ ಇಂತಿದೆ
ಮಹೇಂದ್ರ ಸಿಂಗ್ ಧೋನಿ (ನಾಯಕ), ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಅಬ್ರಹಾಂ ಡಿವಿಲಿಯರ್ಸ್, ಶಾಕಿಬ್ ಅಲ್ ಹಸನ್, ಬೆನ್ ಸ್ಟೋಕ್ಸ್, ಮಿಷೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್, ಇಮ್ರಾನ್ ತಾಹೀರ್, ಲಸಿತ್ ಮಲಿಂಗಾ 

ಇದನ್ನು ಓದಿ- MSD Retires: BCCI ಹಾಗೂ ಅಧ್ಯಕ್ಷ Sourav Ganguly ಹೇಳಿದ್ದೇನು?

ICCಯ ದಶಕದ ಪುರುಷರ ಟಿ20 ತಂಡ ಇಂತಿದೆ
ಮಹೇಂದ್ರ ಸಿಂಗ್ ಧೋನಿ (ನಾಯಕ), ಡೇವಿಡ್ ವಾರ್ನರ್, ರೋಹಿತ್ ಶರ್ಮಾ, ಕ್ರಿಸ್ ಗೈಲ್,  ಎರೋನ್ ಫಿಂಚ್, ವಿರಾಟ್ ಕೊಹ್ಲಿ, ಅಬ್ರಹಾಂ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ವೆಲ್, ಕೆರಾನ್ ಪೋಲಾರ್ಡ್, ರಾಶೀದ್ ಖಾನ್, ಜಸ್ಪ್ರೀತ್ ಬುಮ್ರಾ, ಲಸಿತ್ ಮಲಿಂಗಾ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News