ನವದೆಹಲಿ: ಕಾರ್ಡಿಫ್ ನ ಸೋಫಿಯಾ ಗಾರ್ಡನ್ ನಲ್ಲಿ ವಿಶ್ವಕಪ್ ಟೂರ್ನಿ ಅಂಗವಾಗಿ ನಡೆದ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡು ಲಂಕಾ ತಂಡವು ಕೇವಲ 136 ರನ್ ಗಳಿಗೆ ಆಲೌಟ್ ಮಾಡಿದೆ.
New Zealand need 137 to win their #CWC19 opener!#DimuthKarunaratne carried his bat and scored a fighting half-century, but the rest of the line-up crumbled and they were shot out for 136.
Do you #BACKTHEBLACKCAPS to chase this down?#NZvSL LIVE 👇 https://t.co/ioG8yDOSD7 pic.twitter.com/p82xIZUBu7
— ICC (@ICC) June 1, 2019
ಮೊದಲು ಬ್ಯಾಟಿಂಗ್ ಆರಂಭಿಸಿದ ಲಂಕಾ ತಂಡಕ್ಕೆ ಆರಂಭದಲ್ಲಿಯೇ ಆಘಾತವೆರಗಿ ಬಂದಿತು. 4 ರನ್ ಆಗುವಷ್ಟರಲ್ಲಿ ಲಹಿರು ತಿರಿಮನ್ನೇ ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟವನ್ನು ಅನುಭವಿಸಿತು.ಎರಡನೇ ವಿಕೆಟ್ ಗೆ ಉತ್ತಮ ಜೊತೆಯಾಟದ ಭರವಸೆ ಬಂದರೂ ಕೂಡ ಆಗ ಕುಸಾಲ್ ಮೆಂಡಿಸ್ ಅವರು ಗುಪ್ತಿಲ್ ಅವರಿಗೆ ವಿಕೆಟ್ ಒಪ್ಪಿಸಿದರು. ಇದಾದ ನಂತರ ಲಂಕಾದ ಬ್ಯಾಟ್ಸ್ ಗಳು ಪೆರೇಡ್ ನಂತೆ ವಿಕೆಟ್ ಒಪ್ಪಿಸಿದರು. ಕೇವಲ 60 ರನ್ ಗಳು ಆಗುವಷ್ಟರಲ್ಲಿ 6 ವಿಕೆಟ್ ಗಳನ್ನು ಲಂಕಾ ಕಳೆದು ಕೊಂಡಿತು.
3️⃣ - Matt Henry
2️⃣ - Lockie Ferguson
1️⃣ - Colin de Grandhomme
0️⃣ - Trent BoultNew Zealand are dominant at Cardiff, with Sri Lanka 68/6 after 16 overs, and their attack leader hasn't even taken a wicket yet!#NZvSL LIVE 👇 https://t.co/ioG8yDOSD7 pic.twitter.com/naL9CBb1yi
— ICC (@ICC) June 1, 2019
ಲಂಕಾದ ಪರವಾಗಿ ದಿಮುತ್ ಕರುನಾರತ್ನೆ ಕೊನೆಯವರೆಗೆ ಅಜೇಯರಾಗಿ ಏಕಾಂಗಿ ಹೋರಾಟ ನಡೆಸಿದರಾದರೂ ಸಹ ಆಟಗಾರರ ಯಾವುದೇ ಸಾಥ್ ನೀಡಲಿಲ್ಲ. ಇನ್ನೊಂದೆಡೆಗೆ ನ್ಯೂಜಿಲೆಂಡ್ ನ ಮ್ಯಾಟ್ ಹೆನ್ರಿ ಹಾಗೂ ಲಕಿ ಫಾರ್ಗುಶನ್ ತಲಾ ಮೂರು ವಿಕೆಟ್ ಗಳನ್ನು ಪಡೆಯುವ ಮೂಲಕ ಲಂಕಾದ ರನ್ ಗತಿಗೆ ಕಡಿವಾಣ ಹಾಕಿದರು.