T20 World Cup 2021 : ಎದುರು ಬದುರಾಗಲಿದೆ ಭಾರತ ಪಾಕಿಸ್ತಾನ , ಯಾವ ಗ್ರೂಪ್ ನಲ್ಲಿ ಯಾವ ತಂಡ ಸಂಪೂರ್ಣ ಮಾಹಿತಿ ಇಲ್ಲಿದೆ

T20  World Cup 2021 :ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ಯುಎಇಯಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ನ ಗ್ರೂಪ್ ಅನ್ನು ಐಸಿಸಿ (ICC) ಪ್ರಕಟಿಸಿದೆ. ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಗ್ರೂಪ್ ನಲ್ಲಿ ಇರಿಸಲಾಗಿದೆ.

Written by - Ranjitha R K | Last Updated : Jul 16, 2021, 05:50 PM IST
  • ನಡೆಯಲಿದೆ ಭಾರತ-ಪಾಕಿಸ್ತಾನ ನಡುವೆ ಪಂದ್ಯ
  • ಟಿ 20 ಡಬ್ಲ್ಯೂಸಿ ಒಂದೇ ಗುಂಪಿನಲ್ಲಿ ಎರಡೂ ತಂಡಗಳು
  • ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ಡಬ್ಲ್ಯೂಸಿ
T20  World Cup 2021 : ಎದುರು ಬದುರಾಗಲಿದೆ ಭಾರತ ಪಾಕಿಸ್ತಾನ , ಯಾವ ಗ್ರೂಪ್ ನಲ್ಲಿ ಯಾವ ತಂಡ ಸಂಪೂರ್ಣ ಮಾಹಿತಿ ಇಲ್ಲಿದೆ   title=
T20 World Cup 2021 (photo zee news)

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಬಯಸುವ ಅಭಿಮಾನಿಗಳಿಗೆ ಸಿಹಿ ಸುದ್ದಿ ಇದೆ. ಟಿ 20 ವಿಶ್ವಕಪ್‌ಗಾಗಿ (T20 World Cup) ಐಸಿಸಿ ಎಲ್ಲಾ ಪ್ಲಾನ್ ಸಿದ್ದಗೊಳಿಸಿದೆ. ಇದರ ಪ್ರಕಾರ ಎರಡೂ ದೇಶಗಳ ತಂಡಗಳು ಎದುರು ಬದುರಾಗಲಿದೆ. 

ಒಂದೇ ಗ್ರೂಪ್ ನಲ್ಲಿದೆ ಭಾರತ ಮತ್ತು ಪಾಕಿಸ್ತಾನ : 
ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ಯುಎಇಯಲ್ಲಿ (UAE) ನಡೆಯಲಿರುವ ಟಿ 20 ವಿಶ್ವಕಪ್ ನ ಗ್ರೂಪ್ ಅನ್ನು ಐಸಿಸಿ (ICC) ಪ್ರಕಟಿಸಿದೆ. ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಗ್ರೂಪ್ ನಲ್ಲಿ ಇರಿಸಲಾಗಿದೆ.

ಇದನ್ನೂ ಓದಿ : Tokyo Olympics:ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಸ್ ಚಾಲಕನ ಮಗಳ ಜಿಮ್ನಾಸ್ಟಿಕ್ಸ್‌ನ ಮ್ಯಾಜಿಕ್, ಈಡೇರಲಿದೆಯೇ ಪದಕದ ಕನಸು?

 
ಗ್ರೂಪ್ 1 ರಲ್ಲಿ ಹಾಲಿ ಚಾಂಪಿಯನ್ :

 '2021 ರ ಮಾರ್ಚ್ 20 ರವರೆಗೆ ಶ್ರೇಯಾಂಕದ ಆಧಾರದ ಮೇಲೆ ಗ್ರೂಪ್ ನಲ್ಲಿ ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ಐಸಿಸಿ ಹೇಳಿದೆ.  ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾವನ್ನು  ಗ್ರೂಪ್ -1 ರಲ್ಲಿ ಇರಿಸಲಾಗಿದೆ. ರೌಂಡ್ ಒನ್ ಅರ್ಹತಾ ಪಂದ್ಯಗಳ 2 ತಂಡಗಳನ್ನು ಇದರಲ್ಲಿ ಸೇರಿಸಲಾಗುವುದು.

ಗುಂಪು -2 ರಲ್ಲಿ ಭಾರತ -ಪಾಕ್ :
ಗ್ರೂಪ್ -2 ರಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು (India -Pakistan) ಹೊರತುಪಡಿಸಿ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನವನ್ನು ಇರಿಸಲಾಗಿದೆ. ಇಲ್ಲಿ ಸಹ ರೌಂಡ್ ಒನ್ ಅರ್ಹತಾ ಪಂದ್ಯಗಳ 2 ತಂಡಗಳಿಗೆ ಸ್ಥಾನ ನೀಡಲಾಗುವುದು.

 
2019 ರ ಜೂನ್ 16 ರಂದು ಐಸಿಸಿ ವಿಶ್ವಕಪ್‌ನಲ್ಲಿ (Icc worldcup) ಭಾರತ ಮತ್ತು ಪಾಕಿಸ್ತಾನ ಕೊನೆಯ ಬಾರಿಗೆ ಪರಸ್ಪರ ಎದುರಾಗಿತ್ತು.  ಮ್ಯಾಂಚೆಸ್ಟರ್‌ನ ಓಲ್ಡ್ ಟ್ರ್ಯಾಫರ್ಡ್‌ನಲ್ಲಿ ಆಡಿದ ಈ ಏಕದಿನ ಪಂದ್ಯವನ್ನು ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ ನಿರ್ಧರಿಸಲಾಯಿತು. ಇದರಲ್ಲಿ ಭಾರತ ಪಾಕಿಸ್ತಾನವನ್ನು 89 ರನ್‌ಗಳಿಂದ ಸೋಲಿಸಿತ್ತು.

ಇದನ್ನೂ ಓದಿ : ರಿಶಬ್ ಪಂತ್ ನಂತರ ಸಹಾಯಕ ಸಿಬ್ಬಂದಿಯೊಬ್ಬರಿಗೆ ಕೊರೊನಾ ಧೃಢ

 ಸಂತೋಷ ವ್ಯಕ್ತಪಡಿಸಿದ ಐಸಿಸಿ
ಐಸಿಸಿ ಕಾರ್ಯವಾಹಕ ಅಧ್ಯಕ್ಷ ಜೆಫ್ ಅಲ್ಲಾರ್ಡಿಸ್, 'ಐಸಿಸಿ ಟಿ 20 ವಿಶ್ವಕಪ್ 2021 ರ ಗ್ರೂಪ್ ಗಳನ್ನು ಘೋಷಿಸಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದೆ. ಜಾಗತಿಕ ಸಾಂಕ್ರಾಮಿಕ ನಂತರ ನಡೆಯುತ್ತಿರುವ  ಮೊದಲ ಮಲ್ಟಿ ಟೀಂ ಇದಾಗಲಿದೆ. 

ಗಂಗೂಲಿ ಮಾತು : 
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಮಾತನಾಡಿ,  ವಿಶ್ವ ಕ್ರಿಕೆಟ್‌ನ ಚೌಕಟ್ಟಿನಲ್ಲಿ ಒಮನ್ ಅನ್ನು ಸೇರಿಸಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ದೇಶ ಐಸಿಸಿ ಟಿ 20 ವಿಶ್ವಕಪ್‌ ಆತಿಥ್ಯ ವಹಿಸುತ್ತಿದೆ. ಇದರಿಂದ ಕ್ರಿಕೆಟ್ ಬಗ್ಗೆ ಯುವಕರ ಆಸಕ್ತಿ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News