ICC World Cup 2023: ಕೊನೆಯ ಕ್ಷಣದಲ್ಲಿ ದೊಡ್ಡ ಬದಲಾವಣೆ, ಗಾಯಾಳು ಔಟ್, ಬದಲಿ ಆಟಗಾರ ಇನ್!

Australia vs India: ಆಸ್ಟ್ರೇಲಿಯಾ ತಮ್ಮ ತಂಡದಲ್ಲಿ ಗಾಯಗೊಂಡಿದ್ದ ಆಷ್ಟನ್ ಅಗರ್ ಬದಲಿಗೆ ಬೇರೆ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಆಸೀಸ್ ಇದೀಗ ತನ್ನ 15 ಸದಸ್ಯರ ತಂಡದಲ್ಲಿ ಮಾರ್ನಸ್ ಲ್ಯಾಬುಶೇನ್‍ಗೆ ಅವಕಾಶ ನೀಡಿದೆ.

Written by - Puttaraj K Alur | Last Updated : Sep 28, 2023, 09:25 PM IST
  • ಕೊನೆಯ ಕ್ಷಣದಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ದೊಡ್ಡ ಬದಲಾವಣೆ
  • ಗಾಯಗೊಂಡಿದ್ದ ಆಷ್ಟನ್ ಅಗರ್ ಬದಲಿಗೆ ಮಾರ್ನಸ್ ಲ್ಯಾಬುಶೇನ್‍ಗೆ ಅವಕಾಶ
  • ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಮೊದಲ ಪಂದ್ಯ ಅ.8ರಂದು ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ
ICC World Cup 2023: ಕೊನೆಯ ಕ್ಷಣದಲ್ಲಿ ದೊಡ್ಡ ಬದಲಾವಣೆ, ಗಾಯಾಳು ಔಟ್, ಬದಲಿ ಆಟಗಾರ ಇನ್! title=
ಆಸ್ಟ್ರೇಲಿಯಾ ತಂಡದಲ್ಲಿ ದೊಡ್ಡ ಬದಲಾವಣೆ!

ನವದೆಹಲಿ: ಕ್ರಿಕೆಟ್‌ನ ಮಹಾಕುಂಭ ಅಂದರೆ ಏಕದಿನ ವಿಶ್ವಕಪ್ ಮುಂದಿನ ತಿಂಗಳಿನಿಂದ ಆರಂಭವಾಗಲಿದೆ. ಅಕ್ಟೋಬರ್ 5ರಿಂದ ಟೂರ್ನಿ ಆರಂಭವಾಗಲಿದೆ. ಈ ಐಸಿಸಿ ಟೂರ್ನಿಗಾಗಿ ಬಲಿಷ್ಠ ತಂಡವೊಂದರಲ್ಲಿ ಕೊನೆಯ ಕ್ಷಣದಲ್ಲಿ ದೊಡ್ಡ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಹೀಗಾಗಿ ಆ ತಂಡದ ಕ್ರಿಕೆಟ್ ಮಂಡಳಿಯು ಗುರುವಾರ ಬದಲಿ ಆಟಗಾರನನ್ನು ಘೋಷಿಸಿದೆ. ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಮೊದಲ ಪಂದ್ಯ ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ.  

ಗಾಯಾಳುವಿನ ಬದಲಿ ಆಟಗಾರ ತಂಡಕ್ಕೆ!  

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯವು ಅಕ್ಟೋಬರ್ 8ರಂದು ಚೆನ್ನೈನಲ್ಲಿ ನಡೆಯಲಿದೆ. ಏತನ್ಮಧ್ಯೆ ಗುರುವಾರ ಆಸ್ಟ್ರೇಲಿಯಾ ತಮ್ಮ ತಂಡದಲ್ಲಿ ಗಾಯಗೊಂಡಿದ್ದ ಆಷ್ಟನ್ ಅಗರ್ ಬದಲಿಗೆ ಬೇರೆ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಆಸೀಸ್ ಇದೀಗ ತನ್ನ 15 ಸದಸ್ಯರ ತಂಡದಲ್ಲಿ ಮಾರ್ನಸ್ ಲ್ಯಾಬುಶೇನ್‍ಗೆ ಅವಕಾಶ ನೀಡಿದೆ. ಕ್ರಿಕೆಟ್ ಆಸ್ಟ್ರೇಲಿಯಾ (CA) ಪ್ರಕಟಿಸಿದ ಆರಂಭಿಕ ತಂಡದಲ್ಲಿ ಇದು ಏಕೈಕ ಬದಲಾವಣೆಯಾಗಿದೆ. ವಿಧ್ವಂಸಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅವರು ಗಾಯಗೊಂಡಿದ್ದರೂ ಸಹ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಪಂದ್ಯಾವಳಿಯ ಮಧ್ಯದಲ್ಲಿ ಅವರು ಲಭ್ಯವಿರುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಕಿರಿಯ ವಯಸ್ಸಿನಲ್ಲಿಯೇ ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆಟಗಾರ !ದಿಢೀರ್ ನಿರ್ಧಾರಕ್ಕೆ ಇದೇ ಕಾರಣ !

ಭಾರತದ ವಿರುದ್ಧ ಸರಣಿ ಆಡಿರಲಿಲ್ಲ

ಸೆಪ್ಟೆಂಬರ್ 6ರಂದು ಘೋಷಿಸಲಾದ ಆಸೀಸ್‍ನ ಪ್ರಾಥಮಿಕ ತಂಡದಲ್ಲಿ ಎಡಗೈ ಸ್ಪಿನ್ನರ್ ಆಷ್ಟನ್ ಅಗರ್ ಇಬ್ಬರು ಮುಂಚೂಣಿ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿ ಆಯ್ಕೆಯಾದರು. ಅವರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಗಾಯಗೊಂಡಿದ್ದರು. ಇದಲ್ಲದೆ ಈ ಆಟಗಾರ ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಿಂದ ತವರಿಗೆ ಮರಳಿದ್ದರು. ನಂತರ ಅವರು ಭಾರತದಲ್ಲಿ ಆಡಿದ 3 ಪಂದ್ಯಗಳ ಏಕದಿನ ಸರಣಿ ಆಡುವ ಅವಕಾಶದಿಂದ ವಂಚಿತರಾದರು.   

ವಿಶ್ವಕಪ್‌ ಟೂರ್ನಿಗೆ ಆಸ್ಟ್ರೇಲಿಯಾದ 15 ಸದಸ್ಯರ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್‍, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಸೀನ್ ಅಬಾಟ್, ಅಲೆಕ್ಸ್ ಕ್ಯಾರಿ, ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಆಡಮ್ ಝಂಪಾ.

ಇದನ್ನೂ ಓದಿ: IND vs AUS: ಏಕದಿನ ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ಕೊಹ್ಲಿ, ರಿಕಿ ಪಾಂಟಿಂಗ್ ದಾಖಲೆ ಉಡೀಸ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News